CrimeNational

ಹಾಸ್ಟೆಲ್‌ನಲ್ಲಿ ಇದೆಲ್ಲಾ ನಡೆಯುತ್ತಾ..?; ದಾಳಿ ನಡೆಸಿದ ಅಧಿಕಾರಿಗಳಿಗೇ ಶಾಕ್‌!

ಹೈದರಾಬಾದ್‌; ಹೈದರಾಬಾದ್‌ನಲ್ಲಿ ಡ್ರಗ್ಸ್‌ ದಂಧೆಗೆ ಬ್ರೇಕ್‌ ಹಾಕೋದಕ್ಕೆ ಅಬಕಾರಿ ಇಲಾಖೆ ಹಾಗೂ ಟಾಸ್ಕ್‌ ಫೋರ್ಸ್‌ ಟೊಂಕ ಕಟ್ಟಿ ನಿಂತಿವೆ.. ನಿನ್ನೆಯವರೆಗೂ ಪಬ್‌ಗಳು, ಶಿಕ್ಷಣ ಸಂಸ್ಥೆಗಳು, ಐಟಿ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿತ್ತು.. ಇದೀಗ, ಹಾಸ್ಟೆಲ್‌ಗಳ ಮೇಲೂ ದಾಳಿ ನಡೆದಿದೆ.. ಈ ವೇಳೆ ಹಾಸ್ಟೆಲ್‌ ಕೊಠಡಿಗಳಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ.. ಯಾಕಂದ್ರೆ ಹಾಸ್ಟೆಲ್‌ ಒಂದರಲ್ಲಿ ಡ್ರಗ್ಸ್‌, ಗಾಂಜಾ ಎಲ್ಲವೂ ಸಿಕ್ಕಿದೆ..

ಇದನ್ನೂ ಓದಿ; ವರ್ಗಾವಣೆಯಾಗಿದ್ದ ಪಿಎಸ್‌ಐ ಪರಶುರಾಮ್‌ ಮೃತಪಟ್ಟಿದ್ದು ಹೇಗೆ..?; ಶಾಸಕನ ಮೇಲೆ ಆರೋಪ ಏನು..?

ಹೈದರಾಬಾದ್‌ನ ಎಸ್‌ಆರ್‌ನಗರ ಬಾಲಕರ ಹಾಸ್ಟೆಲ್‌ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.. ಈ ವೇಳೆ 250 ಗ್ರಾಂ ಗಾಂಜಾ ಮತ್ತು 115 ಗ್ರಾಂ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂವರು ಯುವಕರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.. ಎಸ್‌ಆರ್‌ನಗರ ಹಾಸ್ಟೆಲ್‌ನಲ್ಲಿದ್ದುಕೊಂಡು ಹಲವು ವರ್ಷಗಳಿಂದ ಡ್ರಗ್ಸ್‌ ಸಪ್ಲೈ ಮಾಡುವ ಕೆಲಸ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.. ಇತ್ತೀಚೆಗಷ್ಟೇ ಮಾದಾಪುರದಲ್ಲಿ ರೇವ್‌ ಪಾರ್ಟಿಯೊಂದು ನಡೆದಿತ್ತು.. ಈ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಹಾಸ್ಟೆಲ್‌ನಲ್ಲಿ ತಪಾಸಣೆ ನಡೆಸಲಾಗಿದೆ..

ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಆದಾಯ; ಜುಲೈನಲ್ಲಿ 125 ಕೋಟಿ ರೂ. ಹುಂಡಿನ ಹಣ ಸಂಗ್ರಹ

ತೆಲಂಗಾಣದ ಅಬಕಾರಿ ಜಾರಿ ನಿರ್ದೇಶಕ ಕಮಲಸನ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.. ಕೆಲ ದಿನಗಳ ಹಿಂದೆ ಮಾದಾಪುರದ ಕ್ಲೌಡ್‌ನೈನ್ ಅಪಾರ್ಟ್‌ಮೆಂಟ್‌ನಲ್ಲಿ ರೇವ್ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿ 20 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಇವರ ವಿಚಾರಣೆ ನಡೆಸಿದಾಗ ಎಸ್‌ಆರ್‌ನಗರದ ಹಾಸ್ಟೆಲ್ ನಲ್ಲಿ ನಡೆಯುತ್ತಿದ್ದ ದಂಧೆ ಬಗ್ಗೆ ಮಾಹಿತಿ ಸಿಕ್ಕಿತ್ತು..
ಬಳಿಕ ಬಾಲಕರ ವಸತಿ ನಿಲಯದಲ್ಲಿ ಅಬಕಾರಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೂವರ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಚಿತ್ತೂರಿನ ಭಾರಿ ಮತ್ತು ಲೋಕೇಶ್ ಸೇರಿ ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಕಮಲಾಸನ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ; ವಯನಾಡು ದುರಂತ; ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Share Post