BengaluruCrime

ಮಹಿಳೆ ಮೇಲೆ ಊಬರ್‌ ಚಾಲಕ ಹಲ್ಲೆ; ಕೇಸ್‌ ದಾಖಲು

ಬೆಂಗಳೂರು; ಓಲಾ, ಊಬರ್‌ ಚಾಲಕರು ಗ್ರಾಹಕರ ಜೊತೆ ದುರ್ವರ್ತನೆ ತೋರುವ ಘಟನೆಗಳನ್ನು ಬೆಂಗಳೂರಿನಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅದೇ ರೀತಿ ಊಬರ್‌ ಚಾಲಕನೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಂಗಳೂರಿನ ಬೆಳ್ಳಂದೂರು ಬಳಿಯ ಬೋಗನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಮಹಿಳೆಯೊಬ್ಬರು ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಊಬರ್‌ ಕ್ಯಾಬ್‌ ಬುಕ್‌ ಮಾಡಿದ್ದಾರೆ. ಅದರಂತೆ ಮನೆಯ ಬಳಿ ಕ್ಯಾಬ್‌ ಒಂದು ಬಂದಿದೆ. ಅದೇ ಕ್ಯಾಬ್‌ ಎಂದು ತಿಳಿದು ಹತ್ತಿದ್ದಾರೆ. ಆದ್ರೆ ಬುಕ್‌ ಮಾಡದ ಕ್ಯಾಬ್‌ ಅದಲ್ಲ ಎಂದು ತಿಳಿದು ಕೆಳಗಿಳಿಯಲು ಹೋಗಿದ್ದಾರೆ. ಈ ವೇಳೆ ಕ್ಯಾಬ್‌ ಚಾಲಕ ಮಹಿಳೆ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಚಾಲಕ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ವೇಳೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಮಹಿಳೆಯ ನೆರವಿಗೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಬೆಳ್ಳಂದೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Share Post