20 ಸೆಕೆಂಡ್ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!
ಬೆಂಗಳೂರು; ಒಂದು ಪ್ರೀತಿಯ ಅಪ್ಪುಗೆ ನಮ್ಮ ಮನಸ್ಸಿಗೆ ಎಷ್ಟೊಂದು ಸಂತೋಷ ಕೊಡುತ್ತದೆ ಅಲ್ಲವೇ.. ಅದೂ ಕೂಡಾ ನಮ್ಮ ಪ್ರೀತಿ ಪಾತ್ರರು ಒಂದು ಕ್ಷಣ ನಮ್ಮನ್ನು ಅಪ್ಪಿಕೊಂಡರೆ ನಮ್ಮ ಉತ್ಸಾಹ ಹಾಗೂ ಖುಷಿ ಮತ್ತಷ್ಟು ಹೆಚ್ಚಾಗುತ್ತದೆ.. ಅದ್ರಲ್ಲೂ ನಾವು ದುಃಖದಲ್ಲಿದ್ದಾಗ ಯಾರಾದರೂ ನಮ್ಮನ್ನು ಅಪ್ಪಿಕೊಂಡು ಸಮಾಧಾನ ಹೇಳಿದರೆ, ನಮ್ಮ ದುಃಖವೇ ಮಾಯವಾಗಿಬಿಡುತ್ತದೆ.. ಮನಸ್ಸು ನಿರಾಳವಾಗುತ್ತದೆ.. ಹೀಗಾಗಿ, ಒಂದು ಹಗ್ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದಂತೆ.. ಮಾನಸಿಕವಾಗಿ ನಮಗೆ ಧೈರ್ಯ ತುಂಬುತ್ತದಂತೆ.. 20 ಸೆಕೆಂಡ್ ಅಪ್ಪಿಕೊಳ್ಳುವುದರಿಂದ ನಮಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ ಅಂತ ವೈದ್ಯರು ಹೇಳುತ್ತಾರೆ.. ಅವು ಯಾವುವು..? ನೋಡೋಣ ಬನ್ನಿ..
ಇದನ್ನೂ ಓದಿ; ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!
ಒಂದು ಅಪ್ಪುಗೆ ನಮ್ಮ ಮಾನಸಿಕ ಒತ್ತಡ ಹೋಗಲಾಡಿಸುತ್ತೆ;
ಹಗ್ ಅನ್ನೋದು ಪ್ರೀತಿಯನ್ನು ಹಂಚೋದು.. ಒಂದು ಅಪ್ಪುಗೆ ನಮ್ಮ ದುಃಖಕ್ಕೆ ಸಾಂತ್ವನ ನೀಡುತ್ತೆ.. ಅಪ್ಪಿಕೊಂಡಾಗ ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತೆ.. ಇದನ್ನು ಲವ್ ಹಾರ್ಮೋನ್ ಅಥವಾ ಕಡ್ಲ್ ಹಾರ್ಮೋನ್ ಅಂತಾರೆ. ಈ ಆಕ್ಸಿಟೋಸಿನ್ ಹಾರ್ಮೋನ್ ನಮ್ಮಲ್ಲಿ ಒತ್ತಡ, ಆತಂಕ ಕಡಿಮೆ ಮಾಡುತ್ತದೆ. ನಮ್ಮ ಮನಸ್ಸನ್ನು ರಿಲ್ಯಾಕ್ಸ್ ಮಾಡಿ ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ.. ಹೀಗಾಗಿ, ಒಂದು 20 ಸೆಕೆಂಡ್ ಹಗ್ ಯಾರನ್ನೇ ಆದರೂ ಖುಷಿಪಡಿಸುತ್ತೆ.. ಎಂತಹ ಒತ್ತಡವನ್ನೇ ಆದರೂ ನಿವಾರಿಸುತ್ತೆ..
ಇದನ್ನೂ ಓದಿ; ನಿಮ್ಮಲ್ಲಿ ಈ ಲಕ್ಷಣ ಕಂಡುಬಂದರೆ ಅದು ಕಿಡ್ನಿ ಸಮಸ್ಯೆ ಇರಬಹುದು!
ಸಂಬಂಧವನ್ನು ಹೆಚ್ಚು ಬಲಗೊಳಿಸುವ ಅಪ್ಪುಗೆ;
ಎಂತಹ ಮನಸ್ತಾಪಗೇ ಆಗಿರಲಿ, ಒಂದು ಸಣ್ಣ ಹಗ್ ಮಾಡಿಕೊಂಡರೆ ಅವೆಲ್ಲಾ ಮಾಯವಾಗುತ್ತವೆ.. ಹೀಗಾಗಿಯೇ ಸಂಧಾನ ಸಮಯದಲ್ಲಿ ಅಪ್ಪುಗೆ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ.. ಗಂಡ-ಹೆಂಡತಿ ನಡುವೆ ಎಷ್ಟೇ ಜಗಳವಾದರೂ ಕೊನೆಗೂ ಇಬ್ಬರೂ ಒಮ್ಮೆ ಅಪ್ಪಿಕೊಂಡುಬಿಟ್ಟರೆ ಎಲ್ಲಾ ಸಮಸ್ಯೆಯೂ ಮಾಯವಾಗುತ್ತದೆ.. ಭಾವನಾತ್ಮಕ ಬಂಧುತ್ವವನ್ನು ಬಲಪಡಿಸುವ ಕೆಲಸವನ್ನು ಈ ಅಪ್ಪುಗೆ ಮಾಡುತ್ತದೆ..
ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ;
ಹಗ್ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಕೆಲ ತಜ್ಞರು ಹೇಳುತ್ತಾರೆ.. ನಿಯಮಿತವಾಗಿ ಪ್ರೀತಿ ಪಾತ್ರರನ್ನು ಅಪ್ಪಿಕೊಳ್ಳುವುದರಿಂದ ನಮಗೆ ಆದಷ್ಟು ಆರೋಗ್ಯ ಸಮಸ್ಯೆಗಳು ಬರೋದಿಲ್ಲವಂತೆ.. ಕೆಲ ಸಂಶೋಧನೆಗಳ ಮೂಲಕ ಈ ಸತ್ಯ ಹೊರಬಿದ್ದಿದೆ..
ಇದನ್ನೂ ಓದಿ; ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!
ಒಂದು ಹಗ್ ಹೆಚ್ಚು ಸಂತೋಷ ನೀಡುತ್ತದೆ;
ಪ್ರತಿದಿನ ಕನಿಷ್ಠ 20 ಸೆಕೆಂಡ್ ಹಗ್ ಮಾಡಿಕೊಳ್ಳುವುದರಿಂದ ನಮ್ಮ ಸಂತೋಷವನ್ನು ಹಿಮ್ಮಡಿಗೊಳಿಸುತ್ತದೆ.. ಸಮಾದಾನ ಮತ್ತಷ್ಟು ಹೆಚ್ಚು ಮಾಡುತ್ತದೆ.. ಸಂತೋಷದ ಹಾರ್ಮೋನುಗಳು ನಮ್ಮ ದೇಹದಲ್ಲಿ ಹೆಚ್ಚು ಬಿಡುಗಡೆಯಾಗುತ್ತವೆ.. ಇದರಿಂದ ನಮ್ಮ ದೇಹದಲ್ಲಿ ಒತ್ತಡ ಹಾಗೂ ಆತಂಕ ಕಡಿಮೆಯಾಗುತ್ತದೆ.. ನಿಮ್ಮ ಮನಸ್ಥಿತಿ ಉತ್ತಮವಾಗುತ್ತಾ ಹೋಗುತ್ತದೆ.. ನೆಗೆಟಿವ್ ಆಲೋಚನೆಗಳು ಮಾಯವಾಗುತ್ತವೆ..