ಭಾರತದ ಈ ಗ್ರಾಮದಲ್ಲಿ 17 ಬ್ಯಾಂಕ್ಗಳಿವೆ, 5 ಸಾವಿರ ಕೋಟಿ ಡೆಪಾಸಿಟ್ ಮಾಡಿದ್ದಾರೆ!
ಗುಜರಾತ್; ಭಾರತದಲ್ಲಿ ಹಳ್ಳಿಗಳಲ್ಲಿ ಜನರೇ ಖಾಲಿಯಾಗುತ್ತಿದ್ದಾರೆ.. ಎಲ್ಲಾ ನಗರ ಸೇರುತ್ತಿದ್ದಾರೆ.. ಹೀಗಾಗಿ ಹಳ್ಳಿಗಳು ಪಾಳು ಬೀಳುತ್ತಿವೆ.. ಆದ್ರೆ ಇಲ್ಲೊಂದು ಗ್ರಾಮ ಇದೆ.. ಇದು ದೇಶದ ಅತ್ಯಂತ ಶ್ರೀಮಂತ ಗ್ರಾಮವಾಗಿ ಹೆಸರು ಮಾಡಿದೆ.. ಈ ಗ್ರಾಮದಲ್ಲಿ 17 ಬ್ಯಾಂಕ್ ಶಾಖೆಗಳಿವೆ.. ಈ ಊರಿನ ಜನ 5 ಸಾವಿರ ಕೋಟಿ ರೂಪಾಯಿ ಡೆಪಾಸಿಟ್ ಮಾಡಿದ್ದಾರೆ.. ಈ ಗ್ರಾಮ ಇರೋದು ಇರೋದು ಗುಜರಾತ್ನಲ್ಲಿ.. ಇದರ ಮಧಾಪರ್.. ಕಚ್ ಜಿಲ್ಲೆಯಲ್ಲಿರುವ ಈ ಗ್ರಾಮ ಪ್ರಪಂಚಕ್ಕೇ ಹೆಸರಾಗಿದೆ..
ಇದು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಹಳ್ಳಿ.. ಈ ಗ್ರಾಮದಲ್ಲಿ ಸುಮಾರು 7600 ಮನೆಗಳಿದ್ದು, 17 ಬ್ಯಾಂಕ್ಗಳಿವೆ.. ಎಲ್ಲಾ ಹಳ್ಳಿಗಳಂತೆ ಈ ಹಳ್ಳಿಯ ಪ್ರತಿ ಮನೆಯ ಹಲವು ಸದಸ್ಯರು ವಿದೇಶಗಳಲ್ಲಿ ನೆಲೆಸಿದ್ದಾರೆ.. ಲಂಡನ್, ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ.. ಹಾಗಂತ ಅವರು ಬೇರೆಯವರ ರೀತಿ ತಮ್ಮ ಹಳ್ಳಿಯನ್ನ ಮರೆತಿಲ್ಲ.. ವಿದೇಶದಲ್ಲಿ ನೆಲೆಸಿರುವವರು ಗ್ರಾಮದಲ್ಲಿರುವ ತಮ್ಮ ಕುಟುಂಬದ ಹಿರಿಯರಿಗೆ ಹಣವನ್ನು ಕಳುಹಿಸುತ್ತಾರೆ.. ಜೊತೆಗೆ ಗ್ರಾಮದ ಉದ್ಧಾರದಲ್ಲಿ ಶ್ರಮಿಸುತ್ತಿದ್ದಾರೆ.. ಗ್ರಾಮದಲ್ಲಿ ಕೆರೆಗಳು, ಉದ್ಯಾನಗಳು, ಆಸ್ಪತ್ರೆಗಳು, ದೇವಾಲಯಗಳನ್ನು ನಿರ್ಮಿಸಿದ್ದಾರೆ.. ಇದರಿಂದಾಗಿ ಮಧಾಪರ್ ಗ್ರಾಮ ಸಾಕಷ್ಟು ಗಮನ ಸೆಳೆಯುತ್ತಿದೆ..
ಇದನ್ನೂ ಓದಿ; ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ..?
ಇನ್ನು ಮಕ್ಕಳು ದುಡಿದು ಹಣ ಕಳುಹಿಸುತ್ತಿದ್ದಾರೆ ಎಂದು ಹಿರಿಯರು ಸುಮ್ಮನಾಗಿಲ್ಲ.. ಗ್ರಾಮದ ಹೊಲಗಳಲ್ಲಿ ವಿನೂತನ ಕೃಷಿ ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಕೂಡಾ ಏಳ್ಗೆ ಗಳಿಸಿದ್ದಾರೆ.. ಇನ್ನು 1975ರ ವೇಳೆಗೇ ಈ ಗ್ರಾಮದ ಅಂಚೆ ಕಚೇರಿಯಲ್ಲಿ ಈ ಗ್ರಾಮದ ಒಟ್ಟು 500 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರಂತೆ.. ಹೀಗಾಗಿ, ಎಲ್ಲಾ ಬ್ಯಾಂಕ್ಗಳವರೂ ಈಗ ಇಲ್ಲಿ ತಮ್ಮ ಬ್ರಾಂಚ್ಗಳನ್ನು ತೆರೆದಿದ್ದಾರೆ.. ಈಗ ಆ ಬ್ಯಾಂಕ್ ಶಾಖೆಗಳಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಠೇವಣಿ ಇಟ್ಟಿದ್ದಾರೆ..