Economy

Live – Karnataka budget; 3 ಲಕ್ಷ 71 ಸಾವಿರ ಕೋಟಿ ಗಾತ್ರದ ಬಜೆಟ್‌ ಮಂಡನೆ

2024-25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್‌ ಇದಾಗಿದೆ. ಈ ಮೂಲಕ ಹೊಸ ದಾಖಲೆ ಬರೆದಿದದ್ದಾರೆ.

ಕಾಂಗ್ರೆಸ್‌ ಶಾಲು ಧರಿಸಿ ಬಂದಿರುವ ಸಿಎಂ ಹಾಗೂ ಕಾಂಗ್ರೆಸ್‌ನ ಎಲ್ಲಾ ಸದಸ್ಯರು

2024-25ನೇ ಸಾಲಿನ ಬಜೆಟ್ ಒಟ್ಟು ಗಾತ್ರ 3,71,383 ಕೋಟಿ ರೂಪಾಯಿ

ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ಚುನಾವಣಾ ಗಿಮಿಕ್‌ ಅಲ್ಲ

ನಮ್ಮ 5 ಗ್ಯಾರಂಟಿ ಜಾರಿ ಬಗ್ಗೆ ಇಡೀ ಜಗತ್ತು ರಾಜ್ಯದತ್ತ ನೋಡುತ್ತಿದೆ

ಶಕ್ತಿ ಯೋಜನೆಯಿಂದ ಮಹಿಳೆಯರು ಸಾಕಷ್ಟು ಅನುಕೂಲ ಪಡೆಯುತ್ತಿದ್ದಾರೆ

5 ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ವಿಪಕ್ಷದವರು ಸುಳ್ಳು ಹೇಳ್ತಿದ್ದಾರೆ

ಕೇಂದ್ರ ಸರ್ಕಾರ ಮಾಡದ್ದನ್ನು ನಾವು ಮಾಡಿ ತೋರಿಸಿದ್ದೇವೆ

ಬಿಟ್ಟಿ ಗ್ಯಾರಂಟಿ, ದಿವಾಳಿ ಎಂದು ವಿಪಕ್ಷಗಳವರು ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ

ನಾವು ಯಾರಿಗೂ ತಾರತಮ್ಯ ಮಾಡದೆ ರಾಜ್ಯ ಅಭಿವೃದ್ಧಿ ಮಾಡುತ್ತೇವೆ

ಹತ್ತು ಪ್ರವಾಸಿ ತಾಣಗಳಿಗೆ ರೋಪ್‌ ವೇ ಕಾರು ಸೌಲಭ್ಯ ನೀಡಲಾಗುವುದು

ಕೃಷಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಗುತ್ತದೆ

ಬೆಂಗಳೂರಿನಲ್ಲಿ ಬ್ಯುಸಿನೆಸ್‌ ಕಾರಿಡಾರ್‌ ಸ್ಥಾಪನೆ ಕ್ರಮ

ಹೊಸದಾಗಿ 44 ಕಿಲೋ ಮೀಟರ್‌ ಮೆಟ್ರೋ ಮಾರ್ಗ ನಿರ್ಮಾಣ

ಬಿಯರ್‌ ಸೇರಿ ಎಲ್ಲಾ ಬ್ರಾಂಡ್‌ ಮದ್ಯದ ಬೆಲೆ ಹೆಚ್ಚಳ

ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಪ್ರೋತ್ಸಾಹ

ಮೊದಲ ಬಾರಿಗೆ ಸಮುದ್ರ ಆಂಬುಲೆನ್ಸ್‌ ಪರಿಚಯಿಸಲಾಗುತ್ತದೆ

ರಾಯಚೂರಿನಲ್ಲಿ ಹೈಟೆಕ್‌ ಒಣ ಮೆಣಸಿನ ಕಾಯಿ ಮಾರ್ಕೆಟ್‌ ಸ್ಥಾಪನೆ

25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಣಸಿಕನ ಕಾಯಿ ಮಾರ್ಕೆಟ್‌ ನಿರ್ಮಾಣ

ಸಿರಿಧಾನ್ಯಗಳ ಉತ್ಪನ್ನಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ ವಿತರಣೆ ಮಾಡಲಾಗುತ್ತದೆ

ಗೃಹ ಮತ್ತು ಸಾರಿಗೆ ಇಲಾಖೆಗೆ – 19,777 ಕೋಟಿ ರೂಪಾಯಿ
ಅಂತರ್ಜಲ ಅಭಿವೃದ್ಧಿಗೆ 970 ಕೋಟಿ ರೂಪಾಯಿ
ಇಂಧನ ಇಲಾಖೆ – 23,159 ಕೋಟಿ ರೂಪಾಯಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 34,406 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ ಇಲಾಖೆ – 21,160 ಕೋಟಿ ರೂಪಾಯಿ

ಬಿಎಂಟಿಸಿಗೆ ಹೊಸದಾಗಿ 1334 ಹೊಸ ಇವಿ ಬಸ್‌ ಖರೀದಿಗೆ ನಿರ್ಧಾರ

ಜೊತೆಗೆ ಬಿಎಂಟಿಸಿಗೆ 820 ಬಿಎಸ್‌6 ಡೀಸೆಲ್‌ ಬಸ್‌ ಸೇರ್ಪಡೆ

ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ ಮೀಸಲು

10 ಪಾಲಿಕೆಗಳ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ವ್ಯಾಪಾರ ವ್ಯವಹಾರ ನಡೆಸಲು ಅವಕಾಶ

ಈ ವರ್ಷದಲ್ಲಿ 3 ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಯುಟಿ ಸೌಲಭ್ಯ

ಪಾರ್ಶ್ವ ವಾಯು ಸೇರಿ ಮಾರಕ ಕಾಯಿಲೆ ಹೊಂದಿರುವವರ ಆರೈಕೆ ಮಾಡುವವರಿಗೆ ಮಾಸಿಕ 1 ಸಾವಿರ ಸಹಾಯಧನ

ಮಾಜಿ ದೇವದಾಸಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು

 

 

 

Share Post