ಮುಡಾ, ವಾಲ್ಮೀಕಿ ನಿಗಮ ಹಗರಣ; ಬಿಜೆಪಿ-ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ
ಬೆಂಗಳೂರು; ಮುಡಾ ಸೈಟು ಹಂಚಿಕೆ ಪ್ರಕರಣ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಹಗರಣದ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೋರಾಟ ತೀವ್ರಗೊಳಿಸಿವೆ.. ಇಷ್ಟು ದಿನ ಸದನದಲ್ಲಿ ಹೋರಾಟ ನಡೆಸುತ್ತಿದ್ದ ಉಭಯ ಪಕ್ಷಗಳ ನಾಯಕರು ಇದೀಗ ಅಹೋರಾತ್ರಿ ವಿಧಾನಸೌಧದಲ್ಲೇ ಧರಣಿ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ..
ಇದನ್ನೂ ಓದಿ; ಬಾಸ್..ಬಾಸ್.. ಅಂತಿದ್ದರು, ಯಾರು ಬಾಸ್ ನನಗೆ ಗೊತ್ತಿಲ್ಲ; ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಸರ್ಕಾರ ಹಗರಣಗಳ ಸರದಾರ, ಮುಡಾ ಲೂಟಿ, ವಾಲ್ಮೀಕಿ ನಿಮಗದಲ್ಲಿ ನೂರಾರು ಕೋಟಿ ಹಗರಣ ಎಂಬ ಭಿತ್ತಿಪತ್ರಗಳನ್ನು ಹಿಡಿದು ನಿನ್ನೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.. ರಾತ್ರಿಯೆಲ್ಲಾ ಭಜನೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.. ಕಂಜಿರಾ, ತಾಳ ಬಡಿಯುತ್ತಾ ಭಜನೆಯ ಜೊತೆಗೆ ಸಿನಿಮಾ ಹಾಡುಗಳನ್ನೂ ಹಾಡಲಾಯಿತು..
ಇದನ್ನೂ ಓದಿ; ಕಪ್ಪು ಅರಿಶಿಣ ನೋಡಿದ್ದೀರಾ..?; ಇದನ್ನು ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಎಲ್ಲಾ ಸದಸ್ಯರೂ ಈ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು..