AstrologyLifestyle

Money Horoscope; ಈ ರಾಶಿಗಳವರಿಗೆ ಏಕಕಾಲದಲ್ಲಿ ಎರಡು ಧನಯೋಗ – ಹಣವೋ ಹಣ!

ಜುಲೈ 29, 30 ಹಾಗೂ 31ರಂದು ವೃಷಭ ರಾಶಿಯಲ್ಲಿ ಚಂದ್ರ, ಕುಜ ಹಾಗೂ ಗುರು ಒಟ್ಟಿಗೆ ಇರಲಿದ್ದಾರೆ.. ಹೀಗಾಗಿ, ಗುರುನೊಡನೆ ಚಂದ್ರ ಸೇರುವುದರಿಂದ ಗಜಕೇಸರಿ ಯೋಗ ಇರಲಿದೆ.. ಇದರ ಜೊತೆಗೆ ಚಂದ್ರ ಮಂಗಲ ಯೋಗವೂ ಬರಲಿದೆ.. ಎರಡೂ ಕೂಡಾ ಆದಾಯವನ್ನು ದ್ವಿಗುಣಗೊಳಿಸುತ್ತದೆ.. 12 ರಾಶಿಗಳಲ್ಲಿ 6 ರಾಶಿಗಳಾದ ಮೇಷ, ವೃಷಭ, ಕರ್ಕಾಟಕ, ಕನ್ಯಾ, ವೃಶ್ಚಿಕ ಹಾಗೂ ಮಕರ ರಾಶಿಯವರಿಗೆ ಇದು ಅತ್ಯಂತ ಉತ್ತಮ ಕಾಲ.. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.. ಇವರು ಎಲ್ಲೇ ಹಣಕಾಸು ತೊಡಗಿಸಿದರೂ ಅಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಸಿಗುತ್ತದೆ..

ಇದನ್ನೂ ಓದಿ; ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ಸಿಕ್ಕಿದೆ; ಸಿಎಂ ಸಿದ್ದರಾಮಯ್ಯ

ಮೇಷ;
ಮೇಷ ರಾಶಿಯವರಿಗೆ ಈಗ ಧನಯೋಗ ನಡೆಯುತ್ತಿದೆ.. ಇವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಆಗೋ ಸಮಯವಿದು.. ನಿರೀಕ್ಷೆಗೂ ಮೀರಿ ಆದಾಯ ಬರುತ್ತದೆ.. ಮರೆತೇ ಹೋಗಿದ್ದ ಹಣವೂ ಕೂಡಾ ನಿಮ್ಮನ್ನು ಹುಡುಕಿಕೊಂಡು ಬರುವ ಸಮಯವಿದು.. ಉದ್ಯೋಗದಲ್ಲಿ ಸಾಕಷ್ಟು ಪ್ರಗತಿ ಸಿಗಲಿದ್ದು, ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸಂಬಳ ಸಿಗಲಿದೆ.. ವ್ಯಾಪಾರ, ವ್ಯಹಾರದಲ್ಲೂ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿದೆ..
ವೃಷಭ;
ವೃಷಭ ರಾಶಿಯವರಿಗೆ ಇದೀಗ ಭಾರೀ ಧನಯೋಗವಿದೆ.. ಯಾಕಂದ್ರೆ ಇವರಿಗೆ ಈಗ ಗಜಕೇಸರಿಯೋಗ ಹಾಗೂ ಮಂಗಲ ಯೋಗ ಎರಡೂ ನಡೆಯುತ್ತಿದೆ.. ಹೀಗಾಗಿ ನಾನಾ ಕಡೆಯಿಂದ ನಿಮಗೆ ಹಣ ಹರಿದುಬರಲಿದೆ.. ಮನಸ್ಸಿನ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳಲು ಇದು ಉತ್ತಮ ಸಮಯ.. ಈ ಸಮಯದಲ್ಲಿ ಉಳಿತಾಯದ ಬಗ್ಗೆಯೂ ಹೆಚ್ಚು ಯೋಚನೆ ಮಾಡಿದರೆ ಜೀವನಪರ್ಯಂತ ಸುಖವಾಗಿ ಬಾಳಬಹುದು.. ನಿಮಗೆ ಎಲ್ಲಾ ಕಡೆ ಬೇಡಿಕೆ ಹೆಚ್ಚಾಗಲಿದೆ.. ವೃತ್ತಿ ಸ್ಥಳದಲ್ಲಿ, ವ್ಯಾಪಾರ ಸ್ಥಳದಲ್ಲಿ ನಿಮಗೆ ಬೇಡಿಕೆ ಹೆಚ್ಚಾಗುತ್ತದೆ.. ನೀವು ಬಯಸಿದ್ದು ನಿಮಗೆ ಸಿಗುತ್ತದೆ.. ವಿದೇಶಗಳಿಂದಲೂ ನಿಮಗೆ ಆಫರ್‌ಗಳು ಬಂದರೂ ಅಚ್ಚರಿಯಾಗಬೇಕಾದ ಅವಶ್ಯಕತೆ ಇಲ್ಲ.. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದ್ದು, ಅತ್ಯಂತ ಸುಭದ್ರ ಕೆಲಸ ನಿಮಗೆ ಸಿಗಲಿದೆ.. ಕಾಯಿಲೆಗಳಿದ್ದರೂ ಚೇತರಿಸಿಕೊಳ್ಳುತ್ತೀರಿ. ನಿಮ್ಮ ಜೀವನಶೈಲಿಯಲ್ಲೂ ಬದಲಾವಣೆಗಳನ್ನು ಕಾಣಬಹುದು..

ಇದನ್ನೂ ಓದಿ; ಈ ಹಾಲಿನ ಬಣ್ಣ ಕಡು ಕಪ್ಪು..!; ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು..!

ಕರ್ಕಾಟಕ;
ಕರ್ಕಾಟಕ ರಾಶಿಯವರಿಗೆ ಇದು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ.. ಯಾಕಂದ್ರೆ ಇವರಿಗೆ ಶುಭ ಸ್ಥಾನದಲ್ಲಿ ಅಧಿಪತಿ ಚಂದ್ರವೂ ಇದ್ದಾನೆ.. ಹೀಗಾಗಿ ಎರಡು ಧನಯೋಗಗಳಿವೆ.. ಅಷ್ಟಮ ಶನಿಯ ಪ್ರಭಾವ ನಿಮಗೆ ಈಗ ಪೂರ್ತಿಯಾಗಿ ಬಿಟ್ಟಿದೆ.. ಹೀಗಾಗಿ ನಷ್ಟದಲ್ಲಿರುವ ವ್ಯವಹಾರಗಳೂ ಈಗ ಕೈಹಿಡಿಯಲಿವೆ.. ವ್ಯಾಪಾರ ವಿಸ್ತರಣೆ ಮಾಡಬೇಕು ಎಂದುಕೊಳ್ಳುವವರೂ ಈಗ ನಿಶ್ಚಿಂತೆಯಿಂದ ವಿಸ್ತರಣೆ ಮಾಡಬಹುದು.. ಆಸ್ತಿ ಖರೀದಿ ಮಾಡಬೇಕು ಅಂದುಕೊಂಡವರಿಗೆ ಇದು ಅತ್ಯಂತ ಸಕಾಲ.
ಕನ್ಯಾ;
ಕನ್ಯಾ ರಾಶಿಯವರಿಗೆ ಕೂಡಾ ನೀವು ಬೇಡ ಅಂದರೂ ಕೂಡಾ ಶುಭ ಫಲಗಳು ಹುಡುಕಿಕೊಂಡು ಬರಲಿವೆ.. ಆದಾಯಗಳು ಹೆಚ್ಚುತ್ತಾ ಹೋಗುತ್ತವೆ.. ಯಾವುದೇ ಶ್ರಮ ಪಡೆದಿದ್ದರೂ ನಿಮಗೆ ಸಾಕಷ್ಟು ಧನ ಲಾಭವಾಗಲಿದೆ.. ಹೆಚ್ಚು ಹಣ ಬರುತ್ತಿದೆ ಎಂದು ಮೈಮರೆಯುವುದು ಬೇಡ.. ಈಗ ಹಣ ಉಳಿತಾಯ ಮಾಡಿಕೊಂಡರೆ ನಿಮ್ಮನ್ನು ಅದು ಜೀವನಪೂರ್ತಿ ಕಾಪಾಡುತ್ತದೆ.. ವಿದೇಶ ಪ್ರಯಾಣ ಮಾಡಬೇಕೆಂದುಕೊಂಡವರಿಗೆ ಆ ಅವಕಾಶ ಕೂಡಾ ಕೂಡಿಬರಲಿದೆ.. ಇನ್ನು ವಿದೇಶದಲ್ಲಿ ಉದ್ಯೋಗ ಗಳಿಸಬೇಕು ಅಂದುಕೊಂಡವರಿಗೂ ಇದು ಸಕಲಾ. ದಾಂಪತ್ಯ ಜೀವನ ಕೂಡಾ ಸುಖಮಯವಾಗಿರಲಿದ್ದು, ಮನೆಯಲ್ಲಿ ಶಾಂತಿ ನೆಲಸಿ, ಶುಭಕಾರ್ಯಗಳು ಕೂಡಾ ನಡೆಯಲಿವೆ..

ಇದನ್ನೂ ಓದಿ; Daily Horoscope; ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ಗೊತ್ತಾ..?

ವೃಶ್ಚಿಕ;
ವೃಶ್ಚಿಕ ರಾಶಿಯವರಿಗೆ 7ನೇ ಸ್ಥಾನದಲ್ಲಿ ಶುಭ ಯೋಗಗಳು ನೆಲೆಸಿವೆ.. ಹೀಗಾಗಿ ಶ್ರೀಮಂತ ಕುಟುಂಬದಲ್ಲಿ ವಿವಾಹ, ಶ್ರೀಮಂತ ವ್ಯಕ್ತಿಯೊಂದಿಗೆ ಪ್ರೇಮ ಉಂಟಾಗಲಿದೆ.. ಇನ್ನು ಮನೆಯಲ್ಲಿ ಕೌಟುಂಬಿಕ ಕಲಹಗಳಿದ್ದರೆ ಅವು ನಿವಾರಣೆಯಾಗುತ್ತವೆ.. ಮನೆಯಲ್ಲಿ ಇನ್ನ ಮೇಲೆ ಶಾಂತಿ ನೆಲೆಸುತ್ತದೆ.. ನಿಮಗೆ ಸಿಗಬೇಕಾದ ಜಮೀನು ಸಿಗುತ್ತದೆ.. ಕೋರ್ಟ್‌ ವ್ಯಾಜ್ಯಗಳೇನಾದರೂ ಇದ್ದರೆ ನಿಮ್ಮ ಪರವಾಗಿ ಆಗುವ ಸಾಧ್ಯತೆಯೇ ಹೆಚ್ಚು.. ಇನ್ನು ಕಾಯಿಲೆಗಳಿಂದಲೂ ನಿಮಗೆ ಮುಕ್ತಿ ಸಿಗಲಿದೆ..
ಮಕರ;
ಮಕರ ರಾಶಿಯ ಪಂಚಮ ಅಂಶದಲ್ಲಿ ಶುಭ ಯೋಗಗಳಿವೆ.. ಹೀಗಾಗಿ ವೃತ್ತಿ ಮತ್ತು ಉದ್ಯೋಗಗಳಲ್ಲಿ ಇದರ ಒಳ್ಳೆಯ ಪ್ರಭಾವ ಹೆಚ್ಚಿರಲಿದೆ.. ವ್ಯವಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಉತ್ತಮ ಓಲ ಸಿಗಲಿದೆ.. ಆರ್ಥಿಕವಾಗಿ ಸಾಕಷ್ಟು ಪ್ರಗತಿ ಕಾಣುವ ಸಮಯವಿದು.. ಸಂಬಂಧಿಕರ ಜೊತೆ ಆಸ್ತಿ ತಕರಾರುಗಳೇನಿದ್ದರೂ ಅವು ನಿವಾರಣೆಯಾಗುತ್ತವೆ.. ವ್ಯಾಪಾರ ಹಾಗೂ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದುಕೊಳ್ಳುವ ಸಂಬಳ ಆಧಾರಿತ ಉದ್ಯೋಗಿಗಳಿಗೆ ಇದು ಸರಿಯಾದ ಸಮಯವಾಗಿದೆ..

Share Post