ಈ ಹಾಲಿನ ಬಣ್ಣ ಕಡು ಕಪ್ಪು..!; ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು..!
ಬೆಂಗಳೂರು; ಬಹುತೇಕ ಪ್ರತಿಯೊಬ್ಬರೂ ಹಾಲು ಬಳಕೆ ಮಾಡೇ ಮಾಡುತ್ತೇವೆ.. ಹಸು ಹಾಗೂ ಎಮ್ಮೆ ಹಾಲನ್ನು ಎಲ್ಲರೂ ಕಾಫಿ, ಟೀ ಇನ್ನಿತರ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಿತ್ಯ ಹಾಲು ಬಳಕೆ ಮಾಡಲಾಗುತ್ತದೆ.. ಈ ಹಾಲು ಬಿಳಿ ಬಣ್ಣದ್ದಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಹಸು, ಎಮ್ಮೆಗಳ ಹಾಲಷ್ಟೇ ಅಲ್ಲ, ಬಹುತೇಕ ಎಲ್ಲಾ ಪ್ರಾಣಿಗಳ ಹಾಲೂ ಬಹುತೇಕ ಬಿಳಿಯಾಗಿಯೇ ಇರುತ್ತದೆ.. ಆದ್ರೆ ಇಲ್ಲೊಂದು ಪ್ರಾಣಿ ಇದೆ.. ಈ ಪ್ರಾಣಿಯ ಹಾಲು ಕಡು ಕಪ್ಪು ಬಣ್ಣದ್ದಾಗಿರುತ್ತೆ ಅಂದ್ರೆ ನೀವು ನಂಬಲೇಬೇಕು..
ಮಕ್ಕಳಿಗೆ ಎದೆ ಹಾಲು ತುಂಬಾನೇ ಮುಖ್ಯ.. ಇನ್ನು ವಯಸ್ಕರು ಹಾಗೂ ಮಹಿಳೆಯರು ಹಸು ಅಥವಾ ಎಮ್ಮೆ ಹಾಲನ್ನು ಕುಡಿಯುತ್ತಾರೆ.. ಈ ಹಾಲು ಬಿಳಿ ಅಥವಾ ಕೊಂಚ ಹಳದಿ ಬಣ್ಣದ್ದಾಗಿರುತ್ತದೆ.. ಆದ್ರೆ ಆಫ್ರಿಕನ್ ಬ್ಲಾಕ್ ರೈನೋ ಎಂಬ ಘೇಂಡಾಮೃಗಗಳಿಂದ ಕಪ್ಪು ಹಾಲು ಬರುತ್ತದೆ.. ಆಫ್ರಿಕಾದಲ್ಲಿ ಕಂಡುಬರುವ ಘೇಂಡಾಮೃಗದ ಹಾಲು ಸಂಪೂರ್ಣ ಕಪ್ಪಾಗಿದ್ದು, ಇದರಲ್ಲಿ ಕೊಬ್ಬಿನ ಅಂಶ ಇರುವುದೇ ಇಲ್ಲವಂತೆ.. ಹೀಗಾಗಿ ಈ ಕಪ್ಪು ಹಾಲು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತೆ ಎಂದು ಹೇಳಲಾಗುತ್ತದೆ.. ರೈನೋ ಹಾಲಿನಲ್ಲಿ 0.2 ರಷ್ಟು ಕೊಬ್ಬು ಇರುತ್ತದೆ. ಆದ್ರೆ ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆಯಂತೆ..
ಈ ಕಪ್ಪು ಹಾಲು ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅದಕ್ಕಾಗಿಯೇ ಕಪ್ಪು ಘೇಂಡಾಮೃಗಗಳು ನಾಲ್ಕರಿಂದ ಐದು ವರ್ಷಗಳನ್ನು ತಲುಪಿದ ನಂತರವೇ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಇದಲ್ಲದೆ, ಅವರ ಗರ್ಭಧಾರಣೆಯು ಸಾಮಾನ್ಯಕ್ಕಿಂತ ಹೆಚ್ಚು ದೀರ್ಘವಾಗಿರುತ್ತದೆ. ಇವು ಒಂದು ವರ್ಷಕ್ಕೂ ಹೆಚ್ಚು ಕಾಲ ಗರ್ಭಧರಿಸುತ್ತವೆ..