Lifestyle

ಇದೆಂತಾ ಬದುಕು ಮಾರಾಯ ಅಂತಿದ್ದೀರಾ..?; ಹಾಗಾದ್ರೆ ಬುದ್ಧನ ಮಾತುಗಳನ್ನೊಮ್ಮೆ ಕೇಳಿಬಿಡಿ..

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂದು ಎಲ್ಲರೂ ಬಯಸುತ್ತಿರುತ್ತಾರೆ.. ಬೆಳವಣಿಗೆ ಎಂದರೆ ಬರೀ ಆರ್ಥಕ ಬೆಳವಣಿಗೆ ಅಷ್ಟೇ ಅಲ್ಲ, ಒಬ್ಬೊರದ್ದೂ ಒಂದೊಂದು ಕನಸು ಇರುತ್ತದೆ.. ಆದ್ರೆ ಅವರ ಕನಸು ಈಡೇರದಿದ್ದಾಗ, ಕಷ್ಟಗಳು ನಮ್ಮನ್ನು ಕಾಡಿದಾಗ ಇದೆಂತಾ ಬದುಕು, ಸಾಕಪ್ಪಾ ಸಾಕು ಎಂದು ಅನಿಸಿಬಿಟ್ಟಿರುತ್ತದೆ.. ಇಂತಹ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ.. ತಾಳ್ಮೆ ಇದ್ದರೆ ಎಂದಹ ಕಷ್ಟ ಬೇಕಾದರೂ ಜಯಿಸಿಕೊಂಡು ಬರಬಹುದು.. ಜೀವನದಲ್ಲಿ ನಿಜವಾದ ಬೆಳವಣಿಗೆ ಎಂದರೆ ಏನು ಎಂದು ಸಾವಿರಾರು ವರ್ಷಗಳ ಹಿಂದೆಯೇ ಅನೇಕ ಮಹಾನ್ ತತ್ವಜ್ಞಾನಿಗಳು ಹೇಳಿದ್ದಾರೆ. ಅವರಲ್ಲಿ ಗೌತಮ ಬುದ್ಧನೂ ಒಬ್ಬ. ಶತ್ರುಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದ ರಾಜ ಜ್ಞಾನೋದಯ ಪಡೆದು ಗೌತಮ ಬುದ್ಧನಾದ ಬಗೆ ಇಂದಿಗೂ ಹಲವರಿಗೆ ಮಾದರಿ.

ಗೌತಮ ಬುದ್ಧನ ಸೌಮ್ಯವಾದ ಮುಖ ಎಲ್ಲರನ್ನೂ ಆಕರ್ಷಿಸುತ್ತದೆ.. ಮನಸ್ಸು ಯಾವುದಾದರೂ ಕ್ಷೋಭೆಯಲ್ಲಿದ್ದರೂ ಅಥವಾ ಯಾವುದೋ ಅಪರಿಚಿತ ನೋವು ಕಾಡುತ್ತಿದ್ದರೂ ಒಮ್ಮೆ ಬುದ್ಧನ ರೂಪವನ್ನು ನೆನೆಸಿಕೊಂಡರೆ ನೆಮ್ಮದಿ ಸಿಗುತ್ತದೆ.. ಅದಕ್ಕಾಗಿಯೇ ಮನಶಾಸ್ತ್ರಜ್ಞರು ಸಹ ಗೌತಮ ಬುದ್ಧನ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳಲು ಹೇಳುತ್ತಾರೆ..  ಬುದ್ಧ ಹೇಳಿದ ಪ್ರತಿಯೊಂದು ಪದವೂ ನಮ್ಮ ಜೀವನವನ್ನು ಸರಿದಾರಿಗೆ ತರುವ ಪಾಠವಾಗಿದೆ..

೧. ನಾವು ಯಾವುದೇ ಕೆಲಸವನ್ನು ಮಾಡುವಾಗ ಅದನ್ನು ಆತ್ಮಸಾಕ್ಷಿಯಿಂದ ಮಾಡಬೇಕು.. ಆಗ ಮಾತ್ರ ನಾವು ಮಾಡುವ ಕೆಲಸದಲ್ಲಿ ಉನ್ನತಿ ಸಿಗುತ್ತದೆ.. ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಕಾರ್ಯಗಳ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ.. ನಾವು ಅದನ್ನು ಆತ್ಮಸಾಕ್ಷಿಯಾಗಿ ಮಾಡಿದಾಗ, ನಾವು ಮಾಡುವುದು ಸರಿಯೋ ತಪ್ಪೋ ಎಂದು ನಮಗೆ ಅರ್ಥವಾಗುತ್ತದೆ ಎಂದು ಹೇಳಲಾಗುತ್ತದೆ.

೨. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಗೌತಮ ಬುದ್ಧ ಹೇಳಿದ್ದಾರೆ.. ಜೀವನದಲ್ಲಿ ಬದಲಾವಣೆ ಸಹಜವಾದ ನಿಯಮ. ಹೀಗಾಗಿ ನಾವು ಸತ್ಯವನ್ನು ಅರಿತುಕೊಂಡರೆ, ದುಃಖಕ್ಕೆ ನಮ್ಮಲ್ಲಿ ಜಾಗವೇ ಇರೋದಿಲ್ಲ. ಜೀವನದಲ್ಲಿ ಒಪ್ಪಿಕೊಳ್ಳುವುದು ಮತ್ತು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಬುದ್ಧ ಹೇಳುತ್ತಾರೆ..

೩. ಬುದ್ಧನ ಬೋಧನೆಗಳ ಮತ್ತೊಂದು ಪ್ರಮುಖ ಅಂಶವೆಂದರೆ ಎಲ್ಲರ ಬಗ್ಗೆ ಸಹಾನುಭೂತಿ ಮತ್ತು ದಯೆ ಇಟ್ಟುಕೊಳ್ಳುವುದು. ಸಹಾನುಭೂತಿಯುಳ್ಳ ಜನರು ಇತರರಿಗೆ ತೊಂದರೆ ಕೊಡುವುದಿಲ್ಲ ಮತ್ತು ತಮಗೂ ತೊಂದರೆ ಕೊಟ್ಟುಕೊಳ್ಳುವುದಿಲ್ಲ..

೪. ಅಹಂಕಾರವು ಮನುಷ್ಯನನ್ನು ನಾಶಪಡಿಸುತ್ತದೆ ಎಂದು ಗೌತಮ ಬುದ್ಧ ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಅಹಂಕಾರವನ್ನು ತ್ಯಜಿಸಿದ ದಿನವೇ ನಿಜವಾದ ಯಶಸ್ಸನ್ನು ಸಾಧಿಸುತ್ತಾನೆ ಎಂದು ಹೇಳಲಾಗುತ್ತದೆ.

೫. ಒಬ್ಬ ವ್ಯಕ್ತಿಯು ಭೌತಿಕ ಸುಖಕ್ಕಾಗಿ ಹೆಚ್ಚಿನ ವ್ಯಾಮೋಹವನ್ನು ತೊರೆದ ದಿನದಂದು ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ ಎಂದು ಬುದ್ಧನು ಒಮ್ಮೆ ಹೇಳಿದ್ದಾನೆ. ಯಾವುದೇ ಸಂತೋಷಗಳಲ್ಲಿ ಪಾಲ್ಗೊಳ್ಳದ ವ್ಯಕ್ತಿಯು ಕಡಿಮೆ ಸಮಸ್ಯೆಗಳನ್ನು ಎದುರಿಸುತ್ತಾನೆ.

Share Post