Lifestyle

ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಕುಟುಂಬಗಳಲ್ಲಿ ಹಿರಿಯರು ಇರೋದಿಲ್ಲ.. ಗಂಡ-ಹೆಂಡತಿ ಅಷ್ಟೇ ಇರುವ ಕುಟುಂಬಗಳಲ್ಲಿ ಮನಸ್ತಾಪಗಳು ಹೆಚ್ಚಾಗುತ್ತಿವೆ.. ತಿಳಿ ಹೇಳುವವರು ಇಲ್ಲದ ಕಾರಣ ಇಬ್ಬರ ನಡುವೆ ಗಲಾಟೆಗಳಾಗುತ್ತಿವೆ.. ಇದರಿಂದಾಗಿ ಸಂಸಾರಗಳು ಹಾಳಾಗುತ್ತಿದ್ದು, ಗಂಡ-ಹೆಂಡತಿ ಜಗಳ ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿವೆ.. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ಗಳು ಜಾಸ್ತಿಯಾಗ್ತಿರೋದು.. ಹೀಗಾಗಿ ಸಂಸಾರ ಚೆನ್ನಾಗಿ ನಡೆಯಬೇಕು ಅಂದ್ರೆ ಹೊಂದಾಣಿಕೆ ಮುಖ್ಯವಾಗುತ್ತದೆ.. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗುತ್ತದೆ..

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಇನ್ನು ಪತ್ನಿ ಮೂರು ವಿಚಾರಗಳಲ್ಲಿ ಎಚ್ಚರಿಕೆ ಇರಬೇಕು.. ಹೆಂಡತಿಯ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ.. ಹೀಗಾಗಿ ಗಂಡನ ಜೊತೆ ಹೆಂಡತಿ ಹೇಗಿರಬೇಕು, ಯಾವ ರೀತಿಯಲ್ಲಿ ಗಂಡನ ಜೊತೆ ವರ್ತಿಸಬೇಕು ಎಂಬುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ..

ಇದನ್ನೂ ಓದಿ; ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!

ಕೆಲಸಕ್ಕೆ ಹೋಗುವ ಗಂಡ ಫೋನ್‌ನಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡಬೇಕಾಗುತ್ತದೆ.. ಜೊತೆಗೆ ಕಾಲೇಜಿನ ಸ್ನೇಹಿತ, ಸ್ನೇಹಿತೆಯರು, ಸಹೋದ್ಯೋಗಿಗಳು ಕರೆ ಮಾಡುತ್ತಿರುತ್ತಾರೆ.. ಅವರೊಂದಿಗೆ ಮಾತನಾಡುವಾಗ ಗಂಡನ ಬಗ್ಗೆ ನಂಬಿಕೆ ಇರಬೇಕು.. ಸಿಕ್ಕಿದ್ದಕ್ಕೆಲ್ಲಾ ಅನುಮಾನ ಪಡಬಾರದು.. ಕರೆ ಬಂದಾಗ ಪರೀಕ್ಷೆ ಮಾಡುವುದು, ಗಂಡನ ಮೊಬೈಲ್‌ ಚೆಕ್‌ ಮಾಡುವುದು, ಅನುಮಾನಪಡುವುದು ಮಾಡಬಾರದು.. ಹೀಗೆ ಮಾಡಿದಾಗ ಗಂಡ ಯಾವುದೇ ತಪ್ಪು ಮಾಡದಿದ್ದಾಗ ಹೆಂಡತಿಯ ಈ ವರ್ತನೆ ಕಿರಿಕಿರಿ ಉಂಟು ಮಾಡುತ್ತದೆ.. ಗಂಡ ನಿಜವನ್ನು ಹೇಳಿದರೂ ಅನುಮಾನ ಪಟ್ಟಾಗ ಖಂಡಿತವಾಗಿಯೂ ವೈಮನಸ್ಯ ಉಂಟಾಗುತ್ತದೆ..

ಇದನ್ನೂ ಓದಿ; ಪ್ರಸಿದ್ಧ ಪುಣ್ಯ ಕ್ಷೇತ್ರ ಕೇದಾರನಾಥ ದೇಗುಲದಲ್ಲಿ 228 ಕೆಜಿ ಚಿನ್ನ ನಾಪತ್ತೆ!

ಇನ್ನು ಕೆಲವು ಹೆಂಡತಿಯರು ಗಂಡನ ಗಳಿಕೆಗೂ ಮೀರಿ ಖರ್ಚು ಮಾಡಿಸುತ್ತಾರೆ.. ಯಾವಾಗಲೂ ಅದು ಕೊಡಿಸು ಇದು ಕೊಡಿಸು ಎಂದು ಹೇಳುತ್ತಿರುತ್ತಾರೆ.. ಗಂಡನಿಗೆ ಕೈಗೆಟುಕದ ವಸ್ತುಗಳನ್ನು ಕೊಳ್ಳಲು ಕಷ್ಟವಾಗುತ್ತದೆ.. ಇದರಿಂದ ಮನಸ್ತಾಪಗಳು ಬರುತ್ತವೆ.. ಹೀಗಾಗಿ ಗಂಡನ ಸಂಪಾದನೆ ಎಷ್ಟಿದೆ ಎಂದು ನೋಡಿಕೊಂಡು ಅದಕ್ಕೆ ತಕ್ಕಂತೆ ಬೇಡಿಕೆ ಇಡುವುದು ಒಳ್ಳೆಯದು.

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಇನ್ನು ಕೆಲ ಪತ್ನಿಯರು ಬೇರೆಯವರಿಗೆ ಹೋಲಿಕೆ ಮಾಡಿ ಗಂಡನನ್ನು ಬೈಯ್ಯುತ್ತಿರುತ್ತಾರೆ.. ಅವರು ಹೀಗೆ ಮಾಡುತ್ತಿದ್ದಾರೆ, ಇವರು ಹಾಗೆ ಮಾಡುತ್ತಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಆಗೋದಿಲ್ಲ ಎಂಬ ರೀತಿಯಲ್ಲಿ ಬೇರೆಯವರಿಗೆ ಹೋಲಿಸಿ ಗಂಡನನ್ನು ಹೀಯಾಳಿಸುತ್ತಾರೆ.. ಇದು ಗಂಡನಿಗೆ ಸಾಕಷ್ಟು ಹರ್ಟ್‌ ಆಗುತ್ತದೆ.. ಹಾಗೆ ಮಾಡಿದರೆ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ..

 

Share Post