HealthLifestyle

ಸತತವಾಗಿ ಒಂದು ತಿಂಗಳು ಈರುಳ್ಳಿ ತಿನ್ನದೇ ಇದ್ದರೆ ಏನಾಗುತ್ತದೆ..?

ಬೆಂಗಳೂರು; ಭಾರತೀಯ ಅಡುಗೆಯಲ್ಲಿ ಟೊಮ್ಯಾಟೋ ಹಾಗೂ ಈರುಳ್ಳಿಗೆ ಮಹತ್ವದ ಪಾತ್ರ ಇದೆ.. ಇವೆರಡಿದ್ದರೆ ಹೇಗೇ ಮೇನೇಜ್‌ ಮಾಡಬಿಡಬಹುದು.. ಅದ್ರಲ್ಲೂ ಈರುಳ್ಳಿ ಸಸ್ಯಾಹಾರ ಹಾಗೂ ಮಾಂಸಾಹಾರಗಳೆರಡಲ್ಲೂ ಹೆಚ್ಚಾಗಿ ಬಳಸುತ್ತಾರೆ.. ಭಾರತವಷ್ಟೇ ಅಲ್ಲ, ಅರಬ್‌ ಕಂಟ್ರಿಗಳಲ್ಲೂ ಈರುಳ್ಳಿ ಬಳಕೆ ಹೆಚ್ಚು.. ಆಹಾರದ ರುಚಿಯನ್ನೇ ಬೇರೆ ರೇಂಜ್‌ಗೆ ತೆಗೆದುಕೊಂಡು ಹೋಗುವ ತಾಕತ್ತು ಈರುಳ್ಳಿಗಿದೆ.. ಆದ್ರೆ, ಭಾರತದಲ್ಲಿ ಕೆಲ ಸಮುದಾಯದವರು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಬಳಕೆ ಮಾಡೋದಿಲ್ಲ.. ಬಿಟ್ಟರೆ ಉಳಿದೆಲ್ಲರ ನೆಚ್ಚಿನ ತರಕಾರಿ ಈರುಳ್ಳಿ.. ಅಂದಹಾಗೆ ಒಂದು ತಿಂಗಳು ಈರುಳ್ಳಿಯನ್ನು ಅಡುಗೆಯಲ್ಲಿ ಬಳಸದೇ ಹೋದರೆ ಏನಾಗುತ್ತದೆ..? ಒಂದು ತಿಂಗಳು ನಾವು ಈರುಳ್ಳಿಯ ರುಚಿಯನ್ನೇ ನೋಡದಿದ್ದರೆ ನಮ್ಮ ದೇಹದಲ್ಲಾಗುವ ವ್ಯತ್ಯಾಸಗಳೇನು ನೋಡೋಣ..

ಇದನ್ನೂ ಓದಿ; ಗಟ್ಟಿಮೇಳಕ್ಕೆ ಸರಿಯಾಗಿ ಮೊಬೈಲ್‌ ಮೊಳಗಿತು..!; ಮದುವೆ ಕ್ಯಾನ್ಸಲ್‌ ಮಾಡಿ ಹೊರಟ ವರ..!

ಈರುಳ್ಳಿಯಲ್ಲಿ ವಿಟಮಿನ್‌ ಬಿ೬, ವಿಟಮಿನ್‌ ಸಿ ಅಧಿಕಾರವಾಗಿರುತ್ತದೆ.. ಇದರಿಂದಾಗಿ ಮಲಬದ್ಧತೆ, ದೃಷ್ಟಿ ಸಮಸ್ಯೆಗಳನ್ನು ಈ ಈರುಳ್ಳಿ ನಿವಾರಣೆ ಮಾಡುತ್ತದೆ.. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.. ಇನ್ನು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.. ಈ ಕಾರಣದಿಂದಾಗಿಯೇ ಮಾಂಸಾಹಾರಿಗಳು ಈರುಳ್ಳಿಯನ್ನು ಹೆಚ್ಚು ಸೇವನೆ ಮಾಡುತ್ತಾರೆ.. ಅಂದಹಾಗೆ ಈರುಳ್ಳಿ ಸೇವನೆಯನ್ನು ಸತತ ಒಂದು ತಿಂಗಳ ಕಾಲ ತ್ಯಜಿಸಿದರೆ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ.. ಆದ್ರೆ ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಬದಲಾವಣೆಯಂತೂ ಆಗುತ್ತೆ ಅಂತ ತಜ್ಞರು ಹೇಳುತ್ತಾರೆ..

ಇದನ್ನೂ ಓದಿ; ಹೆಗಲ ಮೇಲೇ ಸಾವನ್ನಪ್ಪಿದ ಸಹೋದರಿ; 5 ಕಿಮೀ ಹಾಗೇ ಸಾಗಿದ ಸಹೋದರ!

ಆರೋಗ್ಯಕರ ಜೀರ್ಣ ವ್ಯವಸ್ಥೆಗೆ ಈರುಳ್ಳಿ ಸೇವನೆ ಅತ್ಯಗತ್ಯ. ಆದ್ದರಿಂದ, ಈರುಳ್ಳಿ ತಿನ್ನುವುದನ್ನು ನಿಲ್ಲಿಸುವುದರಿಂದ ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್-ಸಿ, ವಿಟಮಿನ್-ಬಿ6, ಫೋಲೇಟ್ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ.. ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂನಂತಹ ಖನಿಜಾಂಶಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಪರಿಣಾಮವಾಗಿ, ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ.

Share Post