ಮದುವೆ ಮಾಡಿದ್ರೆ ಮಾತ್ರ ಶಾಲೆಗೆ ಹೋಗ್ತೀನಿ; ಹಠ ಹಿಡಿದಿದ್ದಕ್ಕೆ 13 ವರ್ಷ ಬಾಲಕನಿಗೆ ಮದುವೆ!
ಕರಾಚಿ(ಪಾಕಿಸ್ತಾನ); ಶಾಲೆಗೆ ಹೋಗು ಅಂದಾಗ ಮಕ್ಕಳು ಹಠ ಹಿಡಿಯೋದು ಕಾಮನ್.. ಆದ್ರೆ, ಹೀಗೆ ಶಾಲೆಗೆ ಹೋಗು ಅಂತ ಹೇಳಿದಾಗ ಹೋಗಲ್ಲ ಅಂತ ಹಠ ಹಿಡಿದ 13 ವರ್ಷದ ಬಾಲಕ ಪೋಷಕರ ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ನನಗೆ ಮದುವೆ ಮಾತ್ರ ಸ್ಕೂಲಿಗೆ ಹೋಗ್ತೀನಿ ಅಂದಿದ್ದಾನೆ.. ಅವನ ಹಠಕ್ಕೆ ತಲೆಬಾಗಿದ ಬಾಗಿದ ಪೋಷಕರು 12 ವರ್ಷದ ಬಾಲಕಿಯನ್ನು ಹುಡುಕಿ ಮದುವೆ ಮಾಡಿದ್ದಾರೆ. ಈ ಅಪ್ರಾಪ್ತರ ವಿಚಿತ್ರ ಮದುವೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ; Drinking Water Problem; ನೀರಿನ ಅಭಾವ ನೀಗಿಸಲು ಅಗತ್ಯ ಸಿದ್ಧತೆ!
ಪಾಕಿಸ್ತಾನದಲ್ಲಿ 13 ವರ್ಷದ ಬಾಲಕನಿಗೆ ಮದುವೆ;
ಪಾಕಿಸ್ತಾನದಲ್ಲಿ 13 ವರ್ಷದ ಬಾಲಕನಿಗೆ ಮದುವೆ; ಪಾಕಿಸ್ತಾನದಲ್ಲಿ ಇಂತಹದ್ದೊಂದು ಮದುವೆ ಮಾಡಲಾಗಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಲಾಮ್ ಪಾಕಿಸ್ತಾನ್ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಇಂತಹದ್ದೊಂದು ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.
ಮಾಹಿತಿ ಪ್ರಕಾರ 13 ವರ್ಷದ ಬಾಲಕ ಯಾವಾಗಲೂ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ಶಾಲೆಗೆ ಹೋಗಲೇಬೇಕು. ನಿನಗೆ ಏನು ಬೇಕು ಹೇಳು ಕೊಡಿಸುತ್ತೇನೆ ಎಂದು ಪೋಷಕರು ಆತನನ್ನು ಕೇಳಿದ್ದಾರೆ. ಆಗ ಆ ಬಾಲಕ ನನಗೆ ಮದುವೆ ಮಾಡಬೇಕು. ಮದುವೆ ಮಾಡಿದರೆ ಮಾತ್ರ ಶಾಲೆಗೆ ಹೋಗುತ್ತೇನೆ ಎಂದು ಹಠ ಹಿಡಿದು ಕುಂತಿದ್ದಾನೆ. ಇದರಿಂದಾಗಿ ವಿಧಿ ಇಲ್ಲದೇ, ಅವರ ಸಂಬಂಧಿಗಳಲ್ಲೇ 12 ವರ್ಷದ ಬಾಲಕಿ ಜೊತೆ ಆತನಿಗೆ ಮದುವೆ ಮಾಡಿಸಿದ್ದಾರೆ. ಸಣ್ಣ ಸಮಾರಂಭ ಮಾಡಿ ಮದುವೆ ಮಾಡಿದ್ದಾರೆ.
ಇದನ್ನೂ ಓದಿ; Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?
ಕಾನೂನು ಪ್ರಕಾರ ಬಾಲ್ಯ ವಿವಾಹ ಅಪರಾಧ;
ಕಾನೂನು ಪ್ರಕಾರ ಬಾಲ್ಯ ವಿವಾಹ ಅಪರಾಧ; ಪಾಕಿಸ್ತಾನದಲ್ಲಿ ಮದುವೆಗೆ ಕನಿಷ್ಠ ಗಂಡಿಗೆ 18 ವರ್ಷ ಹಾಗೂ ಹೆಣ್ಣಿಗೆ 16 ವರ್ಷ ತುಂಬಿರಬೇಕು. ಇಲ್ಲಿ ಹುಡುಗನಿಗೆ 13 ವರ್ಷ ಹಾಗೂ ಹುಡುಗಿಗೆ 12 ವರ್ಷ. ಹೀಗಾಗಿ ಅಲ್ಲಿನ ಕಾನೂನು ಪ್ರಕಾರ ಈ ಮದುವೆ ಅಪರಾಧ. ಇದಕ್ಕೆ ಕಠಿಣ ಶಿಕ್ಷೆ ಇದೆ. ಆದ್ರೆ ಈ ಮದುವೆ ಅಧಿಕೃತ ಅಲ್ಲ ಎನ್ನಲಾಗುತ್ತದೆ. ಬಾಲಕನ ಆಸೆ ತೀರಿಸೋದಕ್ಕಾಗಿ ತಮಾಷೆಗೆ ಈ ಮದುವೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕೆ ಮಾಡಿದರಾ..?;
ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕೆ ಮಾಡಿದರಾ..?; ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಇಂತಹ ಏನೇನೋ ಸರ್ಕಸ್‌ಗಳು ಮಾಡುತ್ತಾರೆ. ಇದೂ ಕೂಡಾ ಹಾಗೆಯೇ ಮಾಡಿರಬಹುದು. ಸುಮ್ಮನೆ ಹುಡುಗ ಹಠ ಹಿಡಿದಿದ್ದರೆ ಮದುವೆ ಮಾಡಿದರು ಎಂದು ಕಥೆ ಸೃಷ್ಟಿ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಬರಬಹುದಾ ಎಂಬ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ; Andhra Election; ಟಿಡಿಪಿ-ಜನಸೇನಾ ಅಭ್ಯರ್ಥಿಗಳ ಪಟ್ಟಿ ಪ್ರಕಟ