HealthLifestyle

ಪ್ರತಿ ತುತ್ತು ಆಹಾರವನ್ನು 32 ಬಾರಿ ಜಗಿದು ತಿನ್ನಬೇಕು..!; ಇಲ್ಲದಿದ್ದರೆ ಏನಾಗುತ್ತೆ ಗೊತ್ತಾ..?

ನಾವು ಯಾವುದೇ ಆಹಾರ ಸೇವನೆ ಮಾಡಲಿ ಅದನ್ನು 32 ಬಾರಿ ಅಗಿದು ತಿನ್ನಬೇಕು.. ಹೀಗಂತ ಆರ್ಯರ್ವೇದ ಹೇಳುತ್ತೆ.. ನಾವು ಪ್ರತಿ ತುತ್ತನ್ನೂ ಹೀಗೆ 32 ಬಾರಿ ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.. ನಿಜವಾದ ಆಹಾರ ಸೇವನೆ ರೀತಿಯೇ ಇದು ಎಂದು ತಜ್ಞರು ಹೇಳುತ್ತಾರೆ.. ಹಲ್ಲುಗಳಿರೋದು ಅಗಿಯುವುದಕ್ಕೆ.. ಹಲ್ಲುಗಳನ್ನು ಸರಿಯಾಗಿ ಬಳಸಿಕೊಂಡು ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದರಿಂದ ನಮ್ಮ ಆರೋಗ್‌ ದುಪ್ಪಟ್ಟಾಗುತ್ತದೆ.. ಜೊತೆಗೆ ಆಹಾರ ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ..

ಅಷ್ಟಕ್ಕೂ 32 ಬಾರಿಯೇ ಏಕೆ ಜಗಿಯಬೇಕು..?;

ಆಯುರ್ವೇದ ಪ್ರತಿ ತುತ್ತು ಆಹಾರವನ್ನು 32 ಬಾರಿ ಜಗಿಯಬೇಕು ಎಂದು ಹೇಳುತ್ತದೆ.. ಯಾಕೆ 32 ಬಾರಿಯೇ ಜಗಿಯಬೇಕು.. ಇದು ಒಂದು ನಂಬರ್‌ ಮಾತ್ರ ಅಲ್ಲವೇ ಅಲ್ಲ.. ಇದರ ಹಿಂದೆ ಒಂದು ಕಾರಣ ಕೂಡಾ ಇದೆ.. ನಾವು ಪ್ರತಿ ತುತ್ತನ್ನೂ 32 ಬಾರಿ ಜಗಿದರೆ ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತವಂತೆ.. ಜೊತೆಗೆ ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಅತಿ ಸುಲಭವಾಗುತ್ತದಂತೆ..

ಜೀರ್ಣಕ್ರಿಯೆ ತುಂಬಾ ಸುಲಭವಾಗುತ್ತದೆ;

ತುಂಬಾ ಜನ ಜೀರ್ಣಕ್ರಿಗೆ ಚೆನ್ನಾಗಿ ಆಗದೇ ಒದ್ದಾಡುತ್ತಿರುತ್ತಾರೆ.. ಇದಕ್ಕೆ ಕಾರಣವೇ ಆಹಾರವನ್ನು ಚೆನ್ನಾಗಿ ಅಗಿದು ತಿನ್ನದೇ ಇರುವುದು.. ಬಾಯಿಯಲ್ಲಿ ಹಲ್ಲುಗಳ ಮೂಲಕ ಆಹಾರನ್ನು 32 ಬಾರಿ ಅಗಿದು ಚೆನ್ನಾಗಿ ಚೂರು ಚೂರು ಮಾಡಿ ನುಂಗಿದರೆ ಆಹಾರ ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ.. ಹೊಟ್ಟೆಯಲ್ಲಿ ನಡೆಯುವ ಜೀರ್ಣ ಪ್ರಕ್ರಿಯೆ ಸುಲಭವಾಗಿ ಆಗುತ್ತದೆ.. ಇದರಿಂದಾಗಿ ಆಹಾರದಲ್ಲಿನ ಯಾವ ಪೋಷಕಾಂಶಗಳೂ ಮಿಸ್‌ ಆಗದೇ ನಮ್ಮ ದೇಹ ಸೇರುತ್ತವೆ..

ಅಜೀರ್ಣ, ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಿಸುತ್ತೆ;

ಚೆನ್ನಾಗಿ ಅಗಿದು ತಿನ್ನುವುದರಿಂದ ಅಜೀರ್ಣ ತಪ್ಪುತ್ತದೆ.. ಅಗಿದು ತಿನ್ನುವುದರಿಂದ ಅತಿಯಾದ ಸೇವನೆ ಮಾಡುವುದು ಕಡಿಮೆಯಾಗುತ್ತದೆ.. ನಿಧಾನವಾಗಿ ಅಗಿದು ತಿನ್ನುದುವುದರಿಂದ ಮೆದುಳಿಗೆ ಹೊಟ್ಟೆ ತುಂಬಿದೆ ಎಂಬ ಸಂದೇಶ ಸುಲಭವಾಗಿ ರವಾನೆಯಾಗುತ್ತದೆ.. ಇದರಿಂದಾಗಿ ಕಡಿಮೆ ತಿನ್ನುತ್ತೇವೆ.. ಇದರಿಂದಾಗಿ ಆರೋಗ್ಯಕರವಾಗಿ ನಮ್ಮ ತೂಕ ಕೂಡಾ ಕಡಿಮೆಯಾಗುತ್ತದೆ.. ಇದರ ನಡುವೆ ಅಜೀರ್ಣ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಕೂಡಾ ಮಾಯವಾಗುತ್ತದೆ..

ಆಹಾರನ್ನು ಆನಂದಿಸುವ ಕೆಲಸ ನಡೆಯುತ್ತೆ;

ನಾವು ಒತ್ತಡದ ಜೀವನ ನಡೆಸುತ್ತಿರುವುದರಿಂದ ಊಟ ಮಾಡುವಾಗಲೂ ಏನನ್ನೋ ಯೋಚನೆ ಮಾಡುತ್ತಾ ಆಹಾರವನ್ನು ಹಾಗಿಯೇ ನುಂಗಿಬಿಡುತ್ತಿರುತ್ತೇವೆ.. ಸರಿಯಾದ ಜಗಿಯೋದಕ್ಕೂ ಸಮಯ, ಮನಸ್ಸು ಇರೋದಿಲ್ಲ.. ಆದ್ರೆ ನಾವು ಪ್ರತಿ ತುತ್ತೂ 32 ಬಾರಿ ಅಗಿಯುವುದನ್ನು ರೂಢಿಸಿಕೊಂಡರೆ ಆಹಾರದ ಜೊತೆ ಒಂದು ಬೆಸುಗೆ ಏರ್ಪಡುತ್ತದೆ.. ಆಹಾರವನ್ನು ಆಸ್ವಾಧಿಸುವ, ಅದನ್ನು ಆನಂದಿಸುವ ಕೆಲಸ ನಡೆಯುತ್ತದೆ.. ಇದರಿಂದಾಗಿ ಆಹಾರವನ್ನು ರುಚಿ ರುಚಿಯಾಗಿ ತಿನ್ನುವ ಅಗತ್ಯಕ್ಕೆ ತಕ್ಕಂತೆ ಮನಸ್ಸಿಟ್ಟು ತಿನ್ನುವ ಕೆಲಸ ನಡೆಯುತ್ತದೆ.. ಅದರೊಂದಿಗ ಬಾಂಧವ್ಯ ಏರ್ಪಡುತ್ತದೆ..

ಗಂಟಲಲ್ಲಿ ಸಿಕ್ಕಿಕೊಳ್ಳುವುದಿಲ್ಲ;

ಎಷ್ಟೋ ಬಾರಿ ಸರಿಯಾಗಿ ಅಗಿಯದೇ ಆಹಾರ ಸೇವನೆ ಮಾಡುವಾಗ ಆಹರ ಗಂಟಲಲ್ಲಿ ಸಿಕ್ಕಿಕೊಂಡು ಒದ್ದಾಡುವ ಘಟನೆಗಳು ನಡೆಯುತ್ತವೆ.. ಕೆಲವರು ಇಂತಹ ಕಾರಣಕ್ಕಾಗಿ ಸಾವನ್ನಪ್ಪಿರುವುದೂ ಇದೇ.. ಅದೇ ಗಮನವಿಟ್ಟು ಆಹಾರವನ್ನು ನಿಧಾನವಾಗಿ ಜಗಿದು ತಿನ್ನುವ ಅಭ್ಯಾಸ ಮಾಡಿಕೊಂಡು ಯಾವ ತೊಂದರೆಯೂ ಬರುವುದಿಲ್ಲ.. ಹೀಗಾಗಿ ಸರಿಯಾಗಿ ಜಗಿದು ನುಂಗುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು..

Share Post