BengaluruCrimeHealth

ESI ಆಸ್ಪತ್ರೆ ಸಿಬ್ಬಂದಿ ಎಡವಟ್ಟು; 15 ತಿಂಗಳು ಆಸ್ಪತ್ರೆಯಲ್ಲೇ ಇದ್ದ ಶವಗಳು..!

ಬೆಂಗಳೂರು: ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದ 15 ತಿಂಗಳ ಹಿಂದೆ ಕೊವಿಡ್‌ನಿಂದ ಮತಪಟ್ಟಿದ್ದ ವ್ಯಕ್ತಿಗಳಿಬ್ಬರ ಮೃತದೇಹಗಳನ್ನು, ಆಸ್ಪತ್ರೆಯ ಶವಾಗಾರದಲ್ಲೇ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.

2020 ಜುಲೈನಲ್ಲಿ ಒಬ್ಬ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಕೊವಿಡ್‌ನಿಂದ ಮೃತಪಟ್ಟಿದ್ದರು. ಆಗ ತಾವೇ ಶವ ಸಂಸ್ಕಾರ ಮಾಡಿದ್ದೇವೆಂದು ಸಂಬಂಧಿಕರಿಗೆ ತಿಳಿಸಿದ್ದರು. ಅದನ್ನು ನಂಬಿದ್ದ ಮೃತರ ಸಂಬಂಧಿಕರು ಎಲ್ಲಾ ಕಾರ್ಯಗಳನ್ನೂ ಮಾಡಿ ಮುಗಿಸಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಎರಡು ಮೃತದೇಹಗಳನ್ನು ಶವಾಗಾರದಲ್ಲಿಟ್ಟು ಮರೆತುಹೋಗಿದ್ದರು. 15 ತಿಂಗಳ ನಂತರ ಮೃತದೇಹಗಳು ಹಾಗೆಯೇ ಇರುವುದು ಗೊತ್ತಾಗಿದೆ. ಕೂಡಲೇ ಸಿಬ್ಬಂದಿ, ಮೃತರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

Abs 2019-nCoV RNA virus – 3d rendered image on black background.
Viral Infection concept. MERS-CoV, SARS-CoV, ТОРС, 2019-nCoV, Wuhan Coronavirus.
Hologram SEM view.

ಚಾಮರಾಜಪೇಟೆಯ ದುರ್ಗಾ ಹಾಗೂ ಕೆ.ಪಿ.ಅಗ್ರಹಾರದ ಮುನಿರಾಜು ಕೊವಿಡ್‌ನಿಂದ ಮೃತಪಟ್ಟಿದ್ದವರು. ಈ ಎರಡೂ ಮೃತದೇಹಗಳನ್ನು ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಸಿಬ್ಬಂದಿ ಶವಾಗಾರದಲ್ಲಿಟ್ಟು ಮರೆತುಹೋಗಿದ್ದಾರೆಂದು ಆರೋಪಿಸಲಾಗಿದೆ.

Share Post