ಫೋಟೋದಲ್ಲಿ ನೋಡಿದ್ದು ಇವಳಲ್ಲ!; ತಾಳಿ ಕಟ್ಟುವ ವೇಳೆ ವರನ ರಂಪಾಟ!
ಇನ್ನೇನು ತಾಳಿ ಕಟ್ಟಬೇಕು.. ಆಗ ವಧುವಿನ ಮುಖದ ಕಡೆ ವರ ಒಂದು ಲುಕ್ ಹಾಕಿದ್ದ.. ವಧುವಿನ ಮುಖ ನೋಡುತ್ತಿದ್ದಂತೆ ವರ ಪೆಚ್ಚು ಮೋರೆ ಹಾಕಿದ್ದ.. ನಾನು ಫೋಟೋದಲ್ಲಿ ನೋಡಿದ್ದ ಹುಡುಗಿಯೇ ಬೇರೆ, ಇಲ್ಲಿರುವ ಹುಡುಗಿಯೇ ಬೇರೆ.. ನಾನು ತಾಳಿ ಕಟ್ಟಲ್ಲ ಎಂದು ಆತ ಹಠ ಹಿಡಿದು ಕುಳಿತ ಘಟನೆ ನಡೆದಿದೆ..
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಯಾರು ಎಷ್ಟೇ ಹೇಳಿದರೂ ವರ ಕೇಳಿಲ್ಲ.. ವಧು ಕಪ್ಪಗಿದ್ದಾಳೆ.. ನಾನು ಫೋಟೋದಲ್ಲಿ ನೋಡಿದಾಗ ಬೀಳಿ ಬಣ್ಣದಲ್ಲಿದ್ದಳು.. ವಧುವನ್ನು ಬದಲಿಸಲಾಗಿದೆ ಎಂದು ಹೇಳಿ ಮದುವೆ ಕ್ಯಾನ್ಸಲ್ ಮಾಡಿದ್ದಾನೆ.. ಅಷ್ಟೇ ಅಲ್ಲ, ಮದುವೆ ಖರ್ಚಿಗೆಂದು ಕೊಟ್ಟಿದ್ದ ಹಣ ವಾಪಸ್ ಕೊಡುವಂತೆ ಹಠ ಹಿಡಿದ ಘಟನೆಊ ನಡೆದಿದೆ..
ಹರ್ಯಾಣದ ಹುಡುಗಿನಗೆ ಹುಡುಗಿ ನೋಡುತ್ತಿದ್ದರು.. ಎಲ್ಲಾ ಹುಡುಕಿದರೂ ಸಿಕ್ಕಿರಲಿಲ್ಲ.. ಕೊನೆಗೆ ಆತನ ಪೋಷಕರು ಉತ್ತರ ಪ್ರದೇಶದ ಗೋರಖ್ಪುರದ ಚೌರಿಚೌರಾ ಎಂಬಲ್ಲಿ ಹುಡುಗಿಯನ್ನು ನೋಡಿದ್ದರು.. ಅವರು ಕಳುಹಿಸಿದ್ದ ಫೋಟೋ ನೋಡಿ ಹುಡುಗ ಒಪ್ಪಿಕೊಂಡಿದ್ದ.. ಹುಡುಗಿ ಕಡೆಯವರು ಬಡವರಾದ್ದರಿಂದ ಮದುವೆ ಮಾಡಿಕೊಡಲು ವರನ ಕಡೆಯವರಿಂದಲೇ ಹಣ ಕೇಳಿದ್ದರು.. ಅದನ್ನೂ ಕೊಡಲಾಗಿತ್ತು.. ವಧುವಿನ ಊರಿನಲ್ಲಿಯೇ ಮದುವೆ ಕೂಡಾ ಏರ್ಪಾಟು ಮಾಡಲಾಗಿತ್ತು.. ಕೊನೇ ಸಮಯದಲ್ಲಿ ವಧುವಿನ ಮುಖ ನೋಡಿ ಆತ ಮದುವೆಯೇ ಬೇಡ ಎಂದಿದ್ದಾನೆ..
ಕೊನೆಗೆ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..