CrimeDistricts

ಮಗನನ್ನು ಕೊಲ್ಲಲು ಹೋಗಿ ತಂದೆಯನ್ನು ಹತ್ಯೆ ಮಾಡಿದ ಗ್ಯಾಂಗ್‌; ಏನು ನಡೀತಿದೆ ರಾಜ್ಯದಲ್ಲಿ..?

ರಾಮನಗರ; ಬರ್ತ್‌ ಡೇ ಪಾರ್ಟಿ ವಿಚಾರಕ್ಕೆ ನಡೆದ ಜಗಳ ಏನೇನೋ ಆಗಿ, ಕೊನೆಗೆ ಯಾರನ್ನೋ ಕೊಲೆ ಮಾಡಿದ ಹಂತಕ್ಕೆ ಮುಟ್ಟಿದೆ.. ಇತ್ತೀಚೆಗೆ, ರಾಜ್ಯದ ವಿವಿಧೆಡೆ ಪುಡಿ ರೌಡಿಗಳ ಗ್ಯಾಂಗ್‌ಗಳು ಹುಟ್ಟಿಕೊಳ್ಳುತ್ತಿವೆ.. ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆ.. ರಾಮನಗರ ಜಿಲ್ಲೆಯಲ್ಲಿ ಇಂತಹ ಪುಂಡರ ಗ್ಯಾಂಗ್‌ ಒಂದು ಮಗನನ್ನು ಕೊಲ್ಲಲು ಸ್ಕೆಚ್‌ ಹಾಕಿ, ಕೊನೆಗೆ ಆತನ ತಂದೆಯನ್ನು ಕೊಂದುಬಂದಿದ್ದಾರೆ.. ಈ ಘಟನೆಯಿಂದ ರಾಮನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ..

ರಾಮನಗರ ಜಿಲ್ಲೆ ಕನಕಪುರ ಪಟ್ಟಣದ ‌ಕುರುಪೇಟೆಯ ಮಾಧವನಗರದಲ್ಲಿ ಇಂತಹದ್ದೊಂದು ಕೃತ್ಯ ನಡೆದಿದೆ.. ಕೊಲೆ ಮಾಡಿದವರು, ಕೊಲೆಯಾದವರ ಮಗ ಎಲ್ಲರೂ ಸ್ನೇಹಿತರೇ ಆಗಿದ್ದರು.. ಆದ್ರೆ ಏಪ್ರಿಲ್‌ ನಲ್ಲಿ ಹುಟ್ಟುಹಬ್ಬ ಆಚರಣೆ ಸಂಬಂದ ಇವರ ನಡುವೆ ಜಗಳ ನಡೆದಿತ್ತು.. ಕೊಲೆಯಾದ ವ್ಯಕ್ತಿಯ ಮಗ ರುದ್ರೇಶ್‌, ಬರ್ತ್‌ ಡೇ ಬಾಯ್‌ ಅರುಣ್‌ ಮೇಲೆ ಹಲ್ಲೆ ಮಾಡಿದ್ದ.. ಈ ಕಾರಣಕ್ಕಾಗಿ ರುದ್ರೇಶ್‌ ಇದೇ ವಿಚಾರವಾಗಿ ಜೈಲಿಗೆ ಬಂದಿದ್ದ.. ಜೈಲಿಗೆ ಹೋಗಿ ಬಂದವನನ್ನು ಮುಗಿಸಬೇಕು ಎಂದೇ ಈ ಗ್ಯಾಂಗ್‌ ಹೊರಟಿತ್ತು.. ಆದ್ರೆ ಅಲ್ಲಿ ಬೇರೆಯದೇ ಆಗಿದೆ..

ಕನಕಪುರ ಪಟ್ಟಣದ‌ ನಲವತ್ತೈದು ವರ್ಷದ ಗುಂಡಯ್ಯ ಎಂಬುವವರೇ ಕೊಲೆಯಾದ ವ್ಯಕ್ತಿಯಾಗಿದ್ದಾರೆ.. ಗುಂಡಯ್ಯನ ಮಗ ರುದ್ರೇಶ್‌ ಹಾಗೂ ಅರುಣ್‌ ಎಂಬುವವರ ನಡುವೆ ಕಿರಿಕ್‌ ಆಗಿತ್ತು.. ಇದೇ ವಿಚಾರವಾಗಿ ರುದ್ರೇಶ್‌ ಜೂಲು ವಾಸ ಅನುಭವಿಸಿ ಬಂದಿದ್ದ.. ಜೈಲಿಂದ ಹೊರಬಂದ ರುದ್ರೇಶ್‌ನನ್ನು ಕೊಲೆ ಮಾಡಲೆಂದೇ ಅರುಣ್‌ ಅಂಡ್‌ ಟೀಂ ರುದ್ರೇಶ್‌ ಮನೆ ಬಳಿ ಹೋಗಿತ್ತು.. ಈ ವೇಳೆ ರುದೇಶ್‌ ಅವರ ಅಪ್ಪ ಗುಂಡಯ್ಯ, ಮಗನ ಪರ ವಹಿಸಿಕೊಂಡು ಮಾತನಾಡಿದ್ದಾರೆ.. ಇದರಿಂದ ಕೆರಳಿದ ಅರುಣ್‌ ಅಂಡ್‌ ಗ್ಯಾಂಡ್‌ ರಾಡ್‌ನಿಂದ ಗುಂಡಯ್ಯ ಮೇಲೆ ಹಲ್ಲೆ ಮಾಡಿದೆ.. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗುಂಡಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಮಗ ರುದ್ರೇಶ್‌ ಮೇಲಿನ ಕೋಪಕ್ಕೆ ಆತನ ಅಪ್ಪನನ್ನು ಕೊಲೆ ಮಾಡಿದ ಗ್ಯಾಂಗ್‌ ಅಲ್ಲಿಂದ ಎಸ್ಕೇಪ್‌ ಆಗಿತ್ತು..

ಇದೀಗ ಪೊಲೀಸರು ಪ್ರಮುಖ ಆರೋಪಿ ಅರುಣ್‌ ಹಾಗೂ ಇನ್ನಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ..

 

Share Post