DistrictsHealth

ಮಾವಿನಹಣ್ಣು ಕೀಳಲು ಮರ ಹತ್ತಿದ್ದಾಗ ವಿದ್ಯುತ್‌ ಸ್ಪರ್ಶ; 16 ವರ್ಷದ ಬಾಲಕ ಸಾವು!

ಮಂಡ್ಯ; ಮಾವಿನ ಹಣ್ಣು ಕೀಳಲು ಮರ ಹತ್ತಿದ್ದ ಬಾಲಕನಿಗೆ ವಿದ್ಯುತ್‌ ಸ್ಪರ್ಶಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.. ಮಾರಗೌಡನಹಳ್ಳಿ ಗ್ರಾಮದ ಹದಿನಾರು ವರ್ಷದ ಸಂಜಯ್‌ ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿ.
ಈತ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ ಪರೀಕ್ಷೆ ಪಾಸಾಗಿದ್ದ.. ಕಾಲೇಜಿಗೆ ಹೋಗಬೇಕಿತ್ತು.. ಆದ್ರೆ ಮಾವಿನ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.. ಮಾವಿನ ಮರ ಹತ್ತಿದ್ದಾಗ ಆತನಿಗೆ ಕರೆಂಟ್‌ ಶಾಕ್‌ ಹೊಡೆದಿದೆ.. ಇದರಿಂದಾಗಿ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ..
ಮಾವಿನ ಮರದ ಮೇಲೆ ವಿದ್ಯುತ್‌ ತಂತಿ ಹಾದುಹೋಗಿತ್ತು.. ಆ ತಂತಿ ಮರಕ್ಕೆ ತಗಲುತ್ತಿತ್ತು.. ಹೀಗಾಗಿ ಮರದಲ್ಲಿ ವಿದ್ಯುತ್‌ ಪ್ರವಹಿಸಿದೆ.. ಇದರಿಂದಾಗಿ ಮಾವು ಕೀಳಲು ಹೋದ ಬಾಲಕ ಸಾವನ್ನಪ್ಪಿದ್ದಾನೆ.. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Share Post