ಲಕ್ಷ ಲಕ್ಷ ಖರ್ಚು ಮಾಡಿ ಪ್ರಾಣಿಗಳಂತೆ ಬದಲಾಗ್ತಾನಂತೆ ಜಪಾನಿನ ಈ ವ್ಯಕ್ತಿ!
ಟೋಕಿಯೋ; ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಬದಲಾಗುವುದನ್ನು ನೋಡಿದ್ದೇವೆ.. ಆದ್ರೆ ಇಲ್ಲಿಒಬ್ಬ ವ್ಯಕ್ತಿ ನಾಯಿ ಸೇರಿ ವಿವಿಧ ಪ್ರಾಣಿಗಳಾಗಿ ಬದಲಾಗಲು ಹೊರಟಿದ್ದಾನೆ.. ಅದಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡೋದಕ್ಕೂ ರೆಡಿಯಾಗಿದ್ದಾನೆ.. ಮನುಷ್ಯನಿಗಿಂತ ನಾಯಿ ನಿಯತ್ತಿನ ಪ್ರಾಣಿ ಎಂದು ಹೇಳುತ್ತಾರೆ.. ಅದಕ್ಕೇನೇನೋ ಈ ವ್ಯಕ್ತಿಗೆ ಮನುಷ್ಯನಾಗಿರುವ ಇಷ್ಟವಿಲ್ಲವಂತೆ.. ನಾನು ನಾಯಿಯಾಗ್ತೀನಿ, ಇನ್ನಿತರೆ ಪ್ರಾಣಿಗಳಾಗ್ತೀನಿ ಅಂತ ಹೇಳುತ್ತಿದ್ದಾನೆ..
ಜಪಾನ್‌ನ ಟೋಕೋ ಎಂಬ ವ್ಯಕ್ತಿ ಇಂತಹದ್ದೇ ಒಂದು ಕಾರಣಕ್ಕೆ ಈ ಹಿಂದೆಯೂ ಸುದ್ದಿಯಾಗಿದ್ದ.. ವರ್ಷದ ಹಿಂದೆ ಈ ಟೋಕೋ ಎಂಬ ವ್ಯಕ್ತಿಗೆ ನಾಯಿಯಂತೆ ಕಾಣುವ ಆಸೆಯಾಗಿತ್ತು.. ಅದಕ್ಕಾಗಿ ಆತ 12 ಲಕ್ಷ ರೂಪಾಯಿ ಖರ್ಚು ಮಾಡಿ ಸೇಮ್ ನಾಯಿಯಂತೆ ಕಾಣುನ ಕಾಸ್ಟ್ಯೂಮ್ ರೆಡಿ ಮಾಡಿಸಿದ್ದ.. ಅದನ್ನು ಧರಿಸಿ, ತಮ್ಮ ಹತ್ತಿರದ ಪಾರ್ಕ್‌ನಲ್ಲಿ ನಾಯಿಯಂತೆ ಓಡಾಡಿದ್ದ.. ಈ ವೇಳೆ ನಿಜವಾದ ನಾಯಿಗಳು ಈ ಹೊಸ ನಾಯಿಯನ್ನು ನೋಡಿ ಬೊಗಳಿದ್ದವು.. ಕೆಲವು ಸ್ನೇಹ ಬೆಳೆಸಲು ಪ್ರಯತ್ನಿಸಿದ್ದವು.. ಪಾರ್ಕ್‌ನಲ್ಲಿ ಓಡಾಡುವ ಜನರಂತೂ ಟೊಕೋ ಕಾಸ್ಟ್ಯಾಮ್ ನೋಡಿ ನಿಜವಾಗಿಯೂ ಆಯಿಯೇ ಎಂದುಕೊಂಡಿದ್ದರು.. ಈ ಸುದ್ದಿ ಬಾರೀ ವೈರಲ್ ಆಗಿತ್ತು.. ಟೋಕೋ ಆಸೆ ಇಷ್ಟಕ್ಕೇ ನಿಂತಿಲ್ಲ.. ಆತನಿಗೆ ಮನುಷ್ಯನಾಗಿರೋದಕ್ಕೆ ಇಷ್ಟವಿಲ್ಲವಂತೆ.. ನಾಯಿ, ನರಿ, ಪಾಂಡಾ, ಕರಡಿ ಅಥವಾ ಬೆಕ್ಕು ಇದರಲ್ಲಿ ಯಾವುದಾದರೊಂದು ಪ್ರಾಣಿಯಾಗಿ ಬದಲಾಗಬೇಕು ಎಂದು ಆಸೆ ವ್ಯಕ್ತಪಡಿಸುತ್ತಿದ್ದಾನೆ.. ಮನುಷ್ಯ ನಾಯಿಯಂತೆ ಬದಲಾಗೋದು ತುಂಬಾ ಸುಲಭವಾದ್ದರಿಂದ ನಾನು ನಾಯಿಗಾಗಿ ಬದಲಾಗ್ತೀನಿ ಅಂತ ಟೋಕೋ ಹೇಳ್ತಿದ್ದಾನೆ.. ಮುಂದಿನ ದಿನಗಳ ಇತರ ಪ್ರಾಣಿಗಳಾಗಿಯೂ ಜೀವನ ಕಳೆಯುತ್ತೇನೆ ಎಂದೂ ಹೇಳಿಕೊಂಡಿದ್ದಾರೆ..
ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಟೋಕೋ “ನಾನು ಪ್ರಾಣಿ ಆಗಲು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದ.. ನನ್ನ ಮುಂದಿನ ಜೀವನವನ್ನು ಪ್ರಾಣಿಗಳಂತೆ ಕಳೆಯಲು ಇಷ್ಟಪಡುತ್ತೇನೆ.. ಸಂಪೂರ್ಣವಾಗಿ ಬದಲಾಗೋದು ಕಷ್ಟ.. ಆದ್ರೆ ಸೇಮ್ ಟು ಸೇಮ್ ಪ್ರಾಣಿಗಳ ಕಾಸ್ಟ್ಯೂಮ್ ತಯಾರಿಸಿ ಅವುಗಳನ್ನು ಧರಿಸಿಕೊಂಡು ಪ್ರಾಣಿಗಳಂತೆ ಬದುಕುತ್ತೇವೆ.. ಪಾಂಡಾ, ನರಿ, ಕರಡಿ ಅಥವಾ ಬೆಕ್ಕಾಗಿ ಕಾಣಿಸಿಕೊಳ್ಳುವ ಆಸೆ ನನಗಿದೆ ಎಂದು ಟೋಕೋ ಹೇಳಿಕೊಂಡಿದ್ದಾನೆ..