Politics

ಬೆಂಗಳೂರಿನ ಮತಗಟ್ಟೆಗೆ ಬಾರದಿರಲು ಕಾರಣಗಳೇನು..?

ಬೆಂಗಳೂರು; ಈ ಬಾರಿಯೂ ಕೂಡಾ ಬೆಂಗಳೂರಿನ ಜನ ಮತಗಟ್ಟೆಗೆ ಬಂದಿಲ್ಲ.. ಬೇರೆ ಕ್ಷೇತ್ರಗಳಿಗೆ ಹೋಲಿಸಿಕೊಂಡರೆ ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತದಾನ ಆಗಿದೆ.. ರಾಜ್ಯದಲ್ಲಿ ನಿನ್ನೆ ಒಟ್ಟು 14 ಕ್ಷೇತ್ರಗಳಿಗೆ ಮತದಾನವಾಗಿದ್ದು, ಒಟ್ಟಾರೆ ಶೇ.69.23ರಷ್ಟು ಮತದಾನ ಆಗಿದೆ.. ಆದ್ರೆ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ತುಂಬಾನೇ ಕಡಿಮೆ ಮತದಾನ ನಡೆದಿದೆ..

ಇದನ್ನೂ ಓದಿ; ಮಗನನ್ನು ಕೊಲ್ಲಲು ತಂದೆಯಿಂದ 75 ಲಕ್ಷಕ್ಕೆ ಸುಪಾರಿ; ಗುಂಡಿನ ದಾಳಿಯಲ್ಲಿ ಗ್ರೇಟ್‌ ಎಸ್ಕೇಪ್‌!

ಬೆಂಗಳೂರು ಮೂರು ನಗರ ಕ್ಷೇತ್ರಗಳಾದ ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಮತದಾರರ ಶೇಕಡಾವಾರು ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ಬೆಂಗಳೂರು ಕೇಂದ್ರದಲ್ಲಿ ಅಂದಾಜು ಶೇ.52.81, ಬೆಂಗಳೂರು ಉತ್ತರದಲ್ಲಿ ಶೇ.54.42 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ.53.15ರಷ್ಟು ಮತದಾನವಾಗಿದೆ.

ಇದನ್ನೂ ಓದಿ; ಭಾರೀ ಪ್ರಮಾಣದ ಮಾನವ ಕಳ್ಳಸಾಗಣೆ; ಅಧಿಕಾರಿಗಳಿಂದ 95 ಮಕ್ಕಳ ರಕ್ಷಣೆ..!

2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ 54.32, ಬೆಂಗಳೂರು ಉತ್ತರದಲ್ಲಿ ಶೇ 54.76 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ 53.70 ಮತದಾನವಾಗಿತ್ತು.. ಕಳೆದ ಚುನಾವಣೆಗೆ ಹೋಲಿಸಿಕೊಂಡರೆ ಈ ಬಾರಿ ಮತದಾನದ ಪ್ರಮಾಣ ಈ ಮೂರೂ ಕ್ಷೇತ್ರಗಳಲ್ಲಿ ಮತ್ತಷ್ಟು ಕಡಿಮೆಯಾಗಿದೆ..

ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಅಂದಾಜು ಶೇ.67.29ರಷ್ಟು ಮತದಾನವಾಗಿದೆ. ಮಂಡ್ಯ ಮತ್ತು ಕೋಲಾರದಲ್ಲಿ ಕ್ರಮವಾಗಿ ಶೇ.81.48 ಮತ್ತು ಶೇ.78.07 ಮತದಾನವಾಗಿದೆ.

ಇದನ್ನೂ ಓದಿ; ಸಿಗರೇಟ್‌ ಕೊಡಲಿಲ್ಲ ಅಂತ ಇಬ್ಬರು ಯುವಕರ ಕೊಲೆ..!

ಮತಗಟ್ಟೆಗೆ ಮತದಾರರು ಬಾರದಿರಲು ಕಾರಣಗಳೇನು..?;

ಬೆಂಗಳೂರಿನಲ್ಲಿ ಕ್ಲಾಸ್‌ ಮತದಾರರು ಮತಗಟ್ಟೆಗೆ ಬರುತ್ತಿಲ್ಲ

ಬೇಸಿಗೆ ಕಾರಣದಿಂದ ಯಾರು ಕ್ಯೂನಲ್ಲಿ ನಿಲ್ಲುತ್ತಾರೆ ಎಂಬ ಆಲಸ್ಯ

ಶುಕ್ರವಾರ ಮತದಾನ ಇದ್ದಿದ್ದರಿಂದ ಮತದಾನ ಮಾಡೋದು ಬಿಟ್ಟು ಟ್ರಿಪ್‌ ಹೋಗಿರಬಹುದು

ಇದನ್ನೂ ಓದಿ; ಟೈರ್‌ ಬ್ಲಾಸ್ಟ್‌ ಆಗಿ ಕಾರು ಪಲ್ಟಿ; ಇಬ್ಬರ ದುರ್ಮರಣ, 7 ಮಂದಿಗೆ ಗಾಯ!

ಆದ್ರೆ ಇವಿಷ್ಟೇ ಕಾರಣಗಳು ಅಲ್ಲ ಅನ್ನೋದು ಮತದಾರರನ್ನು ಕೇಳಿದರೆ ಗೊತ್ತಗುತ್ತೆ.. ಯಾಕಂದ್ರೆ, ಬೆಂಗಳೂರಿನಲ್ಲಿ ವಿದ್ಯಾವಂತ ಹಾಗೂ ಕ್ಲಾಸ್‌ ಮತದಾರರಿಗೆ ಮತದಾನ ಮಾಡಬೇಕೆಂಬ ಆಸಕ್ತಿ ಇದೆ.. ಆದ್ರೆ ಇದರಲ್ಲಿ ಹೆಚ್ಚಿನವರಿಗೆ ರಾಜಕಾರಣ ಹಾಗೂ ರಾಜಕಾರಣಿಗಳ ಬಗ್ಗೆ ನಿರಾಸಕ್ತಿದೆ.. ಬಹುತೇಕ ಎಲ್ಲಾ ರಾಜಕಾರಣಿಗಳೂ ಕೂಡಾ ಬಡ ಮತದಾರರನ್ನು ಸೆಳೆಯಲು ಹೆಚ್ಚು ಪ್ರಯತ್ನಪಡುತ್ತಾರೆ.. ಆದ್ರೆ ಶ್ರೀಮಂತ ಹಾಗೂ ಕ್ಲಾಸ್‌ ಮತದಾರರನ್ನು ಸೆಳೆಯೋ ಗೋಜಿಗೇ ಹೋಗೋದಿಲ್ಲ.. ವಿದ್ಯಾವಂತ ಮತದಾರರಿಗೂ ಹಲವಾರು ಸಮಸ್ಯೆಗಳಿವೆ.. ಆದ್ರೆ ಅವುಗಳನ್ನು ಪರಿಹರಿಸುವವರಿಲ್ಲ.. ಜನಪ್ರತಿನಿಧಿಗಳ ಬಳಿ ಹೋಗಿ ಅವರಿಗಾಗಿ ಗಂಟೆಗಟ್ಟಲೆ ಕಾಯುವ ವ್ಯವದಾನ ಅವರಿಗಿಲ್ಲ.. ಬೇಗ ಕೆಲಸ ಆಗಬೇಕು ಅಂದ್ರೆ ಲಂಚ ಕೊಡಬೇಕು.. ವಿಧಿಯಿಲ್ಲದೆ ಶ್ರೀಮಂತ ಮತದಾರರು ಏನನ್ನೇ ಆಗಲೀ ಲಂಚ ಕೊಟ್ಟೇ ಕೆಲಸ ಮಾಡಿಸಿಕೊಂಡು ಬರುತ್ತಾರಂತೆ.. ಹೀಗಾಗಿ ಜನಪ್ರತಿನಿಧಿಗಳ ಅವಶ್ಯಕತೆ ಏಕೆ ಎಂಬ ಮನೋಭಾವನೆ ಹೆಚ್ಚಿನವರಲ್ಲಿ ಬೆಳೆದಿದೆ ಎಂದು ಹೇಳಲಾಗುತ್ತಿದೆ..

ಎಲ್ಲಾ ರಾಜಕಾರಣಿಗಳೂ ಸುಳ್ಳು ಭರವಸೆಗಳನ್ನು ನೀಡುತ್ತಾರೆ.. ಮೂಲ ಸೌಕರ್ಯಗಳನ್ನೂ ಸರಿಯಾಗಿ ಮಾಡೋದಿಲ್ಲ.. ಕ್ಲಾಸ್‌ ಮತದಾರರ ಸಮಸ್ಯೆಗಳನ್ನು ಕೇಳೋಕೆ ಯಾರೂ ಬರೋದೇ ಇಲ್ಲ ಎಂದು ಹೇಳುವವರು ಸಂಖ್ಯೆಯೂ ಹೆಚ್ಚಿದೆ.. ಹೀಗಾಗಿಯೇ ಕ್ಲಾಸ್‌ ಮತದಾರರು ರಾಜಕಾರಣ, ಚುನಾವಣೆ ಅಂದ್ರೆ ಅಯ್ಯೋ ಬಿಡಿ ಎಂದು ಬಿಡುತ್ತಾರೆ..

ಇತಹ ಮತದಾರರ ಮನವೊಲಿಸುವ, ಅವರರ ಜವಾಬ್ದಾರಿಯನ್ನು ನೆನಪಿಸುವ ಕೆಲಸ ಆಗಬೇಕಿದೆ.. ಪ್ರತಿ ಬಾರಿಯೂ ಚುನಾವಣಾ ಆಯೋಗ ಹಾಗೂ ಸರ್ಕಾರಗಳು ಜನರ ಕಣ್ತೆರೆಸುವ ಪ್ರಯತ್ನ ಮಾಡುತ್ತವೆ.. ಆದರೂ ಕೂಡಾ ಶೇಕಡಾವಾರು ಮತದಾನ ಮಾತ್ರ ಯಾವಾಗಲೂ ಕಡಿಮೆಯಾಗುತ್ತಲೇ ಇದೆ..

 

ಚುನಾವಣಾ ಆಯೋಗದ ಅಧಿಕಾರಿಗಳು ಭಾಗವಹಿಸುವಿಕೆಯನ್ನು ಹೆಚ್ಚಿಸಲು ತೀವ್ರ ಪ್ರಯತ್ನ ಮಾಡಿದರೂ ಮತದಾನದ ಪ್ರಮಾಣದಿಂದಾಗಿ ನಿರಾಶೆಗೊಂಡಿತು.
“ಅದಕ್ಕೆ ಯಾವುದೇ ವಿವರಣೆ ಇಲ್ಲ. ಅದು ಸತ್ಯ” ಎಂದು ಇಸಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚುನಾವಣಾಧಿಕಾರಿಗಳ ಪ್ರಕಾರ, ನಗರದಲ್ಲಿನ ಮತಗಟ್ಟೆಗಳಿಗೆ ಜನರು ಬಾರದಿರುವುದಕ್ಕೆ ಬೇಸಿಗೆಯ ಬಿಸಿಯೂ ಒಂದು ಕಾರಣ ಎಂದು ಹೇಳಲಾಗುತ್ತದೆ.

Share Post