ಮತಯಂತ್ರ ಕೈಕೊಟ್ಟು ರಾಜ್ಯದ ಹಲವೆಡೆ ಗೊಂದಲ; ಮತದಾರರ ಆಕ್ರೋಶ
ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಸೇರಿ ದೇಶದ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.. ರಾಜ್ಯದ 14 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ನಡೆಯುತ್ತಿದ್ದು, ಜನರ ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ.. ಈ ನಡುವೆ ರಾಜ್ಯದ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.. ಇದರಿಂದ ಮತದಾನ ಕೂಡಾ ವಿಳಂಬವಾಯಿತು..
ಇದನ್ನೂ ಓದಿ; ರಜೆ, ಹಣಕ್ಕಾಗಿ ಗರ್ಭಿಣಿ ಎಂದು ಸುಳ್ಳು ಮಾಹಿತಿ; 17 ಬಾರಿ ಸುಳ್ಳು ಹೇಳಿ ಸಿಕ್ಕಿಬಿದ್ದ ನಾರಿ!
ಚಿಕ್ಕಮಗಳೂರಿನ ಗ್ರಾಮದಲ್ಲಿ ಮತಯಂತ್ರ ದೋಷ;
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿ ಇವಿಎಂ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು.. ಇದರಿಂದಾಗಿ ಮತ ಚಲಾಯಿಸಲು ಬಂದ ಮತದಾರರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.. ಕೂಲಿ ಕೆಲಸಕ್ಕೆ ಹೋಗಬೇಕಿದ್ದ ಕಾರ್ಮಿಕರು, ಬೇಗ ಮತದಾನಕ್ಕೆ ಅವಕಾಶ ಸಿಗದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.. ಇನ್ನು ಅರೇನೂರು ಗ್ರಾಮದ ಮತಗಟ್ಟೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು..
ಇದನ್ನೂ ಓದಿ; ಕೊಪ್ಪದಲ್ಲಿ ಮದುವೆ ಊಟ ಸೇವಿಸಿ 150 ಮಂದಿ ಅಸ್ವಸ್ಥ!
ಮಧುಗಿರಿ ಬಳಿಯ ಗ್ರಾಮದಲ್ಲೂ ಮತಯಂತ್ರ ಸಮಸ್ಯೆ;
ಇನ್ನು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಕೂಡಾ ಮತಯಂತ್ರ ಕೈಕೊಟ್ಟಿತ್ತು.. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.. ಅನಂತರ ಮತಯಂತ್ರ ಸರಿ ಮಾಡಿ, 45 ನಿಮಿಷ ಲೇಟಾಗಿ ಮತದಾನ ಶುರು ಮಾಡಲಾಯಿತು.. ವಿವಿ ಪ್ಯಾಡ್ ನಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣವಾಗಿತ್ತು..
ಇನ್ನು ತುಮಕೂರು ನಗರದ 66ನೇ ಮತಗಟ್ಟೆಯಲ್ಲಿ ಕೂಡಾ ಮತಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.. ಅರ್ಧ ಗಂಟೆ ಕಾಲ ಮತದಾನ ವಿಳಂಬವಾಯಿತು.. ಅನಂತರ ಮತಯಂತ್ರ ಸರಿ ಮಾಡಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು..
ಇದನ್ನೂ ಓದಿ; ಕಂಕುಳಿನ ಕೂದಲು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ರೂಪದರ್ಶಿ!
ಮಂಡ್ಯದ ಮಾಕವಳ್ಳಿಯಲ್ಲೂ ವಿಳಂಬ;
ಇತ್ತ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಮಾಕವಳ್ಳಿಯಲ್ಲೂ ಮತದಾನ ವಿಳಂಬವಾಯಿತು.. ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು.. ಅದನ್ನು ದುರಸ್ತಿ ಮಾಡಲು 40 ನಿಮಿಷ ತೆಗೆದುಕೊಳ್ತು.. ಅನಂತರ 7.40ಕ್ಕೆ ಸರಿಯಾದ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ..
ಇದನ್ನೂ ಓದಿ; ಇಂದು ಎಲ್ಲೆಲ್ಲಿ ಮತದಾನ..?; ಪ್ರಮುಖ ಅಭ್ಯರ್ಥಿಗಳು ಯಾರು..?