ಕಂಕುಳಿನ ಕೂದಲು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ರೂಪದರ್ಶಿ!
ಮಾರುಕಟ್ಟೆಯಲ್ಲಿ ತಲೆಕೂದಲಿಗೆ ಭಾರಿ ಬೆಲೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಹಾಗಂತ, ಯಾರೂ ಕೂಡಾ ತಮ್ಮ ಕೂದಲು ಮಾರಿ ಲಕ್ಷ ಲಕ್ಷ ಸಂಪಾದನೆ ಮಾಡೋದಕ್ಕೆ ಆಗೋದಿಲ್ಲ.. ಆದ್ರೆ ಇಲ್ಲೊಬ್ಬರು ರೂಪದರ್ಶಿ ಇದ್ದಾರೆ.. ಅವರು, ತನ್ನ ಮೈಮೇಲಿನ ಕೂದಲನ್ನು ಮಾರಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ..
ಇದನ್ನೂ ಓದಿ; ಇಂದು ಎಲ್ಲೆಲ್ಲಿ ಮತದಾನ..?; ಪ್ರಮುಖ ಅಭ್ಯರ್ಥಿಗಳು ಯಾರು..?
ಕಂಕುಳ ಹಾಗೂ ಖಾಸಗಿ ಅಂಗಗಳ ಕೂದಲು ಮಾರಾಟ;
ಲಂಡನ್‌ನ ಖ್ಯಾತ ರೂಪದರ್ಶಿ ಹಾಗೂ ಸಂಗೀತಗಾರ್ತಿ ಕ್ಯಾಮಿಲ್ಲೆ ಅಲೆಕ್ಸಾಂಡರ್ ಎಂಬ 25 ವರ್ಷದ ಮಹಿಳೆ ತನ್ನ ಕಂಕುಳ ಹಾಗೂ ಇತರ ಖಾಸಗಿ ಭಾಗಗಳ ಕೂದಲನ್ನು ಮಾರಾಟ ಮಾಡುತ್ತಿದ್ದಾರೆ.. ಇದರಿಂದ ಆಕೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಬರುತ್ತಿದೆಯಂತೆ.. ಕಳೆದ ನಾಲ್ಕು ವರ್ಷಗಳಿಂದ ರೂಪದರ್ಶಿ ಈ ಕೂದಲು ಮಾರಾಟ ಮಾಡುತ್ತಿದ್ದಾರೆ.. ಇದರಿಂದಾಗಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ.. ಈ ಕೂದಲನ್ನು ಖರೀದಿಸಲು ರೂಪದರ್ಶಿಯ ಅಭಿಮಾನಿಗಳು ಮುಗಿಬೀಳ್ತಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ..
ಇದನ್ನೂ ಓದಿ; ವೋಟರ್ ಐಡಿ ಇಲ್ಲದಿದ್ದರೂ ಮತ ಹಾಕಬಹುದು; ಹೇಗೆ ಗೊತ್ತಾ..?
ಮ್ಯೂಸಿಕ್ ಬ್ಯಾಂಡ್‌ನಿಂದ ಆರ್ಥಿಕ ನಷ್ಟ;
ರೂಪದರ್ಶಿ ಹಾಗೂ ಸಂಗೀತಗಾರ್ತಿ ಕ್ಯಾಮಿಲ್ಲೆ ಅಲೆಕ್ಸಾಂಡರ್ ಅವರು ಎ ವಾಯ್ಡ್ ಎಂಬ ಮ್ಯೂಸಿಕ್ ಬ್ಯಾಂಡ್ ನಡೆಸುತ್ತಿದ್ದರು.. ಆದ್ರೆ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದರು.. ಅದರ ನಂತರ ಅವರು ಸೈಟ್ ಓನ್ಲಿ ಫ್ಯಾನ್ಸ್ ನಲ್ಲಿ ಖಾತೆ ಪ್ರಾರಂಭಿದರು.. ಅದರ ಮೂಲಕ ತನ್ನ ಕೂದಲು ಮಾರಾಟ ಮಾಡಲು ಪ್ರಾರಂಭ ಮಾಡಿದರು.. ಈ ಕೂದಲಿಗೆ ಅಭಿಮಾನಿಗಳು ಹುಚ್ಚೆದ್ದು ಮುಗಿ ಬೀಳುತ್ತಿದ್ದಾರೆ.. ಈಗ ಕ್ಯಾಮಿಲ್ಲೆಗೆ ಕಂಕುಳ ಕೂದಲು ಮಾರಾಟದಿಂದಲೇ ಹೆಚ್ಚು ಹಣ ಗಳಿಕೆಯಾಗುತ್ತಿದೆ.. ಅಭಿಮಾನಿಗಳು ದೊಡ್ಡ ಪಾವತಿಸಿ ಕೂಡಲು ಖರೀದಿ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲ, ಒಳಉಡುಪುಗಳನ್ನು ಕೂಡಾ ಹರಾಜು ಮೂಲಕ ಮಾರಾಟ ಮಾಡುತ್ತಾಳೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಬೇಸಿಗೆಯಲ್ಲಿ ತಲೆನೋವು ಹೆಚ್ಚಾಗ್ತಿದೆಯೇ..?; ಈ ಆಹಾರ ಸೇವಿಸಿ ನೋಡಿ..