CrimeLifestyleNational

ಜಾಕ್ವೆಲಿನ್‌ಗೆ ಲವ್‌ ಲೆಟರ್‌ ಬರೆದ ಸುಕೇಶ್‌ ಚಂದ್ರಶೇಖರ್‌

ದೆಹಲಿ; ಬಹುಕೋಟಿ ವಂಚಕ ಸುಕೇಶ್‌ ಚಂದ್ರಶೇಖರ್‌ ಮತ್ತೆ ಸುದ್ದಿಯಲ್ಲಿದ್ದಾನೆ. ಜೈಲಿನಿಂದಲೇ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಲವ್‌ ಲೆಟರ್‌ ಬರೆದಿದ್ದಾನೆ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಅಂತಾನೂ ಅದ್ರಲ್ಲಿ ಬರೆಯಲಾಗಿದೆ.

ಸುಕೇಶ್‌ ಚಂದ್ರಶೇಖರ್‌, ನಟಿ ಜಾಕ್ವೆಲಿನ್‌ ಜೊತೆ ಡೇಟಿಂಗ್‌ ಮಾಡಿದ್ದರು. ಇಬ್ಬರೂ ಜೊತೆಗಿರುವ ಹಲವು ಫೋಟೋಗಳೂ ವೈರಲ್‌ ಆಗಿದ್ದವು. ಇನ್ನು ಜಾಕ್ವೆಲಿನ್‌ಗೆ ಸುಕೇಶ್‌ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌ಗಳನ್ನು ಕೂಡ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ ಅವರನ್ನು ಕೂಡಾ ಹಲವು ಬಾರಿ ವಿಚಾರಣೆಗೊಳಪಡಿಸಲಾಗಿದೆ.

Share Post