IPLನಲ್ಲಿ ಸಿಕ್ಸರ್‌ಗಳ ದರ್ಬಾರ್; ಇವರೇ ನೋಡಿ ರನ್ ಮಾಂತ್ರಿಕರು..!
ಐಪಿಎಲ್ ಸೀಸನ್ 17ನಲ್ಲಿ ರನ್‌ಗಳ ಅಬ್ಬರ ಜೋರಾಗಿದೆ.. ಅದ್ರಲ್ಲೂ ಕೂಡಾ ಬ್ಯಾಟ್ಸ್ ಮನ್ ಗಳು ಸಿಕ್ಸರ್‌ಗಳ ಸುರಿಮಳೆಗೈಯ್ಯುತ್ತಿದ್ದಾರೆ… ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ದಾಖಲೆ ಸ್ಟ್ರೈಕ್ ರೇಟ್ ಪಡೆಯುತ್ತಿದ್ದಾರೆ. ಇದರ ಜೊತೆಗೆ ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.. ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್‌ಗಳು ಯಾರು ನೋಡೋಣ ಬನ್ನಿ..
ಇದನ್ನೂ ಓದಿ; ಹಿಂದೆಂದಿಗಿಂತಲೂ ಹೆಚ್ಚಾಯ್ತಾ ಮೋದಿ ವರ್ಚಸ್ಸು..?; ರಾಜ್ಯದಲ್ಲೀಗ ಮೋದಿ ಮೇನಿಯಾ..!
ಆಂಡ್ರೆ ರಸೆಲ್;
ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಇದುವರೆಗೆ 3 ಇನ್ನಿಂಗ್ಸ್ ಗಳಲ್ಲಿ 212.96 ಸ್ಟ್ರೈಕ್ ರೇಟ್ ನಲ್ಲಿ 115 ರನ್ ಗಳಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಸ್ಸೆಲ್ 25 ಎಸೆತಗಳಲ್ಲಿ 64 ರನ್ ಗಳಿಸಿದ್ದಾರೆ..
ಶಶಾಂಕ್ ಸಿಂಗ್;
ಶಶಾಂಕ್ ಸಿಂಗ್ ಅವರೊಂದಿಗೆ ಪಂಜಾಬ್ ಕಿಂಗ್ಸ್ ಉತ್ತಮ ಫಿನಿಶರ್ ಪಡೆದರು. ಶಶಾಂಕ್ 195.71 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದ್ದಾರೆ. ಶಶಾಂಕ್ ಗುಜರಾತ್ ವಿರುದ್ಧ ಕೇವಲ 29 ಎಸೆತಗಳಲ್ಲಿ 61 ರನ್ ಗಳಿಸಿ ತಮ್ಮ ಪ್ರದರ್ಶನ ತೋರಿಸಿದ್ದಾರೆ.
ಇದನ್ನೂ ಓದಿ; ಎಂ.ಎಸ್.ಧೋನಿ ಮಾಜಿ ಬ್ಯುಸಿನೆಸ್ ಪಾರ್ಟನರ್ ಅರೆಸ್ಟ್!
ಹೆನ್ರಿಕ್ ಕ್ಲಾಸೆಲ್;
ಹೆನ್ರಿಕ್ ಕ್ಲಾಸೆನ್ ಕೂಡ ಇಲ್ಲಿಯವರೆಗೆ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಕ್ಲಾಸೆನ್ 5 ಪಂದ್ಯಗಳಲ್ಲಿ 186 ರನ್ ಗಳಿಸಿದ್ದರು. ಏತನ್ಮಧ್ಯೆ, ಕ್ಲಾಸೆನ್ ಅವರ ಸ್ಟ್ರೈಕ್ ರೇಟ್ 193.75 ಆಗಿದೆ. ಮುಂಬೈ ವಿರುದ್ಧ ಕ್ಲಾಸೆನ್ 80 ರನ್‌ಗಳ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದರು.
ಸುನಿಲ್ ನರೈನ್;
ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್ 4 ಪಂದ್ಯಗಳಲ್ಲಿ 161 ರನ್ ಗಳಿಸಿದ್ದರು. ನರೈನ್ 189.41 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನರೈನ್ 85 ರನ್ ಗಳಿಸಿದರು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಬ್ಯಾಟ್ಸ್ ಮನ್ ಕೊಹ್ಲಿ ಕೂಡ ರನ್ ಗಳ ಸುರಿಮಳೆ ಸುರಿಸುತ್ತಿದ್ದಾರೆ.
ಇದನ್ನೂ ಓದಿ; ಕಾಲ್ ಗರ್ಲ್ ಬೇಕಿದ್ದರೆ ಸಂಪರ್ಕಿಸಿ; ಪತ್ನಿ ಫೋಟೋ ಪೋಸ್ಟ್ ಮಾಡಿದ ಪತಿ!