Sports

ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌; ಗೇಲ್‌ ದಾಖಲೆ ಮುರಿದ ರೋಹಿತ್‌ ಶರ್ಮಾ

ಮುಂಬೈ; ಟೀಂ ಇಂಡಿಯಾ ಆಟಗಾರ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ಕ್ರಿಕೆಟ್‌ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ರೋಹಿತ್‌ ಶರ್ಮಾ ಅವರು ವಿಶ್ವಕಪ್‌ನಲ್ಲಿ ಐವತ್ತು ಸಿಕ್ಸರ್‌ಗಳನ್ನು ಬಾರಿಸಿದ್ದು, 49 ಸಿಕ್ಸರ್‌ ಹೊಡೆದ ದಾಖಲೆ ಬರೆದಿದ್ದ ಕ್ರಿಸ್‌ ಗೇಲ್‌ ದಾಖಲೆಯನ್ನು ಮುರಿದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಆಟದಲ್ಲಿ ಅವರು 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದಾರೆ. 2015 ರಿಂದ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ರೋಹಿತ್, ಮೂರು ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಒಟ್ಟು 27 ಪಂದ್ಯಗಳನ್ನಾಡಿದ್ದು, ಇದುವರೆಗೆ 50 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ 25 ವಿಶ್ವಕಪ್​ ಪಂದ್ಯಗಳಿಂದ 43 ಸಿಕ್ಸರ್ ಸಿಡಿಸಿದ್ದಾರೆ.

Share Post