CrimeSports

ಎಂ.ಎಸ್‌.ಧೋನಿ ಮಾಜಿ ಬ್ಯುಸಿನೆಸ್‌ ಪಾರ್ಟನರ್‌ ಅರೆಸ್ಟ್‌!

ಜೈಪುರ;  ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿಯವರ ಮಾಜಿ ಬ್ಯುಸಿನೆಸ್‌ ಪಾರ್ಟನರ್‌ ಬಂಧನವಾಗಿದೆ.. ಧೋನಿ ಜೊತೆ ಬ್ಯುಸಿನೆಸ್‌ ಮಾಡಿದ್ದ ಮಿಹಿರ್‌ ದಿವಾಕರ್‌ನನ್ನು ಜೈಪುರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ; ಹೃದಯಾಘಾತ ಆಗುತ್ತೇನೋ ಎಂಬ ಭಯ ಕಾಡುತ್ತಿದೆಯೇ..?; ಹಾಗಾದ್ರೆ ಅದು ಇದೇ..!

ದಿವಾಕರ್‌ ವಿರುದ್ಧ 15 ಕೋಟಿ ರೂ. ವಂಚನೆ ಆರೋಪ;

ಸಿಎಸ್‌ಕೆ ಐಪಿಎಲ್‌ ತಂಡದ ಆಟಗಾರರೂ ಆಗಿರುವ ಎಂ.ಎಸ್‌.ಧೋನಿ ಜೊತೆ ಈ ಹಿಂದೆ ಮಿಹಿರ್‌ ದಿವಾಕರ್‌ ಬ್ಯುಸಿನೆಸ್‌ ಪಾರ್ಟ್‌ನರ್‌ ಆಗಿದ್ದರು.. ಈ ವೇಳೆ 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಧೋನಿ ಆರೋಪ ಮಾಡಿದ್ದರು. ಜೊತೆಗೆ ಮಿಹಿರ್‌ ದಿವಾಕರ್‌ ಅವರು ಕ್ರಿಕೆಟ್‌ ಅಕಾಡೆಮಿ ಪ್ರಾರಂಭ ಮಾಡಿದ್ದು, ಇದರಲ್ಲಿ ಕೂಡಾ ಧೋನಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಿಹಿರ್‌ ದಿವಾಕರ್‌ನನ್ನು ಬಂಧಿಸಲಾಗಿದೆ..

ಇದನ್ನೂ ಓದಿ; ಕಾಲ್‌ ಗರ್ಲ್‌ ಬೇಕಿದ್ದರೆ ಸಂಪರ್ಕಿಸಿ; ಪತ್ನಿ ಫೋಟೋ ಪೋಸ್ಟ್‌ ಮಾಡಿದ ಪತಿ!

ಕೋರ್ಟ್‌ನಲ್ಲಿ ದಾವೆ ಹೂಡಿದ್ದ ಎಂ.ಎಸ್‌.ಧೋನಿ;

ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಮಿಹಿರ್‌ ದಿವಾಕರ್‌ ಅಕಾಡೆಮಿ ಶುರು ಮಾಡಿದ್ದರು.. ಇದರಲ್ಲಿ ಧೋನಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.. ಈ ಹಿನ್ನೆಲೆಯಲ್ಲಿ ಎಂ.ಎಸ್‌.ಧೋನಿಯವರು ರಾಂಚಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ..  ಜೈಪುರದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲು ಧೋನಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.. ಈ ಹಿನ್ನೆಲೆಯಲ್ಲಿ ಜೈಪುರ ಪೊಲೀಸರು ದಿವಾಕರ್ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ; ಡಾ.ಸಿ.ಎನ್‌.ಮಂಜುನಾಥ್‌ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ!

2012ರಲ್ಲೇ ಇಬ್ಬರ ನಡುವಿನ ವ್ಯವಹಾರ ಕಟ್‌;

2021ರ ಆಗಸ್ಟ್‌ ರಂದೇ ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಜೊತೆಗಿನ ಸಂಬಂಧ ಕೊನೆಗೊಳಿಸಿದ್ದಾರೆ.. ಆದರೂ ಕೂಡಾ ಮಿಹಿರ್‌ ದಿವಾಕರ್‌ ಧೋನಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೇಶ-ವಿದೇಶಗಳಲ್ಲಿ ಧೋನಿ ಹೆಸರನ್ನು ಬಳಸಿದ್ದಾರೆ ಎಂಬ ಆರೋಪವಿದೆ.  ಎಂಎಸ್ ಧೋನಿ ಹೆಸರಲ್ಲಿ ಒಟ್ಟು 15 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪವಿದ್ದು, ದಿವಾಕರ್‌ ವಿರುದ್ಧ ಐಪಿಸಿ ಸೆಕ್ಷನ್ 406, 420, 467, 468, 471, ಮತ್ತು 120B ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

 

Share Post