ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿ ಪರ ನಿಲ್ಲಿ; ಈಶ್ವರಪ್ಪಗೆ ವಿಜಯೇಂದ್ರ ಮನವಿ
ಶಿವಮೊಗ್ಗ; ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ.. ಏನೇ ನೋವಾಗಿದ್ದರೂ ಅದನ್ನು ದಯವಿಟ್ಟು ಪಕ್ಷಕ್ಕಾಗಿ ಮರೆಯಿರಿ. ಬಿಜೆಪಿ ಪಕ್ಷದ ಹಿತದೃಷ್ಟಿಯಿಂದ ನಮ್ಮೊಂದಿಗೆ ಕೈಜೋಡಿಸಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿಕೊಂಡಿದ್ದಾರೆ..
ಇದನ್ನೂ ಓದಿ; ಬಿಜೆಪಿ ಸಂಸದೆ ಮೇಲೆ ಅಟ್ಯಾಕ್; ಮೊಬೈನ್ನಲ್ಲಿ ದೃಶ್ಯ ಸೆರೆ
ಕಣದಿಂದ ಹಿಂದೆ ಸರಿಯುವಂತೆ ವಿಜಯೇಂದ್ರ ಮನವಿ;
ಶಿವಮೊಗ್ಗದಲ್ಲಿ ಮಾತನಾಡಿರುವ ವಿಜಯೇಂದ್ರ ಅವರು, ಎಲ್ಲವನ್ನೂ ಮರೆತು ಬಿಜೆಪಿ ಪರ ಕೆಲಸ ಮಾಡುವಂತೆ ಈಶ್ವರಪ್ಪ ಅವರಿಗೆ ಮನವಿ ಮಾಡಿಕೊಂಡಿದಾರೆ.. ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದರು.. ಯಡಿಯೂರಪ್ಪ ಅವರು ಕೂಡಾ ಕಾಂತೇಶ್ಗೆ ಟಿಕೆಟ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರಂತೆ.. ಆದ್ರೆ ಬಿಜೆಪಿ ಹೈಕಮಾಂಡ್ ಕಾಂತೇಶ್ಗೆ ಟಿಕೆಟ್ ನೀಡಲಿಲ್ಲ.. ಇದಕ್ಕೆ ಕಾರಣ ಯಡಿಯೂರಪ್ಪ ಕುಟುಂಬ ಎಂದು ಆರೋಪಿಸಿರುವ ಈಶ್ವರಪ್ಪ ಅವರು, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ..
ಇದನ್ನೂ ಓದಿ; ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ; 4 ಮಂದಿ ದುರ್ಮರಣ!
ಕರೆ ಮಾಡಿ ಮಾತನಾಡಿದ್ದ ಅಮಿತ್ ಶಾ;
ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು.. ಈ ವೇಳೆ ಅಮಿತ್ ಶಾ ಅವರೇ ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದರು.. ಜೊತೆಗೆ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು.. ಆದ್ರೆ ದೆಹಲಿಗೆ ಹೋದಾಗ ಈಶ್ವರಪ್ಪ ಅವರನ್ನು ಅಮಿತ್ ಶಾ ಭೇಟಿಯಾಗಿಲ್ಲ.. ಆದರೂ ಬೇಸರಿಸಿಕೊಳ್ಳದ ಈಶ್ವರಪ್ಪ ಅವರು, ಅಮಿತ್ ಶಾ ಅವರು ನನ್ನನ್ನು ಭೇಟಿಯಾಗಿಲ್ಲ.. ಇದರ ಅರ್ಥ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬರಲಿ ಎಂಬುದು ಅವರ ಆಶಯವಾಗಿರಬಹುದು ಎಂದು ಈಶ್ವರಪ್ಪ ಹೇಳಿದ್ದರು.. ಹೀಗಿರುವಾಗೇ ವಿಜಯೇಂದ್ರ ಅವರು ಈ ಮಾತನ್ನು ಹೇಳಿದ್ದಾರೆ..
ಇದನ್ನೂ ಓದಿ; ದೇಶದ ಅತ್ಯಂತ ದುಬಾರಿ ಮನೆಗಳಿವು..!; ಯಾವ ಮನೆಗೆ ಎಷ್ಟು ಬೆಲೆ..?
ಮೊದಲು ನಿರ್ಲಕ್ಷಿಸಿದ್ದವರು ಈಗ ಸಂಧಾನ ಯತ್ನ;
ಮೊದಲಿಗೆ ಮಾಜಿ ಸಚಿವ ಈಶ್ವರಪ್ಪ ಅವರು ಬಂಡಾಯ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದಾಗ ಯಡಿಯೂರಪ್ಪ ಅವರ ಕುಟುಂಬ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ.. ಸ್ಪರ್ಧೆ ಮಾಡಿದರೆ ಮಾಡಲಿ ಎಂಬ ರೀತಿಯಲ್ಲೇ ಇತ್ತು.. ಆದ್ರೆ ಈಶ್ವರಪ್ಪ ಅವರು ಮೋದಿ ಫೋಟೋ ಇಟ್ಟುಕೊಂಡು ನಾನು ಬಿಜೆಪಿಯಲ್ಲೇ ಇದ್ದೇನೆ.. ನಾನು ಕುಟುಂಬದ ರಾಜಕಾರಣದ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ.. ಗೆದ್ದ ನಂತರ ಬಿಜೆಪಿಯಲ್ಲೇ ಮುಂದುವರೆಯುತ್ತೇನೆ ಎಂದು ಹೇಳುತ್ತಿದ್ದಾರೆ.. ಇದು ಬಿಜೆಪಿ ನಾಯಕರಿಗೆ ಕೊಂಚ ಮುಜುಗರ ಉಂಟು ಮಾಡಿದೆ.. ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಬರುವ ಮತಗಳನ್ನು ಒಡೆಯಲಿದ್ದಾರೆ.. ಹೀಗಾಗಿ ಅವರ ಮನವೊಲಿಸುವ ಪ್ರಯತ್ನ ಮತ್ತೆ ಶುರು ಮಾಡಲಾಗಿದೆ..
ಇದನ್ನೂ ಓದಿ; 49 ವೈದ್ಯಕೀಯ ವಿದ್ಯಾರ್ಥಿನಿಯರ ಅಸ್ವಸ್ಥ ಪ್ರಕರಣ; ಇಬ್ಬರಿಗೆ ಕಾಲರಾ!