DistrictsPolitics

ಬಿಎಸ್‌ವೈ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಅವಾಂತರ; ಹಾರಿಬಂದ ಚೀಲಗಳು!

ಕಲಬುರಗಿ; ಜೇವರ್ಗಿಯಲ್ಲಿ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಅವಾಂತರವಾಗಿದೆ. ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್‌ ಆಗುವಾಗ ಗಾಳಿಗೆ ಪ್ಲಾಸ್ಟಿಕ್‌ ಚೀಲಗಳು ಒಮ್ಮೆಗೇ ಹಾರಿವೆ.. ಇದರಿಂದ ಕೂಡಲೇ ಎಚ್ಚೆತ್ತ ಪೈಲಟ್‌ ಹೆಲಿಕಾಪ್ಟರ್‌ನ್ನು ಮತ್ತೆ ಮೇಲಕ್ಕೆ ಹಾರಿಸಿದ್ದಾರೆ. ಇದರಿಂದಾಗಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಜೇವರ್ಗಿಗೆ ಆಗಮಿಸಿದ್ದರು. ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್‌ ಇಳಿಯುವ ಜಾಗದ ಹತ್ತಿರವೇ ಪ್ಲಾಸ್ಟಿಕ್‌ ಚೀಲಗಳಿದ್ದು ಅವು ಹೆಲಿಕಾಪ್ಟರ್‌ ಫ್ಯಾನ್‌ನ ಗಾಳಿಗೆ ಹಾರಿಬಂದಿವೆ.

ಈ ದೃಶ್ಯ ನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಓಡಿಬಂದರು. ನಂತರ ಚೀಲಗಳನ್ನು ತೆಗೆದ ನಂತರ ಹೆಲಿಕಾಪ್ಟರ್‌ನ್ನು ಸೇಫ್‌ ಆಗಿ ಲ್ಯಾಂಡ್‌ ಮಾಡಲಾಯಿತು.

Share Post