DistrictsPolitics

ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?

ಚಾಮರಾಜನಗರ; ಲೋಕಸಭಾ ಚುನಾವಣೆ ರಂಗೇರುತ್ತಿದೆ.. ಅದ್ರಲ್ಲೂ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಕಾವು ಜೋರಾಗಿದೆ.. ಇದರ ಜೊತೆಗೆ ಚುನಾವಣಾ ಅಕ್ರಮಗಳೂ ಹೆಚ್ಚಾಗುತ್ತಿವೆ.. ಈ ನಡುವೆ ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮದ್ಯವನ್ನು ಜಪ್ತಿ ಮಾಡಲಾಗಿದೆ.. ಅದರ ಬೆಲೆ ಕೇಳಿದರೆ ಬೆಚ್ಚಿಬೀಳುತ್ತೀರಿ..

ಇದನ್ನೂ ಓದಿ; ತೀವ್ರ ಜ್ವರದಿಂದ ಬಳಲುತ್ತಿರುವ ಪವನ್‌ ಕಲ್ಯಾಣ್‌; ಪ್ರಚಾರ ಮುಂದೂಡಿಕೆ

98.52 ಕೋಟಿ ಮೌಲ್ಯದ ಮದ್ಯ ಜಪ್ತಿ;

ಚುನಾವಣೆ ಪಾರದರ್ಶಕವಾಗಿ ನಡೆಸಲು ಹಾಗೂ ಅಕ್ರಮಗಳು ನಡೆಯದಂತೆ ತಡೆಯಲು ಅಧಿಕಾರಿಗಳು ಹಗಳಿರುಳೂ ಶ್ರಮಿಸುತ್ತಿದ್ದಾರೆ.. ಅಕ್ರಮಗಳು ನಡೆಯದಂತೆ ಹಗಲು ರಾತ್ರಿ ಕೂಡಾ ತಪಾಸಣೆಗಳನ್ನು ನಡೆಸುತ್ತಿದ್ದಾರೆ.. ಇದೇ ವೇಳೆ ಅಧಿಕಾರಿಗಳು ಭಾರೀ ಪ್ರಮಾಣದ ಮದ್ಯವನ್ನು ಜಪ್ತಿ ಮಾಡಿದ್ದಾರೆ.. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ  ತಾಂಡ್ಯ ಒಂದರಲ್ಲಿ ದಾಳಿ ನಡೆಸಲಾಗಿದೆ.. ಇಲ್ಲಿ ಕೈಗಾರಿಕಾ ಪ್ರದೇಶದ ಯುನೈಟೆಡ್ ಬ್ರೀವರೀಸ್‌ ಲಿಮಿಟೆಡ್‍ನ ಘಟಕದಲ್ಲಿ 98.52 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು.. ಚುನಾವಣಾಧಿಕಾರಿಗಳು ಕೂಡಲೇ ಈ ಮದ್ಯವನ್ನು ಜಪ್ತಿ ಮಾಡಿದ್ದಾರೆ..

ಇದನ್ನೂ ಓದಿ; ಬೋರ್‌ವೆಲ್‌ ದುರಂತ; 16 ಅಡಿ ಆಳದಲ್ಲಿ ಕಾಲು ಅಲ್ಲಾಡಿಸುತ್ತಿದೆ ಮಗು!

ಅನಾಮಧೇಯನಿಂದ ಸಿಕ್ಕಿತ್ತು ಮಾಹಿತಿ;

ಏಪ್ರಿಲ್‌ 2 ರಂದು ಅನಾಮಧೇಯ ವ್ಯಕ್ತಿಯೊಬ್ಬರು ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.. ಭಾರಿ ಪ್ರಮಾಣದ ಮದ್ಯ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ಕೊಟ್ಟಿದ್ದ.. ಇದರ ಆಧಾರದ ಮೇಲೆ  ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ..

ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲು;

ಚುನಾವಣಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಎಫ್​ಐಆರ್​ ಕೂಡ ದಾಖಲು ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಮೌಖಿಕ ಆದೇಶ ನೀಡಿದ್ದರು.. ಈ ಹಿನ್ನೆಲೆಯಲ್ಲಿ ಬ್ರೀವರಿಸ್ ಘಟಕದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರೋದು ಬೆಳಕಿಗೆ ಬಂದಿದೆ. ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

ಮತದಾರರಿಗೆ ಹಂಚಲು ಸಂಗ್ರಹ ಶಂಕೆ;

ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಈ ಮದ್ಯ ಸಂಗ್ರಹಿಸಲಾಗಿತ್ತು ಎನ್ನಲಾಗುತ್ತಿದೆ.. ಈ ಬಗ್ಗೆ ಚುನಾವಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.. ಇಷ್ಟು ದೊಡ್ಡ ಪ್ರಮಾಣದ ಮದ್ಯ ಯಾಕೆ ಸಂಗ್ರಹಿಸಲಾಗಿತ್ತು.. ಇಷ್ಟು ಪ್ರಮಾಣದಲ್ಲಿ ಮದ್ಯ ತಯಾರಿಸಿದ್ದೇಕೆ ಎಂಬುದರ ಬಗ್ಗೆ ಕಂಪನಿಯಿಂದ ಮಾಹಿತಿ ಪಡೆಯಲಾಗುತ್ತಿದೆ..

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ಕುತೂಹಲದ ಕ್ಷೇತ್ರ ಇದು;

ಚಾಮರಾಜನಗರ ಲೋಕಭಾ ಕ್ಷೇತ್ರ ಹಲವು ಕಾರಣಗಳಿಗಾಗಿ ಕುತೂಹಲ ಕೆರಳಿಸಿದೆ.. ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾ ಕೂಡಾ ಇದೇ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.. ಜೊತೆಗೆ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.. ಹೀಗಾಗಿ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಇದೆ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

Share Post