CinemaPolitics

ಯೋಗೇಶ್ವರ್‌ ಪುತ್ರಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಎಂದುಬಿಟ್ಟರಾ ಡಿ.ಕೆ.ಶಿವಕುಮಾರ್‌..?

ರಾಮನಗರ; ಸಿ.ಪಿ.ಯೋಗೇಶ್ವರ್‌ ಅವರು ಡಿ.ಕೆ.ಸುರೇಶ್‌ ಅವರನ್ನು ಸೋಲಿಸಲು ಪಣ ತೊಟ್ಟಿರುವುದು ಗೊತ್ತೇ ಇದೆ.. ಆದ್ರೆ ಸಿ.ಪಿ.ಯೋಗೇಶ್ವರ್‌ ಮಗಳು ನಿಶಾ ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರಲು ಮುಂದಾಗಿದ್ದರು.. ಇತ್ತೀಚೆಗೆ ಅವರು ಈ ಬಗ್ಗೆ ಮಾತನಾಡಿದ್ದರು ಕೂಡಾ.. ನಾನು ಕಾಂಗ್ರೆಸ್‌ ಸೇರಲು ಒಲವು ತೋರಿಸಿದ್ದೇನೆ ಎಂದು ನಿಶಾ ಹೇಳಿದ್ದರು.. ಆದ್ರೆ ಇದಕ್ಕೆ ಡಿ.ಕೆ.ಶಿವಕುಮಾರ್‌ ಒಪ್ಪಿಗೆ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.. ಹೀಗಾಗಿ ನಿಶಾ ಯೋಗೇಶ್ವರ್‌ ಉಲ್ಟಾ ಹೊಡೆದಿದ್ದಾರೆ..

ಇದನ್ನೂ ಓದಿ; ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲೋದೆಷ್ಟು..?

ತಂದೆ-ಮಗಳ ನಡುವೆ ತಂದಿಡುವುದು ಬೇಡ;

ನಿಶಾ ಯೋಗೇಶ್ವರ್‌ ಏನೋ ಕಾಂಗ್ರೆಸ್‌ ಸೇರಲು ಆಸಕ್ತಿ ತೋರಿಸಿದ್ದಾರೆ.. ಆದ್ರೆ ಅವರ ತಂದೆ ಯೋಗೇಶ್ವರ್‌ ಬಿಜೆಪಿಯಲ್ಲಿದ್ದಾರೆ.. ಹೀಗಾಗಿ ನಿಶಾ ಯೋಗೇಶ್ವರ್‌ ರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ತಂದೆ-ಮಗಳ ನಡುವೆ ತಂದಿಕ್ಕಿದಂತಾಗುತ್ತದೆ.. ತಂದೆ-ಮಗಳ ಸಂಬಂಧ ಕೆಡಿಸಿದಂತಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಲಾಗುತ್ತಿದೆ.. ಅಂದಹಾಗೆ, ಈ ಹಿಂದೆ ವಿಧಾನಸಭಾ ಚುನಾವಣೆ ಸಮಯದಲ್ಲೂ ನಿಶಾ ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರಲು ಬಯಸಿದ್ದರು. ಆಗಲೂ ಕಾಂಗ್ರೆಸ್‌ ನಾಯಕರು ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ.

ಇದನ್ನೂ ಓದಿ; ರಾಹುಲ್‌ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?

ಇನ್ನು ಉಲ್ಟಾ ಹೊಡೆತ ನಿಶಾ ಯೋಗೇಶ್ವರ್‌;

ಹೀಗಿರುವಾಗಲೇ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಸೇರುತ್ತೇನೆ ಎಂದಿದ್ದ ನಿಶಾ ಯೋಗೇಶ್ವರ್‌ ಈಗ ಬೇರೆಯದೇ ಹೇಳುತಿದ್ದಾರೆ.. ನಾನು ಯಾವ ಪಾರ್ಟಿಯಲ್ಲೂ ಇಲ್ಲ.. ನಾನು ಎಲ್ಲೇ ಹೋದರೂ ಕಾಂಗ್ರೆಸ್​ ಪಾರ್ಟಿ ಸೇರ್ಪಡೆ ಆಗಿರುವುದಕ್ಕೆ ಅಭಿನಂದನೆಗಳು ಅಂತಾ ಜ ಹೇಳುತ್ತಾರೆ. ಆದ್ರೆ ನಾನು ಯಾವ ಪಕ್ಷಕ್ಕೂ ಸೇರಿಲ್ಲ.. ನಾನು ನನ್ನ ಜನರನ್ನು ಕತ್ತಲಿನಲ್ಲಿ ಇಡಲು ಇಷ್ಟ ಪಡೋಲ್ಲ. ಅದಕ್ಕಾಗಿ ಈ ಸ್ಪಷ್ಟಿಕರಣವನ್ನು ನೀಡುತ್ತಿದ್ದೇನೆ ಎಂದು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

ನಾನು ಸದ್ಯದಲ್ಲಿ ಯಾವ ಪಾರ್ಟಿಯಲ್ಲೂ ಇಲ್ಲ.. ಹೌದು, ನಾನು ಪ್ರಯತ್ನ ಮಾಡಿದ್ದೆ. ಒಂದು ಕಡೆಯಿಂದ ಮಾತ್ರವಲ್ಲ ಹಲವಾರು ಕಡೆಗಳಿಂದ ಪ್ರಯತ್ನ ಪಟ್ಟಿದ್ದೆ ಎಂದೂ ನಿಶಾ ಯೋಗೇಶ್ವರ್‌ ಹೇಳಿಕೊಂಡಿದ್ದಾರೆ..

ಒಳೇಟಿನ ಭೀತಿಯಿಂದ ಸೇರಿಸಿಕೊಳ್ಳಲಿಲ್ಲವೇ..?

ಇನ್ನು ಅಪ್ಪನ ಮಾತು ಮೀರಿ ನಿಶಾ ಕಾಂಗ್ರೆಸ್‌ಗೆ ಬರಲಾರರು.. ಯೋಗೇಶ್ವರ್‌ ಅವರೇ ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಂಡು ಮಾಹಿತಿ ಪಡೆದುಕೊಳ್ಳಲು ನಿಶಾರನ್ನು ಕಳುಹಿಸಿರಬಹುದೇ ಎಂಬ ಅನುಮಾನ ಕೆಲವರಲ್ಲಿದೆ ಎಂದು ಹೇಳಲಾಗುತ್ತಿದೆ.. ಈ ಕಾರಣಕ್ಕೇ ನಿಶಾರನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ ಎಂದೂ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ… ಆದ್ರೆ ನಿಶಾ ಅವರು ಹಲವು ತಿಂಗಳಿಂದ ಕಾಂಗ್ರೆಸ್‌ ಸೇರಲು ಬಯಸುತ್ತಿದ್ದಾರೆ.. ಹೀಗಾಗಿ ಅವರು ಮನಸ್ಪೂರ್ತಿಯಿಂದಲೇ ಕಾಂಗ್ರೆಸ್‌ ಕಡೆ ಒಲವು ತೋರಿರುವ ಸಾಧ್ಯತೆಯೇ ಹೆಚ್ಚಿದೆ..

ಇದನ್ನೂ ಓದಿ; ಸಚಿವ ಸುಧಾಕರ್‌, ಕೃಷ್ಣಬೈರೇಗೌಡ ಇದಾರೆ ಅಂತ ಮೆರೆದರೆ ಅಷ್ಟೇ; ಡಿಕೆಶಿ ಹೇಳಿದ್ದು ಯಾರಿಗೆ..?

Share Post