BengaluruCrime

Crime; ಹೈಕೋರ್ಟ್‌ನಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ; ಮುಂದೇನಾಯ್ತು..?

ಬೆಂಗಳೂರು; ದಶಕದ ಹಿಂದೆ ಹೈಕೋರ್ಟ್‌ ಆವರಣದಲ್ಲಿ ವಕೀಲನೊಬ್ಬ ಮಹಿಳಾ ವಕೀಲೆಯ ಕತ್ತು ಕುಯ್ದು ನಂತರ ತಾನೂ ಆತ್ಮಹತ್ಯೆಗೆ ಯತ್ನ ಮಾಡಿದ್ದ.. ಇದರಿಂದಾಗಿ ಇಡೀ ಹೈಕೋರ್ಟ್‌ನಲ್ಲಿದ್ದವರು ಬೆಚ್ಚಿಬಿದ್ದಿದ್ದರು.. ಇದೀಗ ಇಂತಹದ್ದೇ ಒಂದು ಬೆಚ್ಚಿಬೀಳು ಪ್ರಸಂಗ ನಡೆದುಹೋಗಿದೆ.. ವಿಚಾರಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಜಡ್ಜ್‌ ಮುಂದೆಯೇ ಕತ್ತು ಕುಯ್ದುಕೊಂಡಿದ್ದಾನೆ.. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ; ಸಚಿವ ಸುಧಾಕರ್‌, ಕೃಷ್ಣಬೈರೇಗೌಡ ಇದಾರೆ ಅಂತ ಮೆರೆದರೆ ಅಷ್ಟೇ; ಡಿಕೆಶಿ ಹೇಳಿದ್ದು ಯಾರಿಗೆ..?

ಮೈಸೂರು ಮೂಲದ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ;

ಹೈಕೋರ್ಟ್‌ ಹಾಲ್‌ ನಂಬರ್‌ 1 ರಂದು ಇಂತಹದ್ದೊಂದು ಘಟನೆ ನಡೆದಿದೆ.. ಮೈಸೂರು ಮೂಲದ ಶ್ರೀನಿವಾಸ್‌ ಚಿನ್ನಮ್‌ ಎಂಬ 51 ವರ್ಷದ ವ್ಯಕ್ತಿ ಚಾಕುವಿನ ರೀತಿಯ ವಸ್ತುವಿನಿಂದ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.. ಕತ್ತು ಕುಯ್ದುಕೊಂಡಿದ್ದು, ತಕ್ಷಣವೇ ಆತನನ್ನು ಬೌರಿಂಗ್‌ ಆಸ್ಪತ್ರೆಗೆ ಸೇರಿಸಲಾಗಿದೆ.. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಮಹಿಳೆ ವಿರುದ್ಧ ಸೋತಿದ್ದ ಶ್ರೀಕಂಠದತ್ತ ಒಡೆಯರ್‌; ಮೈಸೂರು ಗೆಲ್ತಾರಾ ಲಕ್ಷ್ಮಣ್..?

ಪ್ರಕರಣದ ವಿಚಾರಣೆಗೆ ಆಗಮಿಸಿದ್ದ ವ್ಯಕ್ತಿ;

ಪ್ರಕರಣವೊಂದರ ಸಂಬಂಧ ಶ್ರೀನಿವಾಸ್‌ ಚಿನ್ನಮ್‌ ಅವರು ಕೋರ್ಟ್‌ಗೆ ಆಗಮಿಸಿದ್ದರು.. ಆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.. ಇನ್ನೇನು ವಿಚಾರಣೆ ಅಂತಿಮ ಹಂತಕ್ಕೆ ತಲುಪಿತ್ತು.. ಈ ವೇಳೆ ಶ್ರೀನಿವಾಸ್‌ ಚಿನ್ನಮ್‌ ಅವರು ಕೋರ್ಟ್‌ ಸಿಬ್ಬಂದಿಗೆ ಅರ್ಜಿಯೊಂದನ್ನು ನೀಡಿದ್ದಾರೆ.. ನ್ಯಾಯಮೂರ್ತಿಗಳ ಎದುರು ಬಂದ ಆ ವ್ಯಕ್ತಿ ನ್ಯಾಯಾಲಯದ ಸಿಬ್ಬಂದಿಗೆ ಅರ್ಜಿ ನೀಡಿದ್ದಾನೆ.. ಅನಂತರ ಚಾಕುವಿನಂತಹ ಒಂದು ಸಣ್ಣ ವಸ್ತುವನ್ನು ಹೊರತೆಗೆದಿದ್ದಾರೆ.. ಎಲ್ಲರೂ ನೋಡನೋಡುತ್ತಿದ್ದಂತೆ ಆತ ತನ್ನ ಕತ್ತು ಕುಯ್ದುಕೊಂಡಿದ್ದಾನೆ.. ರಕ್ತ ಹರಿಯುತ್ತಿದ್ದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ..

ಇದನ್ನೂ ಓದಿ; ದೇವೇಗೌಡರು, ಕುಮಾರಸ್ವಾಮಿ ಸೋತಿದ್ದ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ ಗೆಲ್ತಾರಾ..?

ಕೂಡಲೇ ನೆರವಿಗೆ ಧಾವಿಸಿದ ವಕೀಲರು;

ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿ ಹಾಗೂ ಪೊಲೀಸರು ಕೂಡಲೇ ಆತನ ನೆರವಿಗೆ ಧಾವಿಸಿದ್ದಾರೆ.. ಆತನ ಕೈಯಲ್ಲಿದ್ದ ಚಾಕುವನ್ನು ಕಿತ್ತುಕೊಂಡಿದ್ದಾರೆ. ಅನಂತರ ಕೂಡಲೇ ವಾಹನವೊಂದರಲ್ಲಿ ಆತನನ್ನು ಹತ್ತಿರದ ಬೌರಿಂಗ್‌ ಆಸ್ಪತ್ರೆಗೆ ಸೇರಿಸಲಾಗಿದೆ.. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಶ್ರೀನಿವಾಸ್​ ಅವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹೈಕೊರ್ಟ್​ಗೆ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಭೇಟಿ ನೀಡಿದ್ದಾರೆ. ವ್ಯಕ್ತಿಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ; ಅಮಿತ್‌ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಬದಲಾದ ರಾಜಕೀಯ ಚಿತ್ರಣ!

 

Share Post