ವಿಜಯಪುರದಲ್ಲಿ ಅಕಾಲಿಕ ಮಳೆ; ದ್ರಾಕ್ಷಿ, ಬಾಳೆ ತೋಟ ನಾಶ!
ವಿಜಯಪುರ; ಈಗ ಬೇಸಿಗೆ ಕಾಲ.. ಬಿಸಿಲ ಬೇಗೆ ಹೆಚ್ಚಾಗುತ್ತಿವೆ.. ಇಂತಹ ಸಂದರ್ಭದಲ್ಲೇ ರಾಜ್ಯದ ಹಲವು ಕಡೆ ಮಳೆಯಾಗಿದೆ.. ಅದ್ರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದಾರೆ.. ಇದರಿಂದಾಗಿ ಕೃಷಿಕನಿಗೆ ತುಂಬಾನೇ ಲಾಸ್ ಆಗಿದೆ.. ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ..
ಇದನ್ನೂ ಓದಿ; ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!
ಉರುಳಿಬಿದ್ದ ಮರಗಳು ಹಾಗೂ ಕಂಬಗಳು;
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಭಾರಿ ಮಳೆಯ ಜೊತೆಗೆ ಭಾರಿ ಬಿರುಗಾಳಿ ಕೂಡಾ ಬೀಸಿದೆ.. ಈ ಬಿರುಗಾಳಿಗೆ ಹಲವಾರು ಮರಗಳು ಉರುಳಿಬಿದ್ದಿವೆ.. ವಿದ್ಯುತ್ ಕಂಬಗಳು ಕೂಡಾ ನೆಲಕ್ಕುರುಳಿವೆ.. ಇದರಿಂದಾಗಿ ಅವಾಂತರ ಸೃಷ್ಟಿಯಾಗಿತ್ತು.. ಜನ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು..
ಇದನ್ನೂ ಓದಿ; ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಬೇಕಾ..?; ಹಾಗಾದರೆ ಈ ವಿಧಾನ ಅನುಸರಿಸಿ!
ದ್ರಾಕ್ಷಿ ತೋಟಕ್ಕೂ ಭಾರಿ ಹಾನಿ;
ಈಗ ದ್ರಾಕ್ಷಿ ಫಸಲು ಬರುವ ಸಮಯ.. ದ್ರಾಕ್ಷಿ ಕೊಯ್ಲು ನಡೆಯುತ್ತಿದೆ.. ಈ ವೇಳೆ ಬಿರುಗಾಳಿ, ಮಳೆ ಬಂದರೆ ಎಲ್ಲಾ ದ್ರಾಕ್ಷಿ ಉದುರೋಗುತ್ತದೆ.. ಅದ್ರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ.. ಹೀಗಾಗಿ ನಿನ್ನೆ ಬಿದ್ದ ಮಳೆಯಿಂದಾಗಿ ಹಲವಾರು ಕಡೆ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ.. ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ಎಂಬುವವವರ ದ್ರಾಕ್ಷಿ ತೋಟಕ್ಕೆ ಭಾರಿ ಹಾನಿಯಾಗಿದೆ.. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ.. ಮರಗಳು ಕೂಡಾ ಉರುಳಿಬಿದ್ದಿವೆ.. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ..
ಇದನ್ನೂ ಓದಿ; ಕೇಕ್ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್ಗೆ ಬಲಿ!
ಮುರಿದುಬಿದ್ದ ಬಾಳೆ ಗಿಡಗಳು, ರೈತ ಕಂಗಾಲು;
ಇನ್ನು ಬಾಳೆ ಗಿಡಗಳು ಕೂಡಾ ಮಳೆ, ಗಾಳಿಗೆ ಬಿದ್ದಿವೆ.. ಬೊಮ್ಮನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಮುರುಗೆಪ್ಪ ಚೌಗುಲಾ ಎಂಬವರು ಬೆಳೆದಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗೆ ಉರುಳಿ ಬಿದ್ದಿವೆ. ಇದರಿಂದಾಗಿ ರೈತನಿಗೆ ಸುಮಾರು 2 ಲಕ್ಷ ರೂ. ಹಾನಿಯಾಗಿದೆ. ಕಟಾವಿನ ಹಂತದಲ್ಲಿದ್ದಾಗ ಹೀಗಾಗಿದೆ. ಅಕಾಲಿಕ ಮಳೆಯಿಂದಾಗಿ ರೈತ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ.
ಇದನ್ನೂ ಓದಿ; ರಣ ಬಿಸಿಲಿಗೆ ಬಲಿಯಾಯ್ತಾ ಬಡ ಜೀವ..?; ಕೂಲಿ ಕೆಲಸದ ವೇಳೆ ಕುಸಿದುಬಿದ್ದು ಸಾವು!