ಅಣ್ಣ- ಅತ್ತಿಗೆ ಕಾಲಿಗೆ ಬಿದ್ದ ಡಿ.ಕೆ.ಸುರೇಶ್; ಗ್ರಾಮಾಂತರದಲ್ಲಿ ಗೆಲ್ತಾರಾ..?
ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ.. ಯಾಕಂದ್ರೆ ಅಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಮಾಡಿದ್ದಾರೆ.. ಕಾಂಗ್ರೆಸ್ನಿಂದ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅಖಾಡದಲ್ಲಿದ್ದಾರೆ.. ಹ್ಯಾಟ್ರಿಕ್ ಗೆಲುವು ಬಯಸುತ್ತಿರುವ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಅಬ್ಬರ ಮಾಡಿದ್ದಾರೆ.. ಮೊದಲಿ ದಿನವೇ ಡಿ.ಕೆ.ಸುರೇಶ್ ಭಾರಿ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಈ ವೇಳೆ ಅವರು ತಮ್ಮ ಶಕ್ತಿ ಪ್ರದರ್ಶನ ಕೂಡಾ ಮಾಡಿದ್ದಾರೆ..
ಇದನ್ನೂ ಓದಿ; ನನ್ನ ಹೆಣ ಬೀಳಿಸಿ ಬಿಜೆಪಿಯವರು ಚುನಾವಣೆ ಗೆಲ್ಲುವ ಪ್ಲ್ಯಾನ್; ಪ್ರಿಯಾಂಕ್ ಆರೋಪ
ಅಣ್ಣ-ಅತ್ತಿಗೆ ಆಶೀರ್ವಾದ ಪಡೆದ ಡಿ.ಕೆ.ಸುರೇಶ್;
ಡಿ.ಕೆ.ಸುರೇಶ್ ಅವರು ಎಂದಿಗೂ ಕೂಡಾ ಅಣ್ಣ ಡಿ.ಕೆ.ಶಿವಕುಮಾರ್ ಮೀರಿ ಹೋಗೋದಿಲ್ಲ.. ಡಿ.ಕೆ.ಶಿವಕುಮಾರ್ ಕೂಡಾ ಡಿ.ಕೆ.ಸುರೇಶ್ ಅವರನ್ನು ಆತ ನನ್ನ ಮಗನಿದ್ದಂತೆ ಎಂದು ಹೇಳಿಕೊಳ್ಳುತ್ತಾರೆ.. ಹೀಗಿರುತ್ತೆ ಡಿ.ಕೆ. ಬದರ್ಸ್ ಪ್ರೀತಿ.. ಈ ಕಾರಣದಿಂದಲೇ ಡಿ.ಕೆ.ಸುರೇಶ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುವ ಮೊದಲು ಅಣ್ಣ ಹಾಗೂ ಅತ್ತಿಗೆಯ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದ ಡಿ.ಕೆ.ಸುರೇಶ್, ಅಣ್ಣ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಗೆ ಉಷಾ ಅವರ ಕಾಲಿಗೆ ನಮಸ್ಕಾರ ಮಾಡಿದರು.. ಗೆದ್ದುಬರುವಂತೆ ಆಶೀರ್ವಾದ ಪಡೆದುಕೊಂಡರು..
ಇದನ್ನೂ ಓದಿ; ಲಂಡನ್ನಲ್ಲಿ ವಿರಾಟ್ ಕೊಹ್ಲಿ ಸಾಮಾನ್ಯನಂತೆ 2 ತಿಂಗಳು ಓಡಾಡಿದ್ದರಂತೆ!
ಅಣ್ಣನ ಕೈಗೆ ಬಿ ಫಾರಂ ನೀಡಿ ಆಶೀರ್ವಾದ ಪಡೆದ ಡಿಕೆಸು;
ಮೊದಲಿಗೆ ಅಣ್ಣನ ಕೈಗೆ ಪಕ್ಷದ ಬಿ ಫಾರಂ ನೀಡಿದ ಡಿ.ಕೆ.ಸುರೇಶ್ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ಕೋರಿದ್ದಾರೆ.. ಅಣ್ಣ, ಅತ್ತಿಗೆ ಆಶೀರ್ವಾದ ಪಡೆದ ನಂತರ, ನೇರವಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಿ ಅಲ್ಲಿ ತಾಯಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.. ಇದೇ ವೇಳೆ ಸ್ವಾಮೀಜಿಗಳು ಹಾಗೂ ಗುರುಗಳಿಂದ ಡಿ.ಕೆ.ಸುರೇಶ್ ಆಶೀರ್ವಾದ ಪಡೆದುಕೊಂಡಿದ್ದಾರೆ.. ಮೊದಲಿನಿಂದಲೂ ಅವರು ಗ್ರಾಮದೇವತೆಗಳಿಗೆ ಪೂಜೆ ಮಾಡಿ ಅನಂತರ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು.. ಈ ಬಾರಿಯೂ ಕೂಡಾ ಸಂಸದ ಡಿ.ಕೆ.ಸುರೇಶ್ ಅವರು ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.. ಅನಂತರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ..
ಇದನ್ನೂ ಓದಿ; ಕುಡಿಯುವ ನೀರಿಗಾಗಿ ಜಗಳ; 21 ವರ್ಷದ ಯುವಕನ ಹತ್ಯೆ!
ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಸುರೇಶ್;
ಬೆಳಗ್ಗೆಯೇ ಅವರು ಕನಕಪುರ ಕೆಂಕ್ಕೆರಮ್ಮ, ಶಕ್ತಿ ದೇವತೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ದೇವರಿಗೆ ಪೂಜೆ ಸಲ್ಲಿಸಿದ ಮೇಲೆ ರಾಮನರಗದಲ್ಲಿ ನಡೆದ ಮೆರವಣಿಗೆಯಲ್ಲಿ ಡಿ.ಕೆ.ಸುರೇಶ್ ಅವರು ಪಾಲ್ಗೊಂಡರು.. ಕ್ಷೇತ್ರದೆಲ್ಲಡೆಯಿಂದ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರು.. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಎಲ್ಲರೂ ಕೂಡಾ ಒಗ್ಗಟ್ಟು ಪ್ರದರ್ಶನ ಮಾಡುವುದರ ಜೊತೆಗೆ ಶಕ್ತಿ ಪ್ರದರ್ಶನವನ್ನೂ ಮಾಡಿದರು..
ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!
ಏಪ್ರಿಲ್ 26ರಂದು ಮತದಾನ, ಜೂನ್ 4ರಂದು ಫಲಿತಾಂಶ
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ.. ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.. ಸಾಮಾನ್ಯ ವರ್ಗದ ಅಭ್ಯರ್ಥಿಗಳು 25,000 ರೂ. ಠೇವಣಿ ಇಡಬೇಕಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 12,500 ರೂ. ಠೇವಣಿ ಇಡಬೇಕು.. ಏಪ್ರಿಲ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ..
ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!