Loksabha; ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಎಡವಿದ್ರಾ..?; ಬಿಜೆಪಿಯಲ್ಲಿ ಇಷ್ಟೊಂದು ಅಪಸ್ವರ ಯಾಕೆ..?
ಬೆಂಗಳೂರು; ಯಡಿಯೂರಪ್ಪ ನಿಜಕ್ಕೂ ಬಿಜೆಪಿಗೆ ದುಬಾರಿಯಾದರಾ..? ಮಗನ ನಾಯಕತ್ವ ಉಳಿಸಲು ಹೋಗಿ ಎಡವಟ್ಟು ಮಾಡಿಕೊಂಡರಾ..? ಚುನಾವಣಾ ರಾಜಕೀಯದಿಂದ ದೂರ ಉಳಿದ ಮೇಲೆ ಯಡಿಯೂರಪ್ಪ ಪ್ರಾಬಲ್ಯ ಕಡಿಮೆಯಾಯಿತಾ..? ಬಿಜೆಪಿಯಲ್ಲಿ ಬಹುತೇಕರು ಯಡಿಯೂರಪ್ಪ ಹಾಗೂ ಅವರ ಕುಟುಂಬದ ಕಡೆ ಬೆರಳು ತೋರಿಸುತ್ತಿರುವುದೇಕೆ.?
ಇದನ್ನೂ ಓದಿ; ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಫಿಕ್ಸ್; ಸಂಜೆ ಅಧಿಕೃತ ಘೋಷಣೆ!
ಯಡಿಯೂರಪ್ಪ ಬಿಜೆಪಿಗೆ ಬೇಡವಾದರಾ..?
ಕರ್ನಾಟಕ ಬಿಜೆಪಿ ಅಂತ ಬಂದಾಗ ಮೊದಲು ಬರುತ್ತಿದ್ದ ಹೆಸರೇ ಯಡಿಯೂರಪ್ಪ… ಯಡಿಯೂರಪ್ಪ ಇಲ್ಲದ ಕರ್ನಾಟಕದ ಬಿಜೆಪಿ ಏನೂ ಅಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು… ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ವೇಳೆ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು.. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿತು.. ಯಡಿಯೂರಪ್ಪ ನೇತೃತ್ವ ಇಲ್ಲದಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸೋಲಲು ಕಾರಣವಾಯ್ತು ಎಂದು ಎಲ್ಲರೂ ಮಾತಾಡಿದ್ದರು.. ಅದರ ಅರಿವಾಗಿಯೋ ಏನೋ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿತು.. ಅದಾದ ಮೇಲೆ ಯಡಿಯೂರಪ್ಪ ಕೂಡಾ ಮಗನ ಭವಿಷ್ಯ ಭದ್ರಪಡಿಸಲು ರಾಜಕೀಯದಲ್ಲಿ ಸಕ್ರಿವಾಗಿ ತೊಡಗಿಸಿಕೊಂಡರು.. ಆದ್ರೆ, ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ದ್ವೇಷಿಸುವವರು ಹೆಚ್ಚಾಗಿಬಿಟ್ಟಿದ್ದಾರೆ..
ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಾಂಬರ್ ಸಂಪರ್ಕದಲ್ಲಿದ್ದ ಇಬ್ಬರು ವಶ!
ಹೆಚ್ಚಾಯ್ತು ಬಂಡಾಯ, ಸಂಧಾನಕ್ಕೂ ಬಗ್ಗದ ನಾಯಕರು!;
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ.. ಉಳಿದಂತೆ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತಿದೆ.. ಇದರಲ್ಲಿ 24 ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ.. ಈ ಬಾರಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಹೇಳಿದವರಿಗೇ ಟಿಕೆಟ್ ನೀಡಿದೆ ಎನ್ನಲಾಗ್ತಿದೆ.. ಜೊತೆಗೆ ಬಿ.ಎಲ್.ಸಂತೋಷ್ ಮಾತು ಈ ಬಾರಿ ಹೆಚ್ಚು ನಡೆದಿಲ್ಲ… ಹೀಗಾಗಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯ ಹೆಚ್ಚಾಗಿದೆ.. ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರೇ ಬಂಡಾಯ ಘೋಷಿಸಿದ್ದಾರೆ.. ಅರ್ಧದಷ್ಟು ಕ್ಷೇತ್ರಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.. ಅಸಮಾಧಾನಿತರನ್ನು ಯಡಿಯೂರಪ್ಪ ಅವರೇ ಸಮಾಧಾನಕ್ಕೆ ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ..
ಇದನ್ನೂ ಓದಿ; ಮೈಸೂರು ಗೆಲ್ಲಲು ʻಆಪರೇಷನ್ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್
ಯಡಿಯೂರಪ್ಪ ಕಡೆ ಬೆಟ್ಟು ತೋರಿಸುವ ನಾಯಕರು;
ಹಾವೇರಿಯಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಕಾರಣ ಎಂದು ಆರೋಪಿಸಲಾಗುತ್ತಿದೆ.. ಮೈಸೂರಿನಲ್ಲಿ ಪ್ರತಾಪ ಸಿಂಹಗೆ ಟಿಕೆಟ್ ಕೈತಪ್ಪೋದಕ್ಕೂ ಯಡಿಯೂರಪ್ಪ ಅವರೇ ಕಾರಣ ಎಂಬ ಆರೋಪವಿದೆ.. ತುವಕೂರಿನಲ್ಲೂ ಮಾಧುಸ್ವಾಮಿ ಕಡೆಯಿಂದ ಇದೇ ರೀತಿಯ ಆರೋಪ ಕೇಳಿಬಂದಿತ್ತು.. ಇನ್ನು ಚಿಕ್ಕಬಳ್ಳಾಪುರ, ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದೇ ರೀತಿಯ ಮನಸ್ತಾಪಗಳು ಉಂಟಾಗುತ್ತಿವೆ.. ಮಾಜಿ ಸಿಎಂ ಸದಾನಂದಗೌಡರು ಪಕ್ಷ ಶುದ್ಧಿ ಮಾಡ್ತೀನಿ ಅಂತಿದ್ದಾರೆ.. ಈಶ್ವರಪ್ಪ ಅವರಂತೂ ಲೋಕಸಭಾ ಚುನಾವಣೆ ನಂತರ ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಇರೋದಿಲ್ಲ ಅಂತಿದ್ದಾರೆ.. ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ರಾಜ್ಯದಲ್ಲಿ ಬಿಜೆಪಿ ಹಾಳು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಮಾತನಾಡುತ್ತಾರೆ.. ಇದನ್ನೆಲ್ಲಾ ನೋಡ್ತಾ ಇದ್ರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಬೇಡವಾದರಾ..? ಅವರ ಹಿರಿತನ ಈ ಬಾರಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕೆಲಸಕ್ಕೆ ಬರಲಿಲ್ಲವಾ..? ಎಂಬ ಪ್ರಶ್ನೆಗಳು ಏಳುತ್ತವೆ..
ಇದನ್ನೂ ಓದಿ; ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?
ಪಕ್ಷ ನಿಭಾಯಿಸೋಕೆ ವಿಜಯೇಂದ್ರಗೆ ಆಗುತ್ತಿಲ್ಲವಾ..?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕದಲ್ಲಿ ಸಾಕಷ್ಟು ವಿಳಂಬ ನೀತಿ ಅನುಸರಿಸಿತು.. ಕೊನೆಗೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿತು.. ಈ ಹಿಂದೆ ನಡೆದ ಉಪಚುನಾವಣೆಗಳಲ್ಲಿ ವಿಜಯೇಂದ್ರಗೆ ನೇತೃತ್ವ ವಹಿಸಲಾಗಿತ್ತು.. ಈ ವೇಳೆ ವಿಜಯೇಂದ್ರ ಸಮರ್ಥವಾಗಿ ನಿಭಾಯಿಸಿದ್ದರು.. ಹೀಗಾಗಿ, ರಾಜ್ಯದಲ್ಲಿ ಬಿಜೆಪಿಯನ್ನು ವಿಜಯೇಂದ್ರ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದೇ ಭಾವಿಸಲಾಗಿತ್ತು… ಆದ್ರೆ, ಅಧಿಕಾರ ವಹಿಸಿಕೊಂಡ ಮೇಲೆ ವಿಜಯೇಂದ್ರ ಅಂದುಕೊಂತೆ ಪಕ್ಷ ನಿಭಾಯಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಇನ್ನೊಂದೆಡೆ ಎಲ್ಲಾ ವಿಚಾರದಲ್ಲೂ ಯಡಿಯೂರಪ್ಪ ಅವರೇ ಮುಂದೆ ನಿಂತು ನಿಭಾಯಿಸುತ್ತಿದ್ದಾರೆ.. ಹೈಕಮಾಂಡ್ ಭೇಟಿಯಾಗುವಾಗಲೂ ಯಡಿಯೂರಪ್ಪ ಅವರೇ ಮುಂದಾಳತ್ವ ವಹಿಸುತ್ತಿದ್ದಾರೆ.. ಹೀಗಾಗಿ ವಿಜಯೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದ್ರಾ ಎಂಬ ಪ್ರಶ್ನೆಯೂ ಮೂಡುತ್ತದೆ..
ಇದನ್ನೂ ಓದಿ; ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?
ಯಡಿಯೂರಪ್ಪರಿಂದಲೇ ಈ ಮಟ್ಟಕ್ಕೆ ಬೆಳೆದ ಬಿಜೆಪಿ;
ರಾಜ್ಯದಲ್ಲಿ ಯಡಿಯೂರಪ್ಪ ಅವರು ಬಿಜೆಪಿಯನ್ನು ಸಮರ್ಥವಾಗಿ ಬೆಳೆಸಿದ್ದಾರೆ.. ಮಧ್ಯ ಪಕ್ಷಕ್ಕೆ ಬಂದಿದ್ದ ಬಂಗಾರಪ್ಪ ಮುಂತಾದವರು ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುವಂತೆ ನೋಡಿಕೊಂಡರಾದರೂ, ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿ ಬೇರೂರಲು ಯಡಿಯೂರಪ್ಪ ಅವರ ಸಮರ್ಥ ನಾಯಕತ್ವವೇ ಕಾರಣ.. ಆದ್ರೆ, ಅದ್ಯಾಕೋ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಯಡಿಯೂರಪ್ಪ ಎಡವಿದ್ರಾ..? ಇಲ್ಲವೇ ಬಿಜೆಪಿ ಹೈಕಮಾಂಡೇ ಇಂತಹ ತಪ್ಪು ನಿರ್ಧಾರಕ್ಕೆ ಕಾರಣವಾಯ್ತಾ ಗೊತ್ತಾಗುತ್ತಿಲ್ಲ… ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಕಡೆ ಬೆಟ್ಟು ತೋರಿಸುವ ನಾಯಕರು ಮಾತ್ರ ಹೆಚ್ಚಾಗಿಬಿಟ್ಟಿದ್ದಾರೆ.. ಇದನ್ನು ಅನುಭವಿ ಯಡಿಯೂರಪ್ಪ ಅದು ಹೇಗೆ ನಿಭಾಯಿಸುತ್ತಾರೋ, ಪಕ್ಷವನ್ನು ಜಯದ ದಾರಿಯಲ್ಲಿ ಹೇಗೆ ಮುನ್ನಡೆಸುತ್ತಾರೋ ನೋಡಬೇಕು..
ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!