ಗನ್ ಹಿಡಿದುಬಂದ ಆಗಂತುಕನಿಗೆ ಬುದ್ಧಿ ಕಲಿಸಿದ ತಾಯಿ, ಮಗಳು!
ಹೈದರಾಬಾದ್; ಮನೆಯಲ್ಲಿ ಬರೀ ಹೆಣ್ಣು ಮಕ್ಕಳೇ ಇದ್ದಾಗ ಯಾರಾದರೂ ಆಗಂತುಕ ಗನ್ ಹಿಡಿದು ಮನೆಗೆ ನುಗ್ಗಿಬಿಟ್ಟರೆ ಏನು ಗತಿ..? ಗನ್ ನೋಡುತ್ತಲೇ ಮಹಿಳೆಯರು ಮೂರ್ಛೆ ಹೋಗಿಬಿಡುತ್ತಾರೆ.. ಇಲ್ಲಾಂದ್ರೆ ಭಯದಿಂದ ಮನೆಯಲ್ಲಿರುವುದಕ್ಕೇ ಕೊಟ್ಟು ಪ್ರಾಣ ಉಳಿಸಿಕೊಳ್ಳುತ್ತಾರೆ.. ಆದ್ರೆ ಹೈದರಾಬಾದ್ನಲ್ಲಿ ನಡೆದಿರುವುದು ಇದಕ್ಕೆ ತದ್ವಿರುದ್ಧ… ಗನ್ ತೋರಿಸಿದ ವ್ಯಕ್ತಿಯನ್ನು ತಾಯ-, ಮಗಳು ಇಬ್ಬರೂ ಸೇರಿಕೊಂಡು ಓಡಿಸಿದ್ದಾರೆ.. ಆ ಫೈಟೇ ರೋಚಕವಾಗಿದೆ..
ಇದನ್ನೂ ಓದಿ; ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅರೆಸ್ಟ್
ಹೆಲ್ಮೆಟ್ ಹಾಕಿಕೊಂಡು ಬಂದಿದ್ದ ಆಗಂತುಕ;
ಹೆಲ್ಮೆಟ್ ಹಾಕಿಕೊಂಡು ಗನ್ ಹಿಡಿದು ಬಂದಿದ್ದ ಆಗಂತುಕನೊಬ್ಬ ಹೈದರಾಬಾದ್ನ ಬೇಗಂಪೇಟೆಯ ಮನೆಯೊಂದಕ್ಕೆ ನುಗ್ಗಿದ್ದಾನೆ.. ಈ ವೇಳೆ ಮನೆಯಲ್ಲಿ ತಾಯಿ, ಮಗಳು ಹಾಗೂ ಕೆಲಸದಾಕೆ ಮಾತ್ರ ಇದ್ದರು.. ಆತ ಮನೆಯಲ್ಲಿದ್ದವರಿಗೆ ಗನ್ ತೋರಿಸಿದ್ದಾನೆ.. ಆದ್ರೆ ಇದಕ್ಕೆ ಹೆದರದ ತಾಯಿ, ಮಗಳು ಆತನ ಮೇಲೆ ದಾಳಿ ಮಾಡಿದ್ದಾರೆ.. ಆತನನ್ನು ಕೆಳಗೆ ಬೀಳಿಸಿದ್ದಾರೆ.. ಆತನ ಕೈಯಿಂದ ಗನ್ ಕಿತ್ತುಕೊಂಡಿದ್ದಾರೆ.. ಹೆಲ್ಮೆಟ್ ನ್ನು ಕೂಡಾ ತೆಗೆದಿದ್ದಾರೆ.. ಆದ್ರೆ ಇಬ್ಬರೂ ಮಹಿಳೆಯರಿಂದ ಹೇಗೂ ಬಿಡಿಸಿಕೊಳ್ಳುವ ಆತ ತಪ್ಪಿಸಿಕೊಂಡು ಹೊರಹೋಗುತ್ತಾನೆ.. ಹೊರಗೆ ಕಾಯುತ್ತಿದ್ದ ಮತ್ತೊಬ್ಬ ಆಗಂತುಕನ ಜೊತೆ ಎಸ್ಕೇಪ್ ಆಗುತ್ತಾನೆ..
ಇದನ್ನೂ ಓದಿ; ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್; 12 ಕಡೆ ಮಕ್ಕಳು, ಸಂಬಂಧಿಕರಿಗೇ ಮಣೆ!
ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು;
ಆರೋಪಿಗಳೇನೋ ಅಲ್ಲಿಂದ ಎಸ್ಕೇಪ್ ಆಗುತ್ತಾರೆ.. ಆದ್ರೆ ಮಹಿಳೆಯರು ಮಾತ್ರ ಸುಮ್ಮನಾಗಲಿಲ್ಲ.. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗೊತ್ತಿರುವವರೇ ದಾಳಿ ಮಾಡಲು ಬಂದಿದ್ದರು;
ಮಾಹಿತಿ ಪ್ರಕಾರ ಇಬ್ಬರೂ ಆರೋಪಿಗಳು ಮನೆಯವರಿಗೆ ಗೊತ್ತಿರುವವರೇ ಎಂದು ತಿಳಿದುಬಂದಿದೆ.. ಆದ್ರೆ ಯಾಕೆ ಈ ದಾಳಿ ನಡೆಸಲು ಬಂದರು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಘಟನೆಗೆ ಕಾರಣವನ್ನು ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; Breaking; ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅರೆಸ್ಟ್
ದಿಟ್ಟತನದಿಂದ ಎದುರಿಸಿದ ಮಹಿಳೆಯರು;
ದಾಳಿ ಮಾಡಲು ಬಂದಾಗ ತಾಯಿ ಹಾಗೂ ಮಗಳಿಬ್ಬರೂ ದಿಟ್ಟವಾಗಿ ಎದುರಿಸಿದ್ದಾರೆ.. ಯಾವ ಕಾರಣಕ್ಕೂ ಹೆದರಿಲ್ಲ.. ಆತನ ದಾಳಿ ಮಾಡದ ಹಾಗೆ ನೋಡಿಕೊಂಡಿದ್ದಾರೆ.. ಆತನನ್ನು ಹೊರಗೆ ತಳ್ಳಿಕೊಂಡು ಬಂದು ಕೆಳಗೆ ಬೀಳಿಸಿದ್ದಾರೆ.. ಹೆಲ್ಮೆಟ್ ಅನ್ನು ಕೂಡಾ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.. ಹೆಲ್ಮೆಟ್ ತೆಗೆದಿದ್ದರಿಂದ ಅವರಿಗೆ ಯಾರು ಬಂದಿರೋದು ಅನ್ನೋದು ಗೊತ್ತಾಗಿದೆ.. ಹೈದರಾಬಾದ್ನ ನಾರ್ಥ್ ಝೋನ್ ಡಿಸಿಪಿ ರೋಹಿಣಿ ಪ್ರಿಯದರ್ಶಿನಿ ನಾಳೆ ಸುದ್ದಿಗೋಷ್ಠಿ ನಡೆಸಿ ಘಟನೆ ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ;ಅತ್ತಿಗುಪ್ಪೆಯಲ್ಲಿ ಮೆಟ್ರೋ ಟ್ರೈನಿಗೆ ಸಿಲುಕಿ ಯುವಕ ಸಾವು!