ಇಂದೇ ಕಾಂಗ್ರೆಸ್ ಪಟ್ಟಿ ರಿಲೀಸ್; ಸಚಿವರ ಮಕ್ಕಳು, ಸಂಬಂಧಿಕರಿಗೇ ಹೆಚ್ಚು ಮಣೆ?
ಬೆಂಗಳೂರು; ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಾಜ್ಯದಲ್ಲಿ ಇನ್ನೂ ಏಳು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.. ಇನ್ನೂ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಳಿಸಬೇಕಿದೆ.. ನಿನ್ನೆ ದೆಹಲಿಯಲ್ಲಿ ಸಭೆ ನಡೆದಿದ್ದು, ಇವತ್ತೂ ಕೂಡಾ ಮುಂದುವರೆದಿದೆ.. ಬಹುತೇಕ ಇವತ್ತು ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ.. ಮೊದಲಿನಿಂದಲೂ ಸಚಿವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಪಡುತ್ತಿದ್ದರು.. ಸುಮಾರು ಹತ್ತಕ್ಕೂ ಹೆಚ್ಚು ಸಚಿವರನ್ನು ಲೋಕಸಭಾ ಅಖಾಡಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿತ್ತು.. ಆದ್ರೆ ಯಾವ ಸಚಿವರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಒಪ್ಪಿಲ್ಲ.. ಹೀಗಾಗಿ ಸಚಿವರ ಮಕ್ಕಳು ಹಾಗೂ ಸಂಬಂಧಿಕರಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ.. ಮಾಹಿತಿ ಪ್ರಕಾರ ಎರಡನೇ ಲಿಸ್ಟ್ ನಲ್ಲಿ ಐವರು ಸಚಿವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಐದು ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಇರುವುದರಿಂದ ಆ ಕ್ಷೇತ್ರಗಳಿಗೆ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಇಲ್ಲಿರೋದು ಸ್ಟ್ರಾಂಗ್ ಸಿಎಂ; ಪ್ರಧಾನಿಗೆ ಸಿದ್ದರಾಮಯ್ಯ ಟಾಂಗ್
ಐವರು ಸಚಿವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್..?;
ನಿನ್ನೆ ದೆಹಯಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆ.ಜೆ.ಜಾರ್ಜ್ ಪಾಲ್ಗೊಂಡಿದ್ದರು. ರಾಜ್ಯದ ಉಳಿದ 21 ಕ್ಷೇತ್ರಗಳ ಬಗ್ಗೆ ನಿನ್ನೆ ಚರ್ಚೆಯಾಗಿದೆ.. ಐದು ಕ್ಷೇತ್ರ ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಫೈಣಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ತಮಿಳುನಾಡು, ತೆಲಂಗಾಣ, ಗುಜರಾತ್ ರಾಜ್ಯಗಳಿಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಿನ್ನೆ ನಡೆದಿದೆ. ಐವರು ಸಚಿವರ ಮಕ್ಕಳಿಗೆ ಈ ಪಟ್ಟಿಯಲ್ಲಿ ರಾಜ್ಯದಿಂದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬರುತ್ತಿದೆ.
ಯಾರು ಐವರು ಸಚಿವರ ಮಕ್ಕಳು..?
ಸೌಮ್ಯಾರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ (ಬೆಂಗಳೂರು ದಕ್ಷಿಣ)
ಮೃಣಾಲ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ (ಬೆಳಗಾವಿ)
ಸಾಗರ್ ಖಂಡ್ರೆ, ಸಚಿವ ಈಶ್ವರ ಖಂಡ್ರೆ ಪುತ್ರ (ಬೀದರ್)
ಪ್ರಿಯಾಂಕಾ ಜಾರಕಿಹೊಳಿ, ಸಚಿವ ಸತೀಸ್ ಜಾರಕಿಹೊಳಿ ಪುತ್ರಿ (ಚಿಕ್ಕೋಡಿ)
ಸಂಯುಕ್ತಾ, ಸಚಿವ ಶಿವಾಂನಂದ ಪಾಟೀಲ್ ಪುತ್ರಿ (ಬಾಗಲಕೋಟೆ)
ಇದನ್ನೂ ಓದಿ; ಲೋಕಸಭಾ ಚುನಾವಣೆ; ಇಂದಿನಿಂದ ಮೊದಲ ಹಂತದ ನಾಮಪತ್ರ ಸಲ್ಲಿಕೆ
ಐದು ಕ್ಷೇತ್ರಗಳ ಟಿಕೆಟ್‌ಗೆ ತೀವ್ರ ಲಾಬಿ, ಹೈಕಮಾಂಡ್‌ಗೆ ತಲೆಬಿಸಿ;
ಎರಡನೇ ಪಟ್ಟಿಗಾಗಿ ನಡೆದ ಮೀಟಿಂಗ್ ವೇಳೆ ರಾಜ್ಯದ ಸುಮಾರು 16 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.. ಆದ್ರೆ ಉಳಿದ ಐದು ಕ್ಷೇತ್ರಗಳಿಗೆ ಹೈಕಮಾಂಡ್ ನಾಯಕರಿಗೆ ತಲೆಬಿಸಿ ಉಂಟಾಗಿದೆ. ಯಾರಿಗೆ ಟಿಕೆಟ್ ಕೊಡೋದು ಅನ್ನೋದು ಅವರಿಗೆ ಅರ್ಥವಾಗುತ್ತಿಲ್ಲ. ಯಾಕಂದ್ರೆ ಐದು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದೆ.. ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರಗಳಿಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.. ಈ ಐದು ಕ್ಷೇತಗಳಿಗೆ ಅಭ್ಯರ್ಥಿಗಳ ಘೋಷಣೆ ಇನ್ನೂ ಪೆಂಡಿಂಗ್ ಇಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ; ಮನೆಯಲ್ಲೇ ತಯಾರಿಸಬಹುದು ಪ್ರೊಟೀನ್ ಪೌಡರ್
ನಾಯಕರ ಸಂಬಂಧಿಕರಿಗೂ ಸಿಗುತ್ತಾ ಟಿಕೆಟ್..?
ಕಾಂಗ್ರೆಸ್ ಸೇರ್ತಾರಾ ಡಿ.ವಿ.ಸದಾನಂದ ಗೌಡ;
ಇನ್ನು ಮಾಜಿ ಸಿಎಂ ಸದಾನಂದಗೌಡ ಹಾಗೂ ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.. ಅವರು ಬಂದರೆ ಟಿಕೆಟ್ ನೀಡಲಾಗುತ್ತದಾ ಅಥವಾ ಅವರಿಗೆ ಬೇರೆ ವ್ಯವಸ್ಥೆ ಮಾಡಲಾಗುತ್ತದಾ ಎಂಬುದರ ಬಗ್ಗೆ ಪಟ್ಟಿ ಘೋಷಣೆ ಹಾಗೂ ಅವರು ಪಕ್ಷಕ್ಕೆ ಸೇರ್ಪಡೆಯ ನಂತರ ಗೊತ್ತಾಗಲಿದೆ.
ಇದನ್ನೂ ಓದಿ; ಸ್ವಂತ ಅಕ್ಕನನ್ನೇ ಮದುವೆಯಾದ ಭೂಪ; ಕಾರಣ ಕೇಳಿದ್ರೆ ಥೂ ಅಂತೀರಿ!