CrimePolitics

ಮಂಡ್ಯ ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ವಶ!

ಮಂಡ್ಯ; ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.. ಹೀಗಾಗಿ ಎಲ್ಲೆಡೆ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದ್ದು, ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.. ಹೀಗಿರುವಾಗಲೇ ಮಂಡ್ಯ ಬಳಿ ಕಾರೊಂದರಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ..

ಇದನ್ನೂ ಓದಿ; ಕಾಂಗ್ರೆಸ್‌ ಎರಡನೇ ಪಟ್ಟಿಗಾಗಿ ಸರ್ಕಸ್‌; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ಕಾರಿನಲ್ಲಿ ನಗದು ಸಾಗಾಟ;

ಮಂಡ್ಯ ಜಿಲ್ಲೆ ಮದ್ದೂರು ಬಳಿ ನಿಡಘಟ್ಟ ಚೆಕ್‌ಪೋಸ್ಟ್‌ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.. ಈ ವೇಳೆ ಬಂದ KA 54 N 4030 ಸಂಖ್ಯೆಯ ಕ್ರೇಟಾ ಕಾರಿನಲ್ಲಿ ಕೂಡಾ ಪರಿಶೀಲನೆ ಮಾಡಲಾಗಿದೆ.. ಈ ವೇಳೆ ಈ ಕಾರಿನಲ್ಲಿ ಹಲವು ಕವರ್‌ಗಳು ಪತ್ತೆಯಾಗಿದ್ದು, ಇದರಲ್ಲಿ ಬರೋಬ್ಬರಿ 99 ಲಕ್ಷದ 20 ಸಾವಿರ ರೂಪಾಯಿ ಸಿಕ್ಕಿದೆ.. ಇದಕ್ಕೆ ಸೂಕ್ತ ದಾಖಲೆ ಒದಗಿಸದ ಕಾರಣ ಕಾರು ಸಮೇತ ಹಣವನ್ನು ವಶಪಡಿಸಿಕೊಳ್ಳಲಾಗಿದೆ..

ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್‌; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!

ಚುನಾವಣಾಧಿಕಾರಿಗಳು ಹದ್ದಿನ ಕಣ್ಣು;

ನೀತಿ ಸಂಹಿತೆ ಜಾರಿಯಾದ ದಿನದಿಂದ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.. ಕಾರುಗಳು, ಇತರೆ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸುತ್ತಿದ್ದಾರೆ… ಈ ವೇಳೆ ರಾಜ್ಯದ ಅಲ್ಲಲ್ಲಿ ಈಗಾಗಲೇ ದಾಖಲೆ ಇಲ್ಲದ ಹಣ ಸಿಕ್ಕಿದೆ… ಆದ್ರೆ ಮಂಡ್ಯದ ಮದ್ದೂರು ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಸಿಕ್ಕಿದೆ… ಇದುವರೆಗೆ ಸಿಕ್ಕ ಹಣದಲ್ಲಿ ಇದೇ ದೊಡ್ಡ ಮೊತ್ತ.. ಆದ್ರೆ ಈ ಹಣವನ್ನು ಯಾಕೆ ಸಾಗಿಸುತ್ತಿದ್ದರು..? ಎಲ್ಲಿಗೆ ಸಾಗಿಸುತ್ತಿದ್ದರು..? ಅನ್ನೋದು ಗೊತ್ತಿಲ್ಲ… ಇದು ಚುನಾವಣಾ ಅಕ್ರಮಕ್ಕೆ ಬಳಸಲಾಗುತ್ತಿದ್ದ ಹಣವೇ..? ಅಥವಾ ಬೇರೆ ಯಾವ ಹಣ..? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ..

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

ಅಡಿಕೆ ವ್ಯಾಪಾರಿಗೆ ಸೇರಿದ ನಗದು ಎಂಬ ಮಾಹಿತಿ;

ಮಾಹಿತಿ ಪ್ರಕಾರ ಈ ಹಣ ಕೆಆರ್‌ ಪೇಟೆ ಮೂಲದ ಅಡಿಕೆ ವ್ಯಾಪಾರಿಗೆ ಸೇರಿದ ಹಣ ಎಂದು ಹೇಳಲಾಗುತ್ತಿದೆ.. ಅಡಿಕೆ ವ್ಯಾಪಾರದ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.. ಅಂದಹಾಗೆ, ಕೋಟಿ ಲೆಕ್ಕದಲ್ಲಿ ನಗದು ರೂಪದಲ್ಲಿ ವ್ಯವಹಾರ ಮಾಡುವುದು ಕಾನೂನು ಪ್ರಕಾರ ತಪ್ಪು.. ಜೊತೆಗೆ ಅಡಿಕೆ ವ್ಯಾಪಾರದಿಂದ ಬಂದ ಹಣ ಎಂಬುದಕ್ಕೆ ಕಾರಿನಲ್ಲಿದ್ದವರು ಸೂಕ್ತ ದಾಖಲೆ ಕೂಡಾ ಒದಗಿಸಿಲ್ಲ.. ಹೀಗಾಗಿ ಆ ಹಣವನ್ನು ಜಪ್ತಿ ಮಾಡಲಾಗಿದೆ.. ಸೂಕ್ತ ದಾಖಲೆ ಒದಗಿಸಿದರೆ ಅದನ್ನು ವಾಪಸ್‌ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ಚುನಾವಣೆ ಮುಗಿಯುವವರೆಗೂ ತೀವ್ರ ತಪಾಸಣೆ;

ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19 ಹಾಗೂ ಮೇ 7 ರಂದು ಚುನಾವಣೆ ನಡೆಯಲಿದೆ. ಇದು ಮುಗಿದು ಜೂನ್‌ 4 ರಂದು ಮತ ಎಣಿಕೆ ನಡೆಯುವವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.. ಹೀಗಾಗಿ ಈ ವೇಳೆ ಹೆಚ್ಚಿನ ನಗದು ಸಾಗಾಟದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿರುತ್ತಾರೆ.. ವ್ಯಾಪಾರ, ವ್ಯವಹಾರಕ್ಕೆ ಹಣ ಬಳಸುವುದಾದರೆ ಆನ್‌ಲೈನ್‌ ಮೂಲಕ ಬಳಕೆ ಮಾಡುವುದು ಒಳ್ಳೆಯದು.. ಆಗ ಸರ್ಕಾರಕ್ಕೂ ಲೆಕ್ಕ ಸಿಗುತ್ತದೆ..

 

ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

 

Share Post