Politics

ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್‌; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!

ಬೆಂಗಳೂರು; ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಯಾರಾಗಬೇಕು ಅಭ್ಯರ್ಥಿ..? ಇದು ಒಂದು ತರಾ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉಳಿದುಕೊಂಡಿದೆ.. ಒಂದು ಕಡೆ ಸುಮಲತಾ ಅವರು ಮಂಡ್ಯ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲೇ ಉಳಿದುಕೊಳ್ಳುತ್ತೆ, ನಾನೇ ಅಭ್ಯರ್ಥಿಯಾಗ್ತೀನಿ ಅನ್ನೋ ಆಸೆಯನ್ನು ಅವರು ಈಗಲೂ ಉಳಿಸಿಕೊಂಡಿದ್ದಾರೆ.. ಇತ್ತ ಜೆಡಿಎಸ್‌ನಲ್ಲಿ ದಿನಕ್ಕೊಂದು ಗಳಿಗೆಗೊಂದು ಹೆಸರುಗಳು ತೇಲಿಬರುತ್ತಿವೆ.. ಇದೀಗ ಮಾಜಿ ಸಿಎಂ ಕುಮಾರಸ್ವಾಮಿಯವರೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಬಂದಿದೆ..

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

ನಾನೇ ಕಣಕ್ಕಳಿಯುತ್ತೇನೆ ಅಂದರಾ ಹೆಚ್ಡಿಕೆ..?;

ಸಂಸದೆ ಸುಮಲತಾ ಅವರು ನಿನ್ನೆ ದೆಹಲಿಯಲ್ಲಿ ಮಾತನಾಡುತ್ತಾ ಮಂಡ್ಯ ಸೀಟು ಹಂಚಿಕೆ ಇನ್ನೂ ಫೈನಲ್‌ ಆಗಿಲ್ಲ.. ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದರು.. ಈ ಬೆನ್ನಲ್ಲೇ ಜೆಡಿಎಸ್‌ಗೆ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ತಿಳಿಸದ ಬಿಜೆಪಿ ನಾಯಕರ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.. ಹೀಗಿರುವಾಗೇ ಕಳೆದ ರಾತ್ರಿ ಕುಮಾರಸ್ವಾಮಿಯವರು ತಾವೇ ಮಂಡ್ಯದಿಂದ ಸ್ಪರ್ಧೆ ಮಾಡೋಕೆ ನಿರ್ಧರಿಸಿದ್ದಾರೆ ಎಂಧು ಹೇಳಲಾಗುತ್ತಿದೆ. ಕುಮಾರಸ್ವಾಮಿಯವರೇ ಕಣಕ್ಕಿಳಿದರೆ ಮಂಡ್ಯದಲ್ಲಿ ಗೆಲ್ಲೋದು ಸುಲಭ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ನಿಖಿಲ್‌ ಕುಮಾರಸ್ವಾಮಿ, ಪುಟ್ಟರಾಜು ಹೆಸರು ಕೇಳಿಬಂದಿತ್ತು;

ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುತ್ತಾರೆ ಎಂದು ಬಂದಾಗ ಮೊದಲಿ ನಿಖಿಲ್‌ ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತು.. ಇದರ ಜೊತೆಗೆ ಸಿ.ಎಸ್‌.ಪುಟ್ಟರಾಜು ಹೆಸರು ಕೂಡಾ ಚಾಲ್ತಿಗೆ ಬಂದಿತ್ತು.. ಮೊನ್ನೆ ಮಂಡ್ಯದಲ್ಲಿ ನಡೆದ ಜೆಡಿಎಸ್‌ ಸಭೆಯಲ್ಲಿ ಕುಮಾರಸ್ವಾಮಿಯವರು ನಿಖಿಲ್‌ ಕುಮಾರಸ್ವಾಮಿಯವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದರು.. ಹೀಗಾಗಿ ನಿಖಿಲ್‌ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಎಲ್ಲರೂ ನಂಬಿದ್ದರು.. ಹೀಗಿರುವಾಗಲೇ ಕುಮಾರಸ್ವಾಮಿಯವರು ತಾವೇ ಅಭ್ಯರ್ಥಿಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಇದನ್ನೂ ಓದಿ; ಮಂಡ್ಯನಾ, ಚಿಕ್ಕಬಳ್ಳಾಪುರನಾ..?; ನಡ್ಡಾ ಭೇಟಿ ನಂತರ ಸುಮಲತಾ ಅಚ್ಚರಿ ಮಾತು!

ಕುಮಾರಸ್ವಾಮಿಯವರಿಗೇ ಸ್ಪರ್ಧಿಸಲು ಹೇಳಿದ್ದ ಬಿಜೆಪಿ ಹೈಕಮಾಂಡ್‌;

ಬಿಜೆಪಿ ಹೈಕಮಾಂಡ್‌ ಮಂಡ್ಯದಲ್ಲಿ ಕುಮಾರಸ್ವಾಮಿಯವರಿಗೇ ಸ್ಪರ್ಧೆ ಮಾಡಲು ಹೇಳಿತ್ತು ಎನ್ನಲಾಗಿದೆ.. ಕುಮಾರಸ್ವಾಮಿಯವರು ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಗೆಲುವು ಸುಲಭ ಅನ್ನೋದು ಸರ್ವೇಯಿಂದ ಗೊತ್ತಾಗಿದೆ.. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನೀವೇ ಅಭ್ಯರ್ಥಿಯಾಗಿ ಎನ್ನುತ್ತಿದ್ದರು ಎಂದು ಹೇಳಲಾಗಿದೆ.. ಆದ್ರೆ ಕುಮಾರಸ್ವಾಮಿಯವರು ಮಾತ್ರ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು.. ಈ ಕಾರಣಕ್ಕೋ ಏನೋ ಬಿಜೆಪಿ ನಾಯಕರು ಜೆಡಿಎಸ್‌ಗೆ ಕ್ಷೇತ್ರಗಳ ಹಂಚಿಕೆ ಮಾಡದೇ ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದರು ಅನಿಸುತ್ತೆ.. ಇದನ್ನು ಅರಿತೋ ಏನೋ ಕುಮಾರಸ್ವಾಮಿಯವರು ತಾವೇ ಕಣಕ್ಕಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ..

ಇದನ್ನು ಓದಿ; ಇನ್ಫಿ ನಾರಾಯಣ ಮೂರ್ತಿಯ 4 ತಿಂಗಳ ಮೊಮ್ಮಗ 240 ಕೋಟಿ ಒಡೆಯ!

ಕುಮಾರಸ್ವಾಮಿ ಸ್ಪರ್ಧಿಸಿದರೆ ಸುಮಲತಾ ವಿರೋಧ ಮಾಡಲ್ಲ..!

ಮಂಡ್ಯದಿಂದ ಕುಮಾರಸ್ವಾಮಿಯವರು ಕಣಕ್ಕಿಳಿಯೋದಾದರೆ ಸುಮಲತಾ ಅವರು ಕೂಡಾ ಹೆಚ್ಚು ವಿರೋಧ ಮಾಡೋದು ಕಡಿಮೆ.. ಜೊತೆಗೆ ವಿರೋಧಿ ಎಷ್ಟೇ ಪ್ರಬಲ ಅಭ್ಯರ್ಥಿಯಾದರೂ ಕುಮಾರಸ್ವಾಮಿ ವಿರುದ್ಧ ಗೆಲ್ಲೋದು ಕಷ್ಟವಾಗುತ್ತೆ.. ಹೀಗಾಗಿ ಎಲ್ಲಾ ಲೆಕ್ಕಾಚಾರಗಳನ್ನೂ ಹಾಕಿಕೊಂಡು ಕುಮಾರಸ್ವಾಮಿ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ;ಕರ್ನಾಟಕ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ; ಪ್ರಧಾನಿ ಮೋದಿ

ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ಕುಮಾರಸ್ವಾಮಿ;

ಈ ಮಧ್ಯೆ, ಹೃದಯ ಚಿಕಿತ್ಸೆಗಾಗಿ ಕುಮಾರಸ್ವಾಮಿ ಇಂದು ಚೆನ್ನೈಗೆ ತೆರಳಲಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಚಿಕಿತ್ಸೆಯ ನಂತರ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

 

Share Post