ಇನ್ಫಿ ನಾರಾಯಣ ಮೂರ್ತಿಯ 4 ತಿಂಗಳ ಮೊಮ್ಮಗ 240 ಕೋಟಿ ಒಡೆಯ!
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮೊಮ್ಮಗ ಹುಟ್ಟಿದ 4 ತಿಂಗಳಿಗೇ ಮಿಲಿಯನೇರ್ ಆಗಿದ್ದಾನೆ. ಇನ್ಫೋಸಿಸ್ ನಾರಾಯಣಮೂರ್ತಿಯವರು ಸುಮಾರು 240 ಕೋಟಿ ರೂಪಾಯಿ ಷೇರುಗಳನ್ನು ತಮ್ಮ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಅಂದರೆ ಕಂಪನಿಯ ಶೇ.0.04ರಷ್ಟು ಷೇರುಗಳು ಏಕಾಗ್ರಹ ರೋಹನ್ ಮೂರ್ತಿಗೆ ವರ್ಗಾವಣೆಯಾಗಿವೆ ಎಂದು ಷೇರು ವಿನಿಮಯ ಕೇಂದ್ರ ಮಾಹಿತಿ ನೀಡಿದೆ. ಇದರಿಂದಾಗಿ ಏಕಾಗ್ರಹ ರೋಹನ್ ಮೂರ್ತಿ ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ; ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷದ ಎಟಿಎಂ; ಪ್ರಧಾನಿ ಮೋದಿ
4 ತಿಂಗಳ ಮಗು 240 ಕೋಟಿ ರೂ. ಒಡೆಯ;
ಮೊಮ್ಮಗನನ್ನು ಷೇರು ಪಾಲುದಾರ ಮಾಡಿಕೊಂಡ ನಂತರ ಕಂಪನಿಯಲ್ಲಿ ನಾರಾಯಣಮೂರ್ತಿಯ ಪಾಲು ಶೇ.0.36 ಆಗಿದೆ. ಇನ್ಫಿ ನಾರಾಯಮೂರ್ತಿ ಹಾಗೂ ಸುಧಾಮೂರ್ತಿಯವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣ ದಂಪತಿಗೆ ಕಳೆದ ನವೆಂಬರ್‌ನಲ್ಲಿ ಗಂಡು ಮುಗು ಹುಟ್ಟಿದೆ.. ಈ ಮಗುವಿಗೆ ಇದೀಗ ನಾಲ್ಕು ತಿಂಗಳಾಗಿದ್ದು, ಮುಗವಿಗೆ ಏಕಾಗ್ರಹ ರೋಹನ್ ಮೂರ್ತಿ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ; ನಟಿ ಅರುಂಧತಿ ನಾಯರ್‌ಗೆ ಅಪಘಾತ; ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಚಿಂತಾಜನಕ
ನಾರಾಯಣಮೂರ್ತಿ ಮೊಮ್ಮಗನಿಗೆ ಏಕಾಗ್ರಹ ಎಂಬ ಹೆಸರಿಟ್ಟಿದ್ದಾರೆ. ಏಕಾಗ್ರಹ ಎಂದರೆ ಸಂಸ್ಕೃತದಲ್ಲಿ ಅಚಲವಾದ ಗಮನ ಮತ್ತು ನಿರ್ಣಯ ಎಂದರ್ಥ. ಮಹಾಭಾರತದಲ್ಲಿ ಅರ್ಜುನನ ಏಕಾಗ್ರಹತೆಯ ಸ್ಫೂರ್ತಿಯಿಂದ ಈ ಹೆಸರನ್ನಿಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಈಶ್ವರಪ್ಪ ನಿರ್ಧಾರ ಅಚಲ; ಮೋದಿ ಕಾರ್ಯಕ್ರಮದ ಗಣ್ಯರ ಪಟ್ಟಿಯಿಂದ ಕೊಕ್