Politics

ಕರ್ನಾಟಕ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ; ಪ್ರಧಾನಿ ಮೋದಿ

ಶಿವಮೊಗ್ಗ; ರಾಜ್ಯ ಕಾಂಗ್ರೆಸ್‌ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ ಆಗಿದೆ.. ದೆಹಲಿಯಲ್ಲಿ ಕಲೆಕ್ಷನ್‌ ಮಿನಿಸ್ಟರ್‌ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಹೇಳೋದೆಲಾ ಸುಳ್ಳುಗಳೇ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಗುದ್ದಾಟ ನಡೆಯುತ್ತಿದೆ. ಈಗಿರುವ ಸಿಎಂ ಖಾಲಿ ಮಾಡಿಸಿ ಅದರಲ್ಲಿ ಕೂರಲು ಮತ್ತೊಬ್ಬರು ರೆಡಿಯಾಗಿ ನಿಂತಿದ್ಧಾರೆ. ಇದರ ಜೊತೆಗೆ ಶ್ಯಾಡೋ ಸಿಎಂ ಆಗಿ ಒಬ್ಬರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಬಾರಿ ಬಿಜೆಪಿಗೆ 400 ಸ್ಥಾನಗಳು ಬೇಕು. ಎಲ್ಲರೂ ಸೇರಿ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು. ಈ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೋಲುಣಿಸಬೇಕು.. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 28 ಕ್ಕೆ 28 ಸ್ಥಾನವೂ ಬರಬೇಕು ಎಂದು ಪ್ರಧಾನಿ ಮೋದಿಯವರು ಹೇಳಿದರು. ನನಗೆ ನಾರಿ ಶಕ್ತಿ ಹಾಗೂ ಅಮ್ಮನ ಆಶಿರ್ವಾದ ಇದೆ ಎರಡೂ ಇದೆ. ಈ ಬಾರಿ ನಾವು ದಾಖಲೆ ಮಟ್ಟದಲ್ಲಿ ಗೆಲ್ಲಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ನಮ್ಮ ಸರ್ಕಾರ ಬಂದ ಮೇಲೆ ಎಲ್ಲಾ ವರ್ಗ ಕಲ್ಯಾಣ ಆಗಿದೆ.. ರೈತರ ಬೆನ್ನೆಲುಬಾಗಿ ನಾವು ನಿಂತಿದ್ದೇವೆ.. ಆದ್ರೆ ಕಾಂಗ್ರೆಸ್‌ ಪಕ್ಷದ ಅಜೆಂಡಾಗಳೇ ಬೇರೆ ಇವೆ.. ಏನೇನೋ ಸುಳ್ಳುಗಳು ಹೇಳುತ್ತಿದ್ದಾರೆ.. ಅವರನ್ನು ನಾವು ಮನೆಗೆ ಕಳುಹಿಸೋಣ ಎಂದು ಮೋದಿ ಕರೆ ನೀಡಿದರು.

ಸಮಾವೇಶದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಆಗಮಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Share Post