ಮಂಡ್ಯನಾ, ಚಿಕ್ಕಬಳ್ಳಾಪುರನಾ..?; ನಡ್ಡಾ ಭೇಟಿ ನಂತರ ಸುಮಲತಾ ಅಚ್ಚರಿ ಮಾತು!
ನವದೆಹಲಿ; ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರಾ..?, ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡುತ್ತಾರಾ..? ಕುತೂಹಲ ಹಾಗೇಯೇ ಇದೆ.. ಇಂದು ಸುಮಲತಾ ಅವರು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.. ಅನಂತರ ಅವರು ನೀಡಿದ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ..
ಇದನ್ನೂ ಓದಿ; ಇನ್ಫಿ ನಾರಾಯಣ ಮೂರ್ತಿಯ 4 ತಿಂಗಳ ಮೊಮ್ಮಗ 240 ಕೋಟಿ ಒಡೆಯ!
ಮಂಡ್ಯ ಕ್ಷೇತ್ರ ನಿರ್ಧಾರವೇ ಆಗಿಲ್ಲ;
ಕುಮಾರಸ್ವಾಮಿಯವರೇ ಮೊನ್ನೆ ಹೇಳಿಕೆ ನೀಡಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದ್ದರು.. ಆದ್ರೆ ಇಂದು ನಡ್ಡಾ ಭೇಟಿ ನಂತರ ಮಾತನಾಡಿದ ಸುಮಲತಾ ಅವರು, ಮಂಡ್ಯದ ಸೀಟು ಹಂಚಿಕೆಯೇ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.
ನಡ್ಡಾ ಅವರ ಜೊತೆ ನಾನು ಸುದೀರ್ಘವಾಗಿ ಮಾತುಕತೆ ನಡೆಸಿದ್ದೇನೆ.. ಮಂಡ್ಯ ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ನೀವು ನಿಶ್ಚಿಂತೆಯಾಗಿರಿ ಎಂದು ಹೇಳಿದ್ದಾರೆ. ಮಂಡ್ಯದಿಂದಲೇ ನನಗೆ ಟಿಕೆಟ್ ಕೊಡಿ ಎಂದು ಇವತ್ತು ಕೂಡಾ ಕೇಳಿದ್ದೇನೆ. ಸಂಜೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ನಡ್ಡಾ ಅವರು ಹೇಳಿದ್ದಾರೆ ಅಂತ ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ; ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷದ ಎಟಿಎಂ; ಪ್ರಧಾನಿ ಮೋದಿ
ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ;
ಮಂಡ್ಯ ಕ್ಷೇತ್ರದ ಸಸೀಟು ಹಂಚಿಕೆ ಬಗ್ಗೆ ಇನ್ನೂ ನಿರ್ಧಾರವೇ ಆಗಿಲ್ಲ ಎನ್ನುತ್ತಿರುವ ಸುಮಲತಾ ಅವರು, ಇದೇ ಬೆನ್ನಲ್ಲೇ ನಾನು ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ. ಅನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಜೊತೆಗೆ ಬಿಜೆಪಿಯಿಂದ ದೂರ ಹೋಗೋದಿಲ್ಲ ಎಂದೂ ಹೇಳಿದ್ದಾರೆ.. ಇದನ್ನು ನೋಡಿದರೆ ಚಿಕ್ಕಬಳ್ಳಾಪುರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿದೆಯಾ ಎಂಬು ಅನುಮಾನ ಮೂಡುತ್ತದೆ.
ಇದನ್ನೂ ಓದಿ; ಈಶ್ವರಪ್ಪ ನಿರ್ಧಾರ ಅಚಲ; ಮೋದಿ ಕಾರ್ಯಕ್ರಮದ ಗಣ್ಯರ ಪಟ್ಟಿಯಿಂದ ಕೊಕ್
ಯಾವುದೇ ನಿರ್ಧಾರ ಮಾಡುವುದಿದ್ದರೆ ಬೆಂಬಲಿಗರ ಜೊತೆ ಚರ್ಚೆ;
ಇನ್ನು ಚಿಕ್ಕಬಳ್ಳಾಪುರ ಸ್ಪರ್ಧೆ ಬಗ್ಗೆ ಮಾತನಾಡಿರುವ ಅವರು, ಅದು ಊಹಾಪೋಹ ಎಂದಿದ್ದಾರೆ. ಖಾಲಿ ಇರುವ ಕ್ಷೇತ್ರಕ್ಕೆ ನನ್ನ ಹೆಸರು ಜೋಡಿಸಲಾಗುತ್ತಿದೆ.. ಆದ್ರೆ ಯಾವುದೇ ನಿರ್ಧಾರ ಕೈಗೊಳ್ಳಬೇಕೆಂದರೂ ನಾಉ ಮೊದಲು ನನ್ನ ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತೇನೆ. ಏನೇ ನಿರ್ಧಾರ ಮಾಡಿದರೂ ಕಾರ್ಯಕರ್ತರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ಕಾರ್ಯಕರ್ತರನ್ನು ಬಿಟ್ಟು ಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಹೈಕಮಾಂಡ್‌ಗೆ ಎಂದಿದ್ದೇನೆ ಎಂದೂ ಸುಮಲತಾ ಹೇಳಿದ್ದಾರೆ. ನಿಮ್ಮ ಬೆಂಬಲಿಗರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವರಿಷ್ಠರು ನನಗೆ ಭರವಸೆ ನೀಡಿದ್ದಾರೆ ಎಂದೂ ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?