Politics

ಈಶ್ವರಪ್ಪ ನಿರ್ಧಾರ ಅಚಲ; ಮೋದಿ ಕಾರ್ಯಕ್ರಮದ ಗಣ್ಯರ ಪಟ್ಟಿಯಿಂದ ಕೊಕ್‌

ಶಿವಮೊಗ್ಗ; ಈಶ್ವರಪ್ಪ ಅವರ ಮನವೊಲಿಸುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ… ಬಿಜೆಪಿ ನಾಯಕ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದ್ದು, ಈಶ್ವರಪ್ಪ ನಿರ್ಧಾರ ಅಚಲವಾಗಿದೆ.. ಇಂದು ಶಿವಮೊಗ್ಗಕ್ಕೆ ಮೋದಿ ಬಂದಿದ್ದಾರೆ.. ಈ ವೇಳೆ ಈಶ್ವರಪ್ಪ ನಿರ್ಧಾರ ಬದಲಿಸುತ್ತಾರೆ ಎಂದು ಹೇಳಲಾಗಿತ್ತು.. ಆದ್ರೆ ಬಿಜೆಪಿ ನಾಯಕರು ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಗಣ್ಯರ ಪಟ್ಟಿಯನ್ನು ಬದಲಾಯಿಸಿದ್ದಾರೆ. ಗಣ್ಯರ ಪಟ್ಟಿಯಲ್ಲಿ ಈಶ್ವರಪ್ಪ ಅವರ ಹೆಸರನ್ನು ಕೈಬಿಡಲಾಗಿದೆ.

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ವೇದಿಕೆ ಹಂಚಿಕೊಳ್ಳುವ 43 ಗಣ್ಯರು;

ಶಿವಮೊಗ್ಗದ ಫ್ರೀಡಂಪಾರ್ಕ್​ನ ಅಲ್ಲಮಪ್ರಭು ಮೈದಾನದಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆ.. ಈ ವೇಳೆ ಮೋದಿ ಜೊತೆ 43 ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ.  ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್​ಸಿಗಳಾದ ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಸೇರಿ 43 ಗಣ್ಯರು ವೇದಿಕೆಯಲ್ಲಿದ್ದಾರೆ.. ಆದ್ರೆ ಈ ಪಟ್ಟಿಯಲ್ಲಿ ಈಶ್ವರಪ್ಪ ಹೆಸರೇ ಇಲ್ಲ..

ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

ನಿರ್ಧಾರ ಬದಲಿಸದ ಈಶ್ವರಪ್ಪರನ್ನು ನಿರ್ಲಕ್ಷಿಸಿದರಾ..?;

ಭಾನುವಾರ ಪೂರ್ತಿ  ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನಗಳು ನಡೆದವರು.. ರಾಜ್ಯ ಬಿಜೆಪಿ ಉಸ್ತುವಾರಿಯೇ ಅವರ ನಿವಾಸಕ್ಕೆ ಆಗಮಿಸಿದ್ದರು.. ಆರ್‌ಎಸ್‌ಎಸ್‌ ಪ್ರಮುಖರು ಕೂಡಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.. ಆದ್ರೆ ನನ್ನ ನಿರ್ಧಾರ ಅಚಲ ಎಂದು ಈಶ್ವರಪ್ಪ ಹೇಳಿದ್ದಾರೆ… ಹೀಗಾಗಿ ಈಶ್ವರಪ್ಪ ಅವರು ಇನ್ನು ಏನು ಮಾಡಿದರೂ ಬಗ್ಗೋದಿಲ್ಲ.. ಅವರನ್ನು ನಿರ್ಲಕ್ಷ್ಯ ಮಾಡೋಣ.. ಅವರು ಬಂಡಾಯವಾಗಿ ಸ್ಪರ್ಧಿಸಿದರೆ ಸ್ಪರ್ಧಿಸಲಿ ಬಿಡಿ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ… ಹೀಗಾಗಿಯೇ  ಪ್ರಧಾನಿ ಜೊತೆ ಜೆಡಿಎಸ್ ಶಾಸಕರಿಗೆ, ಜೆಡಿಎಸ್ ಪರಾಜಿತ ಅಭ್ಯರ್ಥಿಗಳಿಗೆ, ಬಿಜೆಪಿ ಮಾಜಿ ಶಾಸಕರಿಗೆ, ಮಾಜಿ ಎಂಎಲ್ಸಿಗಳಿಗೆ ಕೂಡಾ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಈಶ್ವರಪ್ಪ ಹೆಸರು ಆ ಪಟ್ಟಿಯಲ್ಲಿ ಸೇರಿಸಿಯೇ ಇಲ್ಲ.. ಅಲ್ಲಿಗೆ ಈಶ್ವರಪ್ಪ ಬಂಡಾಯವಾಗಿ ಸ್ಪರ್ಧೆ ಮಾಡೋದು ಖಚಿತವಾದಂತಾಗಿದೆ..

ಇದನ್ನೂ ಓದಿ; ಒಕ್ಕಲಿಗ-ಬಲಿಜ ಕಾಂಬಿನೇಷನ್‌; ಚಿಕ್ಕಬಳ್ಳಾಪುರಕ್ಕೆ ಸುಮಲತಾ ಅಂಬರೀಶ್‌?

ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸಿದರೆ ರಾಘವೇಂದ್ರಗೆ ನಷ್ಟ;

ಈಶ್ವರಪ್ಪ ಅವರು ಸುಮಾರು 40 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ.. ಶಿವಮೊಗ್ಗದಲ್ಲಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಅವರೂ ಒಬ್ಬರು.. ಅವರು ಹಿಂದುಳಿದ ನಾಯಕರು.. ಕುರುಬ ಸಮಾಜದ ಮುಖಂಡರು.. ಈಗ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.. ಇದರಿಂದಾಗಿ ಹಿಂದುಳಿದ ವರ್ಗದ ಅನೇಕ ಮತಗಳನ್ನು ಅವರ ಪಡೆಯುವುದರಲ್ಲಿ ಅನುಮಾನವಿಲ್ಲ.. ಅವರು ಎಷ್ಟು ಮತಗಳನ್ನು ಪಡೆಯುತ್ತಾರೋ ಅವೆಲ್ಲವೂ ಬಿಜೆಪಿಗೆ ಮತಗಳೇ ಆಗಿರುತ್ತವೆ.. ಅಂದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಗಳ ಡಿವೈಡ್‌ ಆಗಲಿವೆ.. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಕಷ್ಟ ತಂದೊಡ್ಡಲಿದೆ.. ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸುವುದರಿಂದ ಗೀತಾ ಶಿವರಾಜ್‌ ಕುಮಾರ್‌ ಗೆಲುವಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!

Share Post