ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?
ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಎಲ್ಲಾ 543 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!
ಚುನಾವಣೆ ಬಂತು ಅಂದಾಕ್ಷಣ ನೆನಪಿಗೆ ಬರೋದು ಮತದಾರರ ಗುರುತಿನ ಚೀಟಿ.. ಹೊಸದಾಗಿ ವೋಟರ್ ಲಿಸ್ಟ್ ಗೆ ಹೆಸರು ಸೇರಿಸುವುದು, ಈಗಾಗಲೇ ಇರುವ ಚೀಟಿಯಲ್ಲಿ ಮಾಹಿತಿ ಬದಲಾವಣೆ ಮಾಡುವುದು, ಹೀಗೆ ಹಲವು ವಿಚಾರಗಳ ಬಗ್ಗೆ ಜನರ ಮನಸ್ಸಿನಲ್ಲಿ ಹೇಗೆ ಮಾಡುವುದು ಎನ್ನುವ ಪ್ರಶ್ನೆ ಏಳುತ್ತದೆ. ಹೊಸ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರುತ್ತೆ..? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ..
ಇದನ್ನೂ ಓದಿ; ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಏರ್‌ಪೋರ್ಟ್‌ನಲ್ಲೇ ಈಶ್ವರಪ್ಪನ ಕೋಪ ಶಮನ?
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹೇಗೆ?
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸೋದಕ್ಕೆ ಎರಡು ದಾರಿಗಳಿರುತ್ತವೆ.. ಚುನಾವಣಾ ಆಯೋಗದ “ರಾಷ್ಟ್ರೀಯ ಮತದಾರರ ಸೇವೆ” ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿಯಲ್ಲಿ ಕೂಡಾ ಅರ್ಜಿ ಸಲ್ಲಿಸಬಹುದು.
ಹೊಸ ಮತದಾರರು ವೋಟರ್ ಲಿಸ್ಟ್ ನಲ್ಲಿ ಸೇರಬೇಕು ಎನ್ನುವುದಾದರೆ, ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಗೆ (https://voterportal.eci.gov.in/) ಭೇಟಿ ನೀಡಿ.. ಅಲ್ಲಿ ಫಾರ್ಮ್ 6 ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ್ದನ್ನು ಅಪ್‌ಲೋಡ್ ಮಾಡಿ. ಒದಗಿಸಿದ ವಿವರಗಳಿಗೆ ಸೂಕ್ತವಾದ ಪ್ರಮಾಣಪತ್ರಗಳನ್ನು ಸಹ ಲಗತ್ತಿಸಬೇಕು. ನೀವು ಸರ್ಕಾರಿ ಇ-ಸೇವಾ ಕೇಂದ್ರಗಳ ಮೂಲಕ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ; ಒಕ್ಕಲಿಗ-ಬಲಿಜ ಕಾಂಬಿನೇಷನ್; ಚಿಕ್ಕಬಳ್ಳಾಪುರಕ್ಕೆ ಸುಮಲತಾ ಅಂಬರೀಶ್?
ಗುರುತಿನ ಚೀಟಿಯಲ್ಲಿನ ಮಾಹಿತಿ ಬದಲಾವಣೆ ಹೇಗೆ..?
ನೀವು ಫಾರ್ಮ್ ಪುಟವನ್ನು ಚುನಾವಣಾ ಆಯೋಗದ ಮತದಾರರ ಸೇವೆಗಳ ವೆಬ್‌ಸೈಟ್‌ನಲ್ಲಿ (https://voterportal.eci.gov.in/) ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಮಾಡಬಹುದು. ಮೊದಲು ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಬಳಸಿಕೊಂಡು ಖಾತೆಯನ್ನು ರಚಿಸಿ. ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಅಳಿಸಲು ಅಥವಾ ವಿವರಗಳನ್ನು ತಿದ್ದುಪಡಿ ಮಾಡಲು ಮತದಾರರ ಗುರುತಿನ ಸಂಖ್ಯೆ ಅಗತ್ಯವಿದೆ.
ಮತದಾರರಾಗಿ ನೋಂದಾಯಿಸಲು ಬಯಸುವ ಅಭ್ಯರ್ಥಿಗಳು ನಮೂನೆ-6 ಅನ್ನು ಭರ್ತಿ ಮಾಡಬೇಕು. ನೀವು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹೋಗುತ್ತಿದ್ದರೆ ನಮಗೂ ನಮೂನೆ-6 ಅನ್ವಯಿಸುತ್ತದೆ. ಅನಿವಾಸಿ ಭಾರತೀಯರು ಫಾರ್ಮ್-6ಎ ಅನ್ನು ಭರ್ತಿ ಮಾಡಬೇಕು. ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಲು ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ನಮೂನೆ 7 ಅಗತ್ಯವಿದೆ.
ನಿಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಳಾಸ ಬದಲಾವಣೆಗಾಗಿ ನಮೂನೆ 8A ಅನ್ನು ಭರ್ತಿ ಮಾಡಬೇಕು. ಸರ್ಕಾರಿ ಇ-ಸೇವಾ ಕೇಂದ್ರಗಳಲ್ಲಿಯೂ ಇದನ್ನು ಮಾಡಬಹುದು.
ಇದನ್ನೂ ಓದಿ; ರಾಬರ್ಟ್ ಸಿಂಗರ್ ಮಂಗ್ಲಿ ಕಾರು ಭೀಕರ ಅಪಘಾತ; ಮಧ್ಯರಾತ್ರಿ ನಡೆದಿದ್ದೇನು..?
ಮತದಾರರ ಗುರುತಿನ ಚೀಟಿಯ ಸ್ಥಿತಿಗತಿ ತಿಳಿಯುವುದು ಹೇಗೆ?
ಚುನಾವಣಾ ಆಯೋಗದ ವೆಬ್‌ಸೈಟ್ (https://voterportal.eci.gov.in/) ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿ ಅರ್ಜಿ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ನಿಮಗೆ ಉಲ್ಲೇಖ ಸಂಖ್ಯೆಯನ್ನು ನೀಡಲಾಗುತ್ತದೆ.
ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನೀವು ಈ ಸಂಖ್ಯೆಯನ್ನು ಬಳಸಬಹುದು. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ಹೊಸ ಮತದಾರರ ಗುರುತಿನ ಚೀಟಿಯನ್ನು ನಿಮ್ಮ ವಿಳಾಸಕ್ಕೆ ಕಳುಹಿಸುತ್ತಾರೆ. ವೋಟರ್ ಐಡಿಗೆ ಸಂಬಂಧಿಸಿದ ಇತರ ವಿವರಗಳನ್ನು ಸಹ ಅದೇ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು.
ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!