Politics

ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

ಬೆಂಗಳೂರು; ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಡಿ.ವಿ.ಸದಾನಂದಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತ ಎರಡು ಬಾರಿ ಸಂಸದರಾಗಿದ್ದರು.. ಜೊತೆಗೆ ಕೇಂದ್ರ ಸಚಿವರೂ ಆಗಿದ್ದರು.. ಇದೀಗ ಅವರ ಸ್ಥಾನ ಶೋಭಾ ಕರಂದ್ಲಾಜೆ ಬಂದಿದ್ದಾರೆ.. ಸದಾನಂದಗೌಡರಿಗೆ ಟಿಕೆಟ್‌ ನಿರಾಕರಿಸಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡಲಾಗಿದೆ… ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಮಾಜಿ ಸಿಎಂ ಸದಾನಂದಗೌಡರಿಗೆ ಗಾಳ ಹಾಕಿದೆ.. ಅವರು ಕಾಂಗ್ರೆಸ್‌ಗೆ ಬರೋದಾದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಟಿಕೆಟ್‌ ನೀಡೋದಾಗಿ ಕಾಂಗ್ರೆಸ್‌ ಆಫರ್‌ ಕೊಡ್ತಿದೆಯಂತೆ..!

ಇದನ್ನೂ ಓದಿ; ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಏರ್‌ಪೋರ್ಟ್‌ನಲ್ಲೇ ಈಶ್ವರಪ್ಪನ ಕೋಪ ಶಮನ?

ನಾಳೆ `ಉತ್ತರʼ ಕೊಡ್ತೀನಿ ಎಂದು ಸದಾನಂದಗೌಡ;

ಸದಾನಂದಗೌಡರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ… ಹಲವು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರುತ್ತಿದ್ದಾರೆ.. ಇದರ ನಡುವೆ ಅವರಿಗೆ ಹುಟ್ಟುಹಬ್ಬದ ಗಿಫ್ಟ್‌ ಆಗಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಕೊಡೋದಾಗಿ ಕಾಂಗ್ರೆಸ್‌ ಆಫರ್‌ ಮಾಡಿದೆ.. ಇದನ್ನು ಸ್ವತಃ ಸದಾನಂದಗೌಡರೇ ಹೇಳಿಕೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಸದಾನಂದಗೌಡರು, ಕಾಂಗ್ರೆಸ್‌ ನಾಯಕರು ನನ್ನನ್ನು ಸಂಪರ್ಕ ಮಾಡಿರುವುದು ನಿಜ.. ನಾನು ನನ್ನ ಕುಟುಂಬದ ಜೊತೆ ಚರ್ಚೆ ಮಾಡಬೇಕಿದೆ.. ಇಂದು ಹುಟ್ಟುಹಬ್ಬವಾಗಿರುವುದರಿಂದ ಇಂದು ನಿರ್ಧಾರ ಮಾಡುತ್ತೇನೆ.. ನಾಳೆ ಸುದ್ದಿಗೋಷ್ಠಿ ನಡೆಸಿ ನನ್ನ ನಿಲುವು ತಿಳಿಸುತ್ತೇನೆ ಎಂದು ಸದಾನಂದಗೌಡರು ಹೇಳಿದ್ದಾರೆ.

ಇದನ್ನೂ ಓದಿ; ಒಕ್ಕಲಿಗ-ಬಲಿಜ ಕಾಂಬಿನೇಷನ್‌; ಚಿಕ್ಕಬಳ್ಳಾಪುರಕ್ಕೆ ಸುಮಲತಾ ಅಂಬರೀಶ್‌?

ಹೈಕಮಾಂಡ್‌ ಬಳಿ ಹೋಗೋಣ ಎಂದಿದ್ದೆ;

ಇನ್ನು ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆಯೂ ಸದಾನಂದಗೌಡರು ಮಾತನಾಡಿದ್ದಾರೆ.. ಈಶ್ವರಪ್ಪಗೆ ಟಿಕೆಟ್‌ ಕೈತಪ್ಪಿದಾಗ ಟಿಕೆಟ್‌ ಸಿಗದ ನಾವೆಲ್ಲಾ ಹೈಕಮಾಂಡ್‌ ಬಳಿ ಹೋಗೋಣ, ದೂರು ಕೊಡೋಣ ಎಂದು ಹೇಳಿದ್ದೆ.. ಆದ್ರೆ ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸುವ ತೀರ್ಮಾನ ಮಾಡಿಬಿಟ್ಟಿದ್ದಾರೆ.. ಅವರ ನಿಲುವು ಅವರು ಪ್ರಕಟಿಸಿದ್ದಾರೆ.. ಅದರ ಬಗ್ಗೆ ನಾನೇನೂ ಹೇಳುವುದಕ್ಕೆ ಆಗುವುದಿಲ್ಲ.. ನಾನು ನಾಳೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದೂ ಸದಾನಂದಗೌಡರು ಹೇಳಿದ್ದಾರೆ.

ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!

ಸದಾನಂದಗೌಡರಿಗೆ ಶುಭ ಕೋರಲು ಬಂದ ಶೋಭಾ;

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆಯಾದ ಮೇಲೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಫುಲ್‌ ಆಕ್ಟೀವ್‌ ಆಗಿದ್ದಾರೆ.. ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.. ಇತ್ತ ಯಾವಾಗ ಕಾಂಗ್ರೆಸ್‌ ನಾಯಕರು ಸದಾನಂದಗೌಡರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಗೊತ್ತಾಯಿತೋ ಶೋಭಾ ಕರಂದ್ಲಾಜೆಯವರು ಸದಾನಂದಗೌಡರ ಮನೆಗೆ ಬಂದಿದ್ದಾರೆ.. ಸದಾನಂದಗೌಡರಿಗೆ ಬೊಕ್ಕೆ ಕೊಟ್ಟು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.. ಆ ಮೂಲಕ ಸದಾನಂದರ ಕೋಪ ಶಮನಕ್ಕೆ ಪ್ರಯತ್ನ ಮಾಡಿದ್ದಾರೆ.. ಶೋಭಾ ಸುಲಭವಾಗಿ ಗೆಲ್ಲಬೇಕಾದರೆ ಸದಾನಂದಗೌಡರ ಬೆಂಬಲ ಕೂಡಾ ಬೇಕಾಗುತ್ತದೆ.. ಯಾಕಂದ್ರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಯಾರ್ಯಾರು ಮುಖಂಡರಿದ್ದಾರೆ, ಕ್ಷೇತ್ರ ವ್ಯಾಪ್ತಿ ಎಷ್ಟು ಅನ್ನೋದು ಶೋಭಾ ಕರಂದ್ಲಾಜೆಗೆ ಗೊತ್ತಿಲ್ಲ.. ಹೀಗಾಗಿ ಸದಾನಂದಗೌಡರು ಜೊತೆಗೆ ನಿಂತುಕೊಂಡರೆ ಶೋಭಾಗೆ ಎಲ್ಲವೂ ಸುಲಭವಾಗುತ್ತದೆ.. ಹೀಗಾಗಿ ಶೋಭಾ ಅವರು ಸದಾನಂದ ಗೌಡರನ್ನು ಭೇಟಿಯಾಗಿ ಹುಟ್ಟುಹಬ್ಬಕ್ಕೆ ಶುಭಕೋರಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ; ಪಟ್ಟು ಸಡಿಲಿಸುತ್ತಿಲ್ಲ ಈಶ್ವರಪ್ಪ; ಸಂಧಾನಕ್ಕೆ ಹೋದವರಿಗೆ ನಿರಾಸೆ

ನಾಳಿನ ಸುದ್ದಿಗೋಷ್ಠಿ ಬಗ್ಗೆ ಎಲ್ಲರ ಕುತೂಹಲ;

ಕಾಂಗ್ರೆಸ್‌ಗೆ ಹೋಗೋದಿಲ್ಲ ಅನ್ನುವುದಾಗಿದ್ದರೆ  ಸದಾನಂದಗೌಡರು ಇವತ್ತೇ ಹೇಳಿಬಿಡುತ್ತಿದ್ದರು.. ಎಲ್ಲಿಗೂ ಹೋಗೋದಿಲ್ಲ ಅನ್ನೋದನ್ನು ಸುದ್ದಿಗೋಷ್ಠಿ ನಡೆಸಿ ಹೇಳಬೇಕಾದ ಅವಶ್ಯಕತೆ ಇಲ್ಲ.. ಆದ್ರೆ ಸದಾನಂದಗೌಡರು ನಾಳೆ ಸುದ್ದಿಗೋಷ್ಠಿ ನಡೆಸಿ ಅಲ್ಲಿ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.. ಹೀಗಾಗಿ ಅವರು ಕಾಂಗ್ರೆಸ್‌ ಸೇರಬಹುದು ಎಂದು ಹೇಳಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ನಾಳಿನ ಸುದ್ದಿಗೋಷ್ಠಿ ಬಗ್ಗೆ ಎಲ್ಲರ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ; ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?

 

Share Post