Politics

ಟಿಕೆಟ್‌ ಬೇಟೆಯಲ್ಲಿ ʻಸಿಂಹʼ ಫೇಲ್‌; ಹೊರಬಿತ್ತು ಅಸಹನೆಯ ʻಪ್ರತಾಪʼ

ಬೆಂಗಳೂರು; ಯಾರು ಏನೇ ಹೇಳಿದರೂ ಬಿಜೆಪಿ ಹೈಕಮಾಂಡ್‌ ಫಿಕ್ಸ್‌ ಆಗಿಬಿಟ್ಟಿದೆ.. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್‌ ಅವರು ಬಿಜೆಪಿ ಅಭ್ಯರ್ಥಿಯಾಗೋದು ಬಹುತೇಕ ಫಿಕ್ಸ್‌ ಆಗಿದೆ.. ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಇದೆ… ಬಿಜೆಪಿ ಹೈಕಮಾಂಡ್‌ನ ಈ ನಿರ್ಧಾರ ಹಾಲಿ ಸಂಸದ ಪ್ರತಾಪ ಸಿಂಹಗೆ ಬೇಸರ ತರಿಸಿದೆ… ಎರಡು ಬಾರಿ ಸಂಸದನಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದರೂ, ಈ ಬಾರಿ ಟಿಕೆಟ್‌ ಮೈಸೂರು ರಾಜ ವಂಶಸ್ಥ ಯದುವೀರ್‌ಗೆ ಕೊಡುತ್ತಿರುವುದಕ್ಕೆ ಸಂಸದ ಪ್ರತಾಪ ಸಿಂಹ ಅಸಮಾಧಾನ ಹಾಗೂ ಅಸಹನೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ;ಮೈಸೂರಿಗೆ ಯದುವೀರ್ ಯಾಕೆ..?; ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು‌ ಗೊತ್ತಾ..?

ಮಹಾರಾಜರು ಕೆಳಗೆ ಕೂರೋದಕ್ಕೆ ರೆಡಿಯಾಗಿದ್ದಾರೆ;

ಮಹಾರಾಜರು ಕೆಳಗೆ ಕೂರೋದಕ್ಕೆ ರೆಡಿಯಾಗಿದ್ದಾರೆ; ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ಕೈತಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಅನಿಸುತ್ತೆ.. ಹೀಗಾಗೇ ಅವರು, ಇಂದು ರಾಜ ವಂಶಸ್ಥ ಯದುವೀರ್‌ ಅವರನ್ನು ಮಾತುಗಳಿಂದ ತಿವಿಯೋ ಪ್ರಯತ್ನ ಮಾಡಿದ್ದಾರೆ.. ಈ ಮೂಲಕ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದ ಪ್ರತಾಪ ಸಿಂಹ, ಸಾಮಾನ್ಯವಾಗಿ ಪಕ್ಷದಲ್ಲಿ ಒಂದು ಪ್ರೋಟೋಕಾಲ್‌ ಇರುತ್ತದೆ.. ಪಕ್ಷದ ಕಾರ್ಯಕಾರಿಣಿ ಸಭೆ ನಡೆದಾಗ ರಾಜ್ಯಾಧ್ಯಕ್ಷರು, ಪ್ರಮುಖ ನಾಯಕರು ಮೇಲೆ ಕೂತಿರುತ್ತಾರೆ.. ನಮ್ಮಂಥವರು ಕೆಳಗಡೆ ಕೂರಬೇಕಾಗುತ್ತದೆ.. ಹೀಗಾಗಿ ರಾಜ ವಂಶಸ್ಥರು ಕೆಳಗಡೆ ಕೂರೋದಕ್ಕೆ ರೆಡಿಯಾಗಿರಬೇಕು ಎಂದು ಮಾತಿನಲ್ಲೇ ಯದುವೀರ್‌ ಅವರಿಗೆ ತಿವಿದಿದ್ದಾರೆ. ಸಚಿವರು, ರಾಜ್ಯಾಧ್ಯರು ಬಂದಾಗ ನಾವು ಅವರನ್ನು ಬರ ಮಾಡಿಕೊಳ್ಳೋದಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಬೇಕು.. ಅವರ ಕಾಲಿಗೆ ಬಿದ್ದು ನಮಸ್ಕರಿಸಬೇಕು.. ಅದನ್ನೆಲ್ಲಾ ಮಹಾರಾಜರು ಮಾಡುತ್ತಾರೆ ಎಂದೂ ಪ್ರತಾಪ ಸಿಂಹ ಅಸಹನೆಯಿಂದ ಹೇಳಿದ್ದಾರೆ.

ಇದನ್ನೂ ಓದಿ; Loksabha; ಬೆಂ.ಗ್ರಾಮಾಂತರ, ಮೈಸೂರಲ್ಲಿ BJP ಸ್ಪೆಷಲ್‌ ಕ್ಯಾಂಡಿಡೇಟ್ಸ್‌; ಸಿಎಂ, ಡಿಸಿಎಂಗೆ ಚಿಂತೆ!

ರಸ್ತೆಯಲ್ಲಿ ಕಸ ಬಿದ್ದಿದ್ದರೂ ಜನ ಫೋನ್‌ ಮಾಡುತ್ತಾರೆ;

ರಸ್ತೆಯಲ್ಲಿ ಕಸ ಬಿದ್ದಿದ್ದರೂ ಜನ ಫೋನ್‌ ಮಾಡುತ್ತಾರೆ; ರಸ್ತೆಯಲ್ಲಿ ಕಸ ಬಿದ್ದಿದ್ದರೂ ಜನ ಕಾಲ್‌ ಮಾಡುತ್ತಾರೆ… ಕೇಸ್‌ ಕಡಿದು ಪೊಲೀಸರು ಒಳಗೆ ಹಾಕಿದ್ದರೂ ಫೋನ್‌ ಮಾಡಿ ಬಿಡಿಸುವಂತೆ ಕರೆ ಮಾಡುತ್ತಾರೆ.. ಅದಕ್ಕೆಲ್ಲಾ ನಾವು ಹೋಗಬೇಕು.. ಆ ಕೆಲಸವನ್ನು ಇನ್ಮುಂದೆ ಮಹಾರಾಜರೂ ಮಾಡುತ್ತಾರೆ.. ಮಹಾರಾಜರೂ ಇನ್ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರಾಗುತ್ತಾರೆ ಎಂದು ಹೇಳುವ ಮೂಲಕ ಸಂಸದ ಪ್ರತಾಪ ಸಿಂಹ ಸಣ್ಣ ಸಿಟ್ಟನ್ನೂ ತೋರಿಸಿದ್ದಾರೆ.

ಯದುವೀರ್‌ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ರಾಜಮಾತೆ;

ಯದುವೀರ್‌ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ರಾಜಮಾತೆ; ರಾಜಮಾತೆ ಪ್ರಮೋದಾದೇವಿಯವರು ಕಾಶಿಗೆ ಹೋಗಿದ್ದರು.. ಇದೀಗ ಅವರು ವಾಪಸ್‌ ಬಂದಿದ್ದಾರೆ… ಮಗ ಯದುವೀರ್‌ ಜೊತೆ ಮಾತನಾಡಿರುವ ಪ್ರಮೋದಾದೇವಿಯವರು, ಚುನಾವಣೆಯಲ್ಲಿ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.. ಇದೇ ವೇಳೆ ಒಂದಷ್ಟು ಸೂಚನೆಗಳನ್ನೂ ಯದುವೀರ್‌ಗೆ ನೀಡಿದ್ದಾರೆ.. ಇದನ್ನೆಲ್ಲಾ ನೋಡ್ತಾ ಇದ್ರೆ ಯದುವೀರ್‌ ಸ್ಪರ‍್ಧೆ ಫಿಕ್ಸ್‌ ಆದಂತಿದೆ..

ಇದನ್ನೂ ಓದಿ; ನಟಿ ವಿರುದ್ಧ ಡ್ರಗ್ಸ್‌ ಸೇವನೆ, ಅಕ್ರಮ ಸಂಬಂಧ ಆರೋಪ; ಪತಿಯಿಂದ ದೂರು ದಾಖಲು!

ನಾಲ್ಕು ಬಾರಿ ಸಂಸದರಾಗಿದ್ದ ಶ್ರೀಕಂಠದತ್ತ ಒಡೆಯರ್‌;

ನಾಲ್ಕು ಬಾರಿ ಸಂಸದರಾಗಿದ್ದ ಶ್ರೀಕಂಠದತ್ತ ಒಡೆಯರ್‌; ರಾಜವಂಶಸ್ಥ ದಿವಂಗತ ಶ್ರೀಕಂಠದತ್ತ ಒಡೆಯರ್‌ ಅವರು ಕೂಡಾ ಚುನಾವಣಾ ರಾಜಕೀಯಕ್ಕೆ ಬಂದಿದ್ದರು… ಅವರು, ಒಟ್ಟು ಆರು ಬಾರಿ ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದು, ನಾಲ್ಕು ಬಾರಿ ಗೆದ್ದಿದ್ದರು.. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು 1984, 1989, 1996 ಹಾಗೂ 1999ರಲ್ಲಿ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ; CAA ಜಾರಿ ವಿಚಾರ; ಇದು ಸ್ವೀಕಾರಾರ್ಹವಲ್ಲ ಎಂದು ನಟ ವಿಜಯ್‌!

Share Post