Crime

ಬಳ್ಳಾರಿ ಜೈಲಿನಲ್ಲಿದ್ದು ಸ್ಫೋಟಕ್ಕೆ ಸ್ಕೆಚ್‌?; ಓರ್ವ ಶಂಕಿತನ ವಿಚಾರಣೆ!

ಬೆಂಗಳೂರು; ಮಾರ್ಚ್‌ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ತನಿಖೆ ತೀವ್ರಗೊಂಡಿದೆ. ಪ್ರಕರಣ ಎನ್ಐಎಗೆ ವರ್ಗಾವಣೆಯಾದ ಮೇಲೆ, ತನಿಖೆಗೆ ವೇಗ ಪಡೆದುಕೊಂಡಿದೆ. ಗುರುವಾರವಷ್ಟೇ ಶಂಕಿತನ ಟೋಪಿ ವಶಕ್ಕೆ ಪಡೆದು, ರೇಖಾಚಿತ್ರ ಬಿಡುಗಡೆ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಈಗ ಪ್ರಮುಖ ಸಂಚುಕೋರನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ; Health Benefits; ದಿನಾ ಹೀಗೆ ಮಾಡಿ, ಯಾವ ರೋಗವೂ ನಿಮ್ಮ ಹತ್ತಿರ ಬರೋಲ್ಲ..!

ಬಳ್ಳಾರಿ ಜೈಲಿನಲ್ಲಿದ್ದವನಿಗೂ ಸ್ಫೋಟಕ್ಕೂ ಸಂಬಂಧವಿದೆಯಾ..?;

ಬಳ್ಳಾರಿ ಜೈಲಿನಲ್ಲಿದ್ದವನಿಗೂ ಸ್ಫೋಟಕ್ಕೂ ಸಂಬಂಧವಿದೆಯಾ..?; ಮೂರು ತಿಂಗಳ ಹಿಂದೆ ಬಂಧನವಾಗಿದ್ದ ಶಂಕಿತ ಉಗ್ರ ಮಿನಾಜ್‌ ಅಲಿಯಾಸ್‌ ಸುಲೇಮಾನ್‌ ಎಂಬಾತ ಬಳ್ಳಾರಿ ಜೈಲಿನಲ್ಲಿದ್ದ. ಈತನ ಸೂಚನೆ ಮೇರೆಗೇ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದಿದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಎರಡು ದಿನಗಳ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದ ಶಂಕಿತ ಉಗ್ರ ಮಿನಾಜ್‌ ಅಲಿಯಾಸ್‌ ಸುಲೇಮಾನ್‌ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ;ರಾಜ್ಯದ 14 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಫೈನಲ್‌; ಇಂದೇ ಮೊದಲ ಪಟ್ಟಿ ರಿಲೀಸ್‌!

ಶಂಕಿತ ಉಗ್ರ ಬಳ್ಳಾರಿಗೆ ಹೋಗಿರುವ ಮಾಹಿತಿ;

ಶಂಕಿತ ಉಗ್ರ ಬಳ್ಳಾರಿಗೆ ಹೋಗಿರುವ ಮಾಹಿತಿ; ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಮೇಲೆ ಶಂಕಿತ ಉಗ್ರ ಬಸ್‌ನಲ್ಲಿ ತುಮಕೂರಿಗೆ ಬಂದಿದ್ದ. ನಂತರ ಅಲ್ಲಿಂದ ಬಳ್ಳಾರಿಗೆ ಹೋಗಿದ್ದ. ಈ ಹಿನ್ನೆಲೆಯಲ್ಲಿ ಆತ ಬಳ್ಳಾರಿ ಜೈಲಿನಲ್ಲಿದ್ದ ಸುಲೇಮಾನ್‌ ಸೂಚನೆ ಮೇರೆಗೇ ಈ ಸ್ಫೋಟ ನಡೆಸಿರಬಹುದೆಂದು ಶಂಕಿಸಲಾಗಿದೆ. ಮೀನಾಜ್‌ ಅಲಿಯಾಸ್‌ ಸುಲೇಮಾನ್‌ ಐಸಿಸ್‌ ನಂಟಿದೆ ಎಂದು ತಿಳಿದುಬಂದಿದ್ದು, ಈ ಕಾರಣಕ್ಕಾಗಿಯೇ 2023ರ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ; ಕೊಡಗು-ಮೈಸೂರು ಕ್ಷೇತ್ರಕ್ಕೆ ಯಧುವೀರ್‌ ಬಿಜೆಪಿ ಅಭ್ಯರ್ಥಿಯಾಗ್ತಾರಾ..?

ಮಿನಾಜ್‌ ಅಲಿಯಾಸ್‌ ಸುಲೇಮಾನ್‌ಗೆ ಐಸಿಸ್‌ ನಂಟು;

ಮಿನಾಜ್‌ ಅಲಿಯಾಸ್‌ ಸುಲೇಮಾನ್‌ಗೆ ಐಸಿಸ್‌ ನಂಟು; ಮಿನಾಜ್‌ ಅಲಿಯಾಸ್‌ ಸುಲೇಮಾನ್‌ಗೆ ಐಸಿಸ್‌ ಜೊತೆ ನಂಟಿತ್ತು.. ಈತ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ. ಬಳ್ಳಾರಿಯ ಕೌಲ್‌ ಬಜಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ವಾಸವಿದ್ದ ಈತ, ಹಲವು ಕಡೆ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ.. ಈ ಮಾಹಿತಿ ಅರಿತ ಎನ್‌ಐಎ ಅಧಿಕಾರಿಗಳು 2023ರ ಡಿಸೆಂಬರ್‌ 18ರಂದು ಬಂಧಿಸಿ, ಜೈಲಿಗಟ್ಟಿದ್ದರು. ಇದೀಗ ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದ ಮೇಲೆ ಆರೋಪಿ ಬಳ್ಳಾರಿ ಕಡೆ ಹೋಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 6ರಂದು ಎನ್‌ಐಎ ಅಧಿಕಾರಿಗಳು ನ್ಯಾಯಾಲಯದಿಂದ ಬಾಡಿ ವಾರಂಟ್‌ ಪಡೆದು, ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ;Rameshwaram Cafe Case; ಆರೋಪಿ ಧರಿಸಿದ್ದ ಟೋಪಿ ಪತ್ತೆ; ಶಂಕಿತನ ಬಗ್ಗೆ ಮಹತ್ವದ ಸುಳಿವು!

ಡಿಸೆಂಬರ್‌ನಲ್ಲಿ ಹಲವೆಡೆ ದಾಳಿ ನಡೆಸಿದ್ದ ಎನ್‌ಐಎ;

ಡಿಸೆಂಬರ್‌ನಲ್ಲಿ ಹಲವೆಡೆ ದಾಳಿ ನಡೆಸಿದ್ದ ಎನ್‌ಐಎ; ಎನ್‌ಐಎ ಅಧಿಕಾರಿಗಳು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ನಿರಂತರವಾಗಿ ಶೋಧಕಾರ್ಯ ನಡೆಸುತ್ತಲೇ ಬಂದಿದೆ. ಅದೇ ರೀತಿಯ 2023ರ ಡಿಸೆಂಬರ್ 18ರಂದು ಕರ್ನಾಟಕದ ಹಲವೆಡೆ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಬಳ್ಳಾರಿಯಲ್ಲಿ ಮಿನಾಜ್‌ ನನ್ನು ಬಂಧಿಸಲಾಗಿತ್ತು. ಈತ ಕೌಲ್‌ ಬಜಾರ್‌ನಲ್ಲಿ ಬಟ್ಟೆ  ವ್ಯಾಪಾರ ಮಾಡುತ್ತಿದ್ದ. ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತನಾಗಿದ್ದ ಈತ, ಐಸಿಸ್‌ ಉಗ್ರರ ಜೊತೆ ನಂಟು ಹೊಂದಿದ್ದ ಎಂದು ತಿಳಿದುಬಂದಿದೆ. ಈತ ಬಡ ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಭಯೋತ್ಪಾದನೆಗೆ ಪ್ರೇರೇಪಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಸಿಕ್ಕ ಹಿನ್ನೆಲೆಯಲ್ಲಿ ಮೀನಾಜ್‌ನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ;Health tips; ಸ್ವೀಟ್ಸ್‌ ಅಂದ್ರೆ ನಿಮಗೆ ಇಷ್ಟಾನಾ..?; ಹೀಗೆ ತಿನ್ನಿ ಏನೂ ಆಗಲ್ಲ!

ಮಿನಾಜ್‌ನಿಂದ ಸಿಗಲಿದೆಯಾ ಮಹತ್ವದ ಸುಳಿವು..?;

ಮಿನಾಜ್‌ನಿಂದ ಸಿಗಲಿದೆಯಾ ಮಹತ್ವದ ಸುಳಿವು..?; ಮಿನಾಜ್‌ ನನ್ನು ಮೂರು ತಿಂಗಳ ಹಿಂದಷ್ಟೇ ಬಂಧಿಸಲಾಗಿದೆ.. ಹೀಗಾಗಿ, ಈತನ ಸಹಚರನೇ ಈ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ… ಹೀಗಾಗಿ ಮೀನಾಜ್‌ನಿಂದ ರಾಮೇಶ್ವರಂ ಸ್ಫೋಟ ಪ್ರಕರಣದ ಆರೋಪಿಯ ಸುಳಿವು ಸಿಗಬಹುದು ಎಂದು ಹೇಳಲಾಗುತ್ತಿದೆ.. ಒಟ್ಟಿನಲ್ಲಿ ಎನ್‌ಐಎ ತನಿಖೆ ಶುರು ಮಾಡಿದ ಮೇಲೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡಿದೆ. ಶೀಘ್ರದಲ್ಲೇ ಆರೋಪಿಯ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಸ್ಫೋಟವಾದ ಒಂದು ವಾರಕ್ಕೆ ಸರಿಯಾಗಿ ರಾಮೇಶ್ವರಂ ಕೆಫೆ ಮತ್ತೆ ಪುನಾರಂಭವಾಗಿದೆ. ಇಂದಿನಿಂದ ರಾಮೇಶ್ವರಂ ಕೆಫೆ ಶುರುವಾಗಿದ್ದು, ಗ್ರಾಹಕರು ಅಲ್ಲಿ ಆಹಾರ ಸೇವಿಸಬಹುದಾಗಿದೆ.

ಇದನ್ನೂ ಓದಿ; Health Benefits; ದಿನಾ ಹೀಗೆ ಮಾಡಿ, ಯಾವ ರೋಗವೂ ನಿಮ್ಮ ಹತ್ತಿರ ಬರೋಲ್ಲ..!

 

Share Post