Politics

Rajyasabha; 25 ಕೋಟಿ ರೂಪಾಯಿ ಪಡೆದು ಮತ ಹಾಕಿದರಾ ಶಾಸಕ ಎಸ್‌.ಟಿ.ಸೋಮಶೇಖರ್‌..?

ಬೆಂಗಳೂರು; ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ. ಅವರು ಕಾಂಗ್ರೆಸ್‌ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಬಿಜೆಪಿಯಿಂದ ವಿಪ್‌ ಜಾರಿಯಾಗಿದ್ದರಿಂದಾಗಿ ಅವರು ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿಗೆ ಮತ ಚಲಾವಣೆ ಮಾಡಬೇಕಿತ್ತು. ಆದ್ರೆ ಸೋಮಶೇಖರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸೋಮಶೇಖರ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಸೋಮಶೇಖರ್‌ ಅವರು ಕಾಂಗ್ರೆಸ್‌ನಿಂದ 25 ಕೋಟಿ ರೂಪಾಯಿ ಪಡೆದು ಮತ ಹಾಕಿದ್ದಾರೆ ಎಂಬ ಗಂಭೀರ ಆರೋಪ ಮಾಡದಲಾಗಿದೆ.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

25 ಕೋಟಿ ರೂಪಾಯಿ ಪಡೆದರಾ ಎಸ್​ಟಿ ಸೋಮಶೇಖರ್?;

25 ಕೋಟಿ ರೂಪಾಯಿ ಪಡೆದರಾ ಎಸ್​ಟಿ ಸೋಮಶೇಖರ್?; ಎಸ್‌.ಟಿ.ಸೋಮಶೇಖರ್‌ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ರಮೇಶ್‌ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ರಮೇಶ್‌ ಗೌಡ ಆಗ್ರಹ ಮಾಡಿದ್ದಾರೆ. ಬಿಜೆಪಿ ಯುವಮೋರ್ಚಾ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಸೋಮಶೇಖರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಾಳೆಯಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ; ರಶ್ಮಿಕಾಗೆ ಗಂಡ ಎಂದರೆ ವಿಜಯ್‌ ದೇವರಕೊಂಡ ರೀತಿ ಇರಬೇಕಂತೆ!

ರಾಜ್ಯಸಭಾ ಚುನಾವಣೆಯ ಫಲಿತಾಂಶ ಏನಾಯ್ತು.?;

ರಾಜ್ಯಸಭಾ ಚುನಾವಣೆಯ ಫಲಿತಾಂಶ ಏನಾಯ್ತು.?;  ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ ಕಣಕ್ಕಿಳಿಸಿದ್ದ ಮೂವರು ಅಭ್ಯರ್ಥಿಗಳಿಗೂ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿಯಿಂದ ಕಣದಲ್ಲಿದ್ದ ನಾರಾಯಣ ಸಾ ಭಾಂಡಗೆ ಕೂಡಾ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ. ಆದ್ರೆ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕುಪೇಂದ್ರ ರೆಡ್ಡಿ ಹೀನಾಯವಾಗಿ ಸೋಲನುಭವಿಸಿದ್ದಾರೆ. ಮೂರೂ ಪಕ್ಷಗಳು ಮಾಡಿದ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಬಿಜೆಪಿಗೆ ಇಬ್ಬರು ಶಾಸಕರು ಕೈಕೊಟ್ಟಿದ್ದು, ಒಬ್ಬ ಶಾಸಕ ಅಡ್ಡ ಮತದಾನ ಮಾಡಿದರೆ, ಮತ್ತೊಬ್ಬ ಶಾಸಕ ಮತದಾನಕ್ಕೆ ಗೈರಾಗಿದ್ದಾರೆ.

ಗೆಲುವಿಗೆ ಪ್ರತಿಯೊಬ್ಬರಿಗೂ 45 ಮತಗಳ ಅವಶ್ಯಕತೆ ಇತ್ತು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಜಯ್‌ ಮಾಕೇನ್‌ 47 ಮತ, ನಾಸೀರ್‌ ಹುಸೇನ್‌ 46 ಮತ ಹಾಗೂ ಜಿ.ಸಿ.ಚಂದ್ರಶೇಖರ್‌ 46 ಮತ ಪಡೆದು ಜಯಶಾಲಿಗಳಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣ ಸಾ ಭಾಂಡಗೆ 48 ಮತ ಪಡೆದು ರಾಜ್ಯಸಭೆ ಪ್ರವೇಶಿಸಿದ್ದಾರೆ. ಆದ್ರೆ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧೆಗಿಳಿಸಿದ್ದ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ 35 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ 224 ಸದಸ್ಯಬಲವಿದ್ದು, ಇದರಲ್ಲಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ನಿಧನರಾಗಿದ್ದಾರೆ. ಹೀಗಾಗಿ 223 ಶಾಸಕರು ಮತ ಚಲಾಯಿಸಬಹುದಿತ್ತು. ಆದ್ರೆ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ವಿಪ್‌ ನಡುವೆಯೂ ಮತದಾನಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಒಟ್ಟು 222 ಶಾಸಕರು ಮತ ಚಲಾಯಿಸಿದ್ದಾರೆ. ಇದರಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಡ್ಡ ಮತದಾನ ಮಾಡಿದ್ದು, ಅವರ ಮತ ಕಾಂಗ್ರೆಸ್‌ ಪಾಲಾಗಿದೆ.

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ಕಾಂಗ್ರೆಸ್‌ಗೆ 5 ಹೆಚ್ಚುವರಿ ಮತ;

ಕಾಂಗ್ರೆಸ್‌ಗೆ 5 ಹೆಚ್ಚುವರಿ ಮತ; ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 135 ಸದಸ್ಯಬಲವಿತ್ತು. ಇದರಲ್ಲಿ ರಾಜಾವೆಂಟಕಪ್ಪ ನಾಯಕ ಸಾವನ್ನಪ್ಪಿದ್ದರಿಂದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಬಲ 134 ಸ್ಥಾನಗಳಿದ್ದವು. ಆದ್ರೆ ಕಾಂಗ್ರೆಸ್‌ ಪಕ್ಷದ ಮೂರೂ ಅಭ್ಯರ್ಥಿಗಳಿಗೆ ಒಟ್ಟು 139 ಮತಗಳು ಚಲಾವಣೆಯಾಗಿವೆ. ಅಂದರೆ ಐದು ಮತಗಳು ಹೆಚ್ಚಿಗೆ ಕಾಂಗ್ರೆಸ್‌ಗೆ ಚಲಾವಣೆಯಾಗಿದ್ದು, ಅದರಲ್ಲಿ ನಾಲ್ವರು ಪಕ್ಷೇತರರು ಹಾಗೂ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಮತ ಸೇರಿದೆ.

ಇದನ್ನೂ ಓದಿ; ನಿಂಬೆ ರಸ ಸೇವನೆ ಒಳ್ಳೆಯದೇ..?; ಬೇಸಿಗೆಯಲ್ಲಿ ಹೆಚ್ಚು ನಿಂಬೆ ಸೇವಿಸೀರಿ ಹುಷಾರ್‌!

ಬಿಜೆಪಿ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ವಿಧಾನಸಭಾ ಫಲಿತಾಂಶ ಬಂದಾಗಿನಿಂದಲೂ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದರು. ಎಸ್‌.ಟಿ.ಸೋಮಶೇಖರ್‌ ಅವರಂತೂ ಕಾಂಗ್ರೆಸ್‌ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಇಬ್ಬರೂ ಕಾಂಗ್ರೆಸ್‌ ಸೇರುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಅವರು ಕಾಂಗ್ರೆಸ್‌ ಸೇರೋದು ಕನ್ಫರ್ಮ್‌ ಆಗಿದೆ. ಇಬ್ಬರೂ ಶಾಸಕರು ವಿಪ್‌ ಉಲ್ಲಂಘನೆ ಮಾಡಿದ್ದು, ಬಿಜೆಪಿ ಇಬ್ಬರನ್ನೂ ಪಕ್ಷದಿಂದ ಉಚ್ಛಾಟನೆ ಮಾಡಲು ಮುಂದಾಗಿದೆ. ಈ ನಡುವೆ ಈ ಇಬ್ಬರೂ ಶಾಸಕರು ಶೀಘ್ರದಲ್ಲೇ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

 

Share Post