BengaluruPolitics

ಬೆಸ್ಕಾಂನಿಂದ ದಂಡ ವಿಚಾರ; ಮಹಜರ್‌ ಕಾಪಿ ಕೇಳಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು; ದೀಪಾವಳಿ ಹಬ್ಬದ ದಿನ ಮಾಜಿ ಸಿಎಂ ಕುಮಾರಸ್ವಾಮಿಯವರ ಜೆಪಿ ನಗರದ ನಿವಾಸಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಇದಕ್ಕೆ ಅನಧಿಕೃತವಾಗಿ ಕಂಬದಿಂದ ನೇರವಾಗಿ ವಿದ್ಯುತ್‌ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಬೆಸ್ಕಾಂ ಅಧಿಕಾರಿಗಳು, ಕುಮಾರಸ್ವಾಮಿಯವರಿಗೆ 68 ಸಾವಿರದ 526 ರೂಪಾಯಿ ದಂಡ ವಿಧಿಸಿದ್ದಾರೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಷ್ಟು ಮೊತ್ತ ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿಯವರು, ಬೆಸ್ಕಾಂನವರು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ 2.5 ಕಿ.ವ್ಯಾ ಬಳಕೆ ಆಗಿದೆ. ಹೀಗಿದ್ದರೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ. ನಮ್ಮ ಮನೆಗೆ 33 ಕಿಲೋ ವ್ಯಾಟ್ ವಿದ್ಯುತ್​​ ಬಳಕೆಗೆ ಅನುಮತಿ ಇದೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂ. ಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಇನ್ನು ಲಲು ಮಾಲ್‌ಗೆ ಬಳಸಿದ ಕರೆಂಟ್‌ ಬಗ್ಗೆ ಕೂಡಾ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ಈ ಹಿಂದೆ ಲುಲು ಮಾಲ್​​​ ಕಾಮಗಾರಿ ವೇಳೆ ಕರೆಂಟ್​ ಬಿಲ್ ನೀಡಿಲ್ಲ. ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ಬಿಲ್‌ ನೀಡಿಲ್ಲ. ಲುಲು ಮಾಲ್​ ಬಳಕೆ ಮಾಡಿದ ವಿದ್ಯುತ್​​​​​ ಬಿಲ್​ಗೆ ದಂಡ ಹಾಕುತ್ತೀರಾ?ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Share Post