Cinema

Ramcharan; ಬಾಲಿವುಡ್‌ಗೆ ಹಾರಲಿದ್ದಾರಂತೆ ಚಿರಂಜೀವಿ ಪುತ್ರ ರಾಮ್‌ಚರಣ್‌!

ಹೈದರಾಬಾದ್‌; RRR ಚಿತ್ರದ ಮೂಲಕ ಜಗತ್ತಿನಾದ್ಯಂತ ಹೆಸರು, ಖ್ಯಾತಿ ಗಳಿಸಿದ್ದ ತೆಲುಗಿನ ಸ್ಟಾರ್‌ ನಟ ರಾಮ್‌ ಚರಣ್‌ ತೇಜ್‌ (Ramcharan tej) ಈಗ ಬಾಲಿವುಡ್‌ಗೆ (Bollywood) ಹಾರಲು ರೆಡಿಯಾಗಿದ್ದಾರೆ. ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ (Megastar chiranjeevi Son) ಪುತ್ರ ರಾಮ್‌ ಚರಣ್‌ ತೇಜ್‌ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮಾತುಕತೆಗಳು ನಡೆದಿದ್ದು, ರಾಮ್‌ ಚರಣ್‌ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಚಿತ್ರ ಸೆಟ್ಟೇರುತ್ತೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ; Maheshbabu daughter Sitara; ನಟ ಮಹೇಶ್‌ ಬಾಬು ಪುತ್ರಿ ಸಿತಾರಾ ಫೋಟೋ, ವಿಡಿಯೋ ದುರ್ಬಳಕೆ

ಕಾದಂಬರಿ ಆಧಾರಿತ ಚಿತ್ರದಲ್ಲಿ ರಾಮ್‌ ಚರಣ್‌ ತೇಜ್‌!;

ಕಾದಂಬರಿ ಆಧಾರಿತ ಚಿತ್ರದಲ್ಲಿ ರಾಮ್‌ ಚರಣ್‌ ತೇಜ್‌!; ಸಂಜಯ್‌ಲೀಲಾ ಬನ್ಸಾಲಿ ಚಿತ್ರ ಅಂದ್ರೆ ಹೇಳೊದೇ ಬೇಕಾಗಿಲ್ಲ. ಅವರ ಚಿತ್ರಗಳಲ್ಲಿ ಅದ್ದೂರಿತನ ಇರುತ್ತದೆ. ಕೋಟಿ ಕೋಟಿ ಸುರಿಯಲಾಗುತ್ತದೆ. ವೈಭವದಿಂದ ಚಿತ್ರೀಕರಣ ಮಾಡಲಾಗುತ್ತದೆ. ಇಂತಹ ಅದ್ದೂರಿ ಚಿತ್ರ ನಿರ್ದೇಶಕನ ಚಿತ್ರದಲ್ಲಿ ರಾಮ್‌ ಚರಣ್‌ ನಟಿಸುತ್ತಿದ್ದಾರಂತೆ. ಹೀಗಾಗಿ ಈ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ.
ಅಂದಹಾಗೆ, ಈ ಚಿತ್ರ ಕಾದಂಬರಿ ಕತೆ ಆಧಾರಿತ ಎಂದು ತಿಳಿದುಬಂದಿದೆ. ಅಮಿಶ್ ಅವರ ‘ದಿ ಲೆಜೆಂಡ್ ಆಫ್ ಸುಹೇಲ್ದೇವ್’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಕತೆ ಬರೆಯಲಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ, ರಜಪೂತ ಯೋಧ ಸುಹೇಲ್ದೇವ್ ಬರ್ಹಾಜ್ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Sovereign Gold Bond; ಇವತ್ತಿಂದ ಸಾವರಿನ್‌ ಗೋಲ್ಡ್‌ ಬಾಂಡ್‌ ಖರೀದಿಸಲು ಅವಕಾಶ; 4 ದಿನ ಮಾತ್ರ ಟೈಂ!

ಮಗಧೀರದಿಂದ ಹೆಸರು ಮಾಡಿದ ರಾಮ್‌ ಚರಣ್‌!;

ಮಗಧೀರದಿಂದ ಹೆಸರು ಮಾಡಿದ ರಾಮ್‌ ಚರಣ್‌!; ರಾಮ್‌ ಚರಣ್‌ ತೇಜ್‌, ತಂದೆ ಚಿರಂಜೀವಿಯಂತೆ ಒಳ್ಳೆಯ ಡ್ಯಾನ್ಸರ್‌.. ಅವರ ಡ್ಯಾನ್ಸ್‌ಗೆ ಮನಸೋಲದವರೇ ಇಲ್ಲ. ಅದರಲ್ಲೂ ಆರ್‌ಆರ್‌ಆರ್‌ ಚಿತ್ರದಲ್ಲಿನ ಅವರ ಡ್ಯಾನ್ಸ್‌ಗೆ ಇಡೀ ಪ್ರಪಂಚವೇ ಫಿದಾ ಆಗಿದೆ. ಆಸ್ಕರ್‌ ಫಿಲಂ ಅವಾರ್ಡ್ಸ್‌ ಫಂಕ್ಷನ್‌ನಲ್ಲೂ ರಾಮ್‌ ಚರಣ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಜೋಡಿ ಡ್ಯಾನ್ಸ್‌ ಮಾಡಿ ಎಲ್ಲರನ್ನೂ ರಂಜಿಸಿದ್ದಾರೆ. ರಾಮ್‌ ಚರಣ್‌ ಅವರು ಮಗಧೀರ ಚಿತ್ರದಿಂದ ಸಾಕಷ್ಟು ಜನಪ್ರಿಯರಾದರು. ತಂದೆ ಚಿರಂಜೀವಿಯಷ್ಟೇ ಫ್ಯಾನ್‌ ಫಾಲೋಯಿಂಗ್‌ ಹೊಂದಿರುವ ನಟ ಅವರು.

ಇದನ್ನೂ ಓದಿ; Brain Therapy; ʻಏ ಮೇರೆ ವತನ್‌ʼ ಹಾಡಿನಿಂದ ಬ್ರೇನ್‌ ಸ್ಟ್ರೀಕ್‌ಗೆ ಚಿಕಿತ್ಸೆ; ಏನಿದು ಮ್ಯೂಸಿಕ್‌ ಥೆರಪಿ?

ಶೀಘ್ರದಲ್ಲೇ ಬರಲಿದೆ ಗೇಮ್‌ ಚೇಂಜರ್‌;

ಶೀಘ್ರದಲ್ಲೇ ಬರಲಿದೆ ಗೇಮ್‌ ಚೇಂಜರ್‌; ರಾಮ್‌ ಚರಣ್‌ ಅವರು ಗೇಮ್ ಚೇಂಜರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ ತೆರೆಗೆ ಅಪ್ಪಳಿಸಿದೆ. ಅದಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚಿತ್ರತಂಡ ಕೂಡಾ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಈ ನಡುವೆ ರಾಮ್‌ ಚರಣ್‌ ತೇಜ್‌ ಬಾಲಿವುಡ್‌ಗೆ ಹಾರುತ್ತಾರೆಂಬ ಸುದ್ದಿ, ಅಭಿಮಾನಿಗಳಿಗೆ ಮತ್ತಷ್ಟು ಸಂತಸ ತರಿಸಿದೆ.

Share Post