Politics

Budget Session; ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ; ಪ್ರತಿಪಕ್ಷಗಳ ಅಸ್ತ್ರಗಳೇನು..?

ಬೆಂಗಳೂರು; ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್‌ ಅಧಿವೇಶನ (Budget Session) ಶುರುವಾಗಲಿದೆ. ಇಂದಿನಿಂದ ಸುಮಾರು 11 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಫೆಬ್ರವರಿ 23ರಂದು ಅಧಿವವೇಶನ ಮುಗಿಯಲಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಜೊತೆಗೆ ಕಾಂಗ್ರೆಸ್‌ ಆಡಳಿತಕ್ಕೆ ಬಂದ ಮೇಲೆ ಬರೀ ಗ್ಯಾರೆಂಟಿಗಳಿಗೆ ಹಣ ಹೊಂದಿಸುವುದರಲ್ಲೇ ಕಾಲಕಳೆದುಬಿಟ್ಟಿದೆ. ಹೀಗಾಗಿ, ಈ ಬಜೆಟ್‌ಗಳಲ್ಲಿ ಏನೆಲ್ಲಾ ಘೋಷಣೆಗಳಾಗುತ್ತವೆ ಎಂಬುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಜೊತೆಗೆ ಆರೋಪ ಪ್ರತ್ಯಾಪರೋಪಗಳಿಗೂ ಎರಡೂ ಕಡೆಯವರಿಗೆ ಸಾಕಷ್ಟು ಅಸ್ತ್ರಗಳಿವೆ.

ಇದನ್ನೂ ಓದಿ; Amith sha; ಜೆಡಿಎಸ್‌ ಮೈತ್ರಿಗೆ ಬಗ್ಗೆ ಅಪಸ್ವರ; ಎಚ್ಚರಿಕೆ ಕೊಟ್ಟ ಅಮಿತ್‌ ಶಾ!

ಇಂದು ಜಂಟಿ ಅಧಿವೇಶ ಉದ್ದೇಶಿಸಿ ರಾಜ್ಯಪಾಲರ ಭಾಷಣ;

ಇಂದು ಜಂಟಿ ಅಧಿವೇಶ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಇಂದು ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಶುರುವಾಗಿದೆ. ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಭಾಷಣ ಮಾಡಲಿದ್ದಾರೆ. ಸರ್ಕಾರ ಬಂದಾಗಿನಿಂದ ಏನೆಲ್ಲಾ ಅಭಿವೃದ್ಧಿ ಆಗಿದೆ. ಯಾವೆಲ್ಲಾ ಯೋಜನೆಗಳನ್ನು ಘೋಷಿಸಲಾಗಿದೆ. ಯಾವ್ಯಾವು ಗ್ಯಾರೆಂಟಿ ಅನುಷ್ಠಾನವಾಗಿವೆ ಎಂಬುದರ ಕುರಿತು ರಾಜ್ಯಪಾಲರು ಮುನ್ನೋಟವನ್ನು ನೀಡಲಿದ್ದಾರೆ. ಅನಂತರ ಮೃತ ಜನಪ್ರತಿನಿಧಿಗಳಿಗೆ ಸಂತಾಪ ಸೂಚಿಸಲಾಗುತ್ತದೆ. ನಾಳೆಯಿಂದ ಕಾರ್ಯಕಲಾಪಗಳು ನಡೆಯಲಿವೆ.

ಇದನ್ನೂ ಓದಿ; Siddaramaiah; ಮಿಸ್ಟರ್‌ ಶಾ ರಾಜ್ಯಕ್ಕೆ ಬರಿಗೈಲಿ ಬಂದಿದ್ದಾರೆ; ಸಿದ್ದರಾಮಯ್ಯ

ನಾಳೆಯಿಂದ ರಾಜ್ಯಪಾಲರ ಭಾಷಷದ ಮೇಲೆ ಚರ್ಚೆ;

ನಾಳೆಯಿಂದ ರಾಜ್ಯಪಾಲರ ಭಾಷಷದ ಮೇಲೆ ಚರ್ಚೆ; ಇಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಾಳೆಯಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ. ಇದರ ನಡುವೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಲು ವಿರೋಧ ಪಕ್ಷಗಳು ರೆಡಿಯಾಗಿವೆ. ಈ ಹಿಂದಿನ ಸೆಷನ್‌ಗಳಲ್ಲಿ ವಿಪಕ್ಷ ನಾಯಕರಿರಲಿಲ್ಲ. ಈಗ ವಿಪಕ್ಷ ನಾಯಕನನ್ನು ಘೋಷಣೆ ಮಾಡಲಾಗಿದೆ. ಆರ್‌.ಅಶೋಕ್‌ ಅವರು ವಿಪಕ್ಷ ನಾಯಕ ಸ್ಥಾನವನ್ನು ಅಲಂಕರಿಸಿದ್ದಾರೆ. ಜೊತೆ ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷಗಳೂ ಒಂದಾಗಿವೆ. ಹೀಗಾಗಿ ಎರಡೂ ಪಕ್ಷಗಳು ಒಂದಾಗಿ ಸರ್ಕಾರದ ಮೇಲೆ ಮುಗಿ ಬೀಳಲು ಸಿದ್ಧವಾಗಿವೆ.

ಸರ್ಕಾರದ ವಿರುದ್ಧ ಆರೋಪಕ್ಕೆ ವಿಪಕ್ಷಗಳ ಸಜ್ಜು;

ಸರ್ಕಾರದ ವಿರುದ್ಧ ಆರೋಪಕ್ಕೆ ವಿಪಕ್ಷಗಳ ಸಜ್ಜು; ಹಾನಗಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣ, ಕೆರಗೋಡು ಹನುನ ಧ್ವಜ ತೆಗೆಸಿದ ಪ್ರಕರಣ, ಗುತ್ತಿಗೆದಾರರಿಂದ ಸರ್ಕಾರದ ವಿರುದ್ಧ ಲಂಚ ಆರೋಪ, ಗ್ಯಾರೆಂಟಿಗಳ ಹೆಸರಲ್ಲಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸದೇ ಇರೋದು, ಅನುದಾಣ ಹಂಚಿಕೆಯಲ್ಲಿ ತಾರತಮ್ಯ, ಬರ ಪರಿಹಾರ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸದನದಲ್ಲಿ ಹೋರಾಟ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ; Maheshbabu daughter Sitara; ನಟ ಮಹೇಶ್‌ ಬಾಬು ಪುತ್ರಿ ಸಿತಾರಾ ಫೋಟೋ, ವಿಡಿಯೋ ದುರ್ಬಳಕೆ

ಫೆಬ್ರವರಿ 16ರಂದು ರಾಜ್ಯ ಬಜೆಟ್‌ ಮಂಡನೆ;

ಫೆಬ್ರವರಿ 16ರಂದು ರಾಜ್ಯ ಬಜೆಟ್‌ ಮಂಡನೆ; ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ. ಅತಿಹೆಚ್ಚು ಬಜೆಟ್‌ ಮಂಡನೆ ಮಾಡಿರುವ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರ ಬಜೆಟ್‌ ಬಗ್ಗೆ ಎಲ್ಲರಿಗೂ ಕುತೂಹಲ ಅಂತೂ ಇದ್ದೇ ಇದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸೀಟು ಗೆಲ್ಲುವ ಅನಿವಾರ್ಯತೆ ಇದೆ. ಹೀಗಾಗಿ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್‌ ಘೋಷಿಸುವ ಸಾಧ್ಯತೆ ಇದೆ.

Share Post