CinemaCrimeNational

ಸುಕೇಶ್‌ ಚಂದ್ರಶೇಖರ್‌ಗೆ ಸೇರಿದ ಐಶಾರಾಮಿ ಕಾರುಗಳನ್ನು ಹರಾಜಿಗಿಟ್ಟ ಐಟಿ ಇಲಾಖೆ

ಬೆಂಗಳೂರು; ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಅಂತ ಹೇಳಿ ನೂರಾರು ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ನಿಂದ ವಶಪಡಿಸಿಕೊಂಡ ಐಶಾರಾಮಿ ಕಾರುಗಳನ್ನು ಹರಾಜಿಗಿಡಲಾಗಿದೆ. ಆದಾಯ ತೆರಿಗೆ ಇಲಾಖೆ ಈ ಕಾರುಗಳನ್ನು ಹರಾಜಿಗಿಟ್ಟಿದ್ದು, ನವೆಂಬರ್‌ 28ರಂದು ಕಾರುಗಳ ಹರಾಜು ಹಾಕಲಾಗುತ್ತದೆ. 

BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಕಾರುಗಳನ್ನು ಸುಕೇಶ್‌ನಿಂದ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಈ ಕಾರುಗಳನ್ನು ಹರಾಜು ಮಾಡಲಾಗುತ್ತಿದೆ. ಸುಕೇಶ್​ ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು. ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಅಂತ ಹೇಳಿ ನೂರಾರು ಕೋಟಿ ವಂಚಿಸಿದ್ದರು. ರ್ಯಾನ್ ಬ್ಯಾಕ್ಸಿ ಔಷಧ ಕಂಪನಿ ಪ್ರವರ್ತಕರಿಗೆ ಜಾಮೀನು ಕೊಡಿಸೋದಾಗಿ 200 ವಂಚನೆ ಮಾಡಿದ್ದರು. ಹೀಗೆ ಹಲವು ಆರೋಪಗಳು ಸುಕೇಶ್‌ ಮೇಲಿದ್ದು, ಆತ ಈಗ ದೆಹಲಿಯ ಜೈಲಿನಲ್ಲಿದ್ದಾನೆ.

ಒಟ್ಟು 12 ಕಾರುಗಳನ್ನು ನವೆಂಬರ್‌ 28ರಂದು ಹರಾಜು ಹಾಕಲಾಗುತ್ತಿದೆ.

 

Share Post